ಎನ್ನ ಜೀವನದುಸಿರು ಈ ಮಣ್ಣು ಎನ್ನ ಬಾಳಿನ ಕಡಲು ಈ ಹೆಣ್ಣು ಎನ್ನ ನೋಟದ ಹೊನಲು ಈ ಕಣ್ಣು ಎನ್ನ ಮಾತಿನ ಬಣ್ಣ ಎನ್ನ ದೀಪ್ತಿಯ ರನ್ನ ಕೊಡಗು ನಾಡಿನ ಚೆನ್ನ ಇದು ನಮ್ಮ ಬೀಡು ಈ ಚೆಲುವ ನಾಡು. ಅಲ್ಲಿ ಆ ಬೊಮ್ಮಗಿರಿ ಇಲ್ಲಿ ಈ ಪುಷ್ಪಗಿರಿ ಆಗಸಕೆ ನೆಗೆಯ...

ಹೇಳಿರೇ ಕೆಳದಿಯರೇ ಕನಸ ಕಂಡಿರೇನೆ ರಾಮನ ಇಲ್ಲ ರಾಜಕುಮಾರನ ಎದೆಯಲ್ಲಿ ಕನಸಿನ ಬೀಜಗಳ ಒತ್ತಾಗಿ ಬಿತ್ತಿ ಒಡೆತನವ ಸಾಧಿಸಿದಿರೇನೆ? ಎಚ್ಚರಿಕೆಯಿಂದ ದಾರಿಯಲಿ ಪರೀಕ್ಷಿಸಿ ಹೆಜ್ಜೆ ಇಟ್ಟರೂ ಚುಚ್ಚುವ ಸಾವಿರಾರು ಮುಳ್ಳುಗಳು ನೋವು ಯಾತನೆಗಳಿಗೆ ಸ್ತ್ರೀ...

ಎತ್ತು ಕಟ್ಟಿದೆ ಲಾಂದ್ರವುರಿಸಿದೆ ಗಾಡಿ ಹೊರಟಿದೆ ಸಂಜೆಗೆ ಎಲ್ಲಿಗೆಂದು ತಿಳಿಯದೇ ಎಲ್ಲಿ ಮುಟ್ಟಿತಲ್ಲಿಗೆ ಏರಿಯಲಿ ಏರುತಿರಲಿ ಇಳಿಜಾರಿನಲಿ ಇಳಿಯುತಿರಲಿ ಬಟ್ಟಬಯಲ ಕಾಡು ದಾರಿ ತಿರುವುಗಳಲಿ ತಿರುಗುತಿರಲಿ ಹಾಡೊ ಗಾಡಿಗಾರ ಆ ಎತ್ತುಗಳಿಗೆ ಹೊಡೆಯದೇ...

ಜಪಾನ್ ದೇಶವು ಚಿಕ್ಕದಾದರೂ ವೈಜ್ಞಾನಿಕವಾಗಿ ಬಹಳ ಶ್ರೇಷ್ಠ ಮಟ್ಟದಲ್ಲಿದೆ. ಪ್ರತಿದಿನವೂ ಅಲ್ಲಿ ವೈಜ್ಞಾನಿಕವಾಗಿ ಏನಾದರೊಂದು ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕಾರು ತಯಾರಿಕೆಯಲ್ಲಿ ಬಹಳ ಕಾಲದಿಂದಲೂ ಮೊದಲ ಸ್ಥಾನಗಳಲ್ಲಿ ಇದೆ. ಪುಟಾಣಿ ಗಾತ...

ಕತ್ತಲೆ ಬೇಕು ಕತ್ತಲೆ ಬೇಕು ಜಗವಽ ಕಾಣಲು ಜೊತೆಗೆ ಕೊಂಚ ಎಣ್ಣೆ ಬೇಕು ತತ್ವ ಬೆಳೆಗಲು ನಾನು ಯಾರು ನೀನು ಯಾರು ಹುಟ್ಟುವ ಮೊದಲು ನಂತರವು ನಡುವೆ ಯಾಕೆ ಹೇಳು ಗುರುವೆ ನೂರು ಥರ ಒಯ್ಯಾರವು ನನಗೆ ಹೊಟ್ಟೆ ಒಂದು ಗೇಣು ನಿನಗೂ ಅಷ್ಟೇ ಕೇಳು ನನಗೆ ಮಾತ್...

ಎಷ್ಟೊಂದು ಮೆಟ್ಟಿಲುಗಳು ಹತ್ತಲಾರದ ಕಾಲುಗಳಿಗೆ ಸಪಾಟಾಗಿರಬಾರದಿತ್ತೆ ಈ ನೆಲ? ಇದೇಕೆ ಹೀಗೆ ಅಂಕು ಡೊಂಕಾಗಿದೆ ಕಷ್ಟ ಕಷ್ಟ ಎಂದು ಎಚ್ಚರಿಸುತ್ತಿದೆ ಸೌಧಕ್ಕೆ ಪ್ರೇಮ ಸೌಧಕ್ಕೆ ಎಷ್ಟೊಂದು ಒಟ್ಟಿಲುಗಳು ಹತ್ತಲಾರದ ಕಾಲುಗಳಿಗೆ *****...

ಅವರು ಕಾಲುಗಳು ಸೋಲುವ ತನಕ ಬೆಂಬತ್ತಿ ಹೋದರು. ಕೈಗಳು ಸೋಲುವ ತನಕ ಗುಂಡು ಹಾರಿಸಿದರು. ಕಣ್ಣುಗಳು ಸೋಲುವ ತನಕ ಕಿಡಿಗಳ ಕಾರಿದರು. ನಾಲಗೆ ಸೋಲುವ ತನಕ ನಿಂದೆಯ ಸುರಿಮಳೆಗೈದರು. ಹೃದಯ ತುಂಬಿ ಬಂದ ದಿನ ಮಮ್ಮಲ ಮರುಗಿದರು ಗೆದ್ದರು… ***** ಗ...

ಉಡುಪಿಯ ಅಜ್ಜರಕಾಡಿನ ತಮ್ಮ ಸ್ವಂತ ಮನೆಯಲ್ಲಿ ಸಂಜೀವ ಮಾಸ್ತರು ತಮ್ಮ ಪತ್ನಿಯೊಡನೆ, ತಮ್ಮ ನಿವೃತ್ತ ಜೀವನವನ್ನು ಆರಾಮವಾಗಿಯೇ ಕಳೆಯುತ್ತಿದ್ದರು. ಶಿಕ್ಷಕರಾಗಿದ್ದ ಅವರಿಗೆ ಸುಮ್ಮನಿರುವುದು ಸಾಧ್ಯವಾಗದೆ ಲೆಕ್ಕಮಾಡಿ ಹತ್ತು ಮಕ್ಕಳಿಗೆ ಪಾಠ ಹೇಳುತ್...

ಮನ ಬಯಸುತಿದೆ ಕಂಗಳು ತವಕಿಸುತಿವೆ ಸಮಾಜದ ಮಾನ ಸಂಮಾನಕೆ ನಿನ್ನಾ ಹುಡುಕಿದೆ ಅಗಣಿತ ತಾರಾ ಮಂಡಲಗಳ ನಡುವೆ ಚೆಲುವು ಮುದ್ದಿನ ರಚನೆಯೇ ಹೃದಯೋಕ್ತಿಯನು ನುಡಿಯುತ ಮಾಡಿದೆ ನೀ ಎನ್ನ ಮರುಳ ನಿನ್ನಾ ಚಿತ್ರವೇ ಮನ ಮನದ ಪುಟದೊಳು ಕ್ಷಣ ಕ್ಷಣಕು ಬಿಂಬಿಸಿ ...

1...13141516

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...