ಆ ಹಳೇ ಮರದ ಬೇರುಗಳು ನನ್ನ ಎದೆಯ ಗೂಡಿನೊಳಗೆ ಇಳಿದು ಭಾಷೆ ಪರಿಭಾಷೆಯಾಗಿ ಸಂವತ್ಸರಗಳು ಉರುಳಿ ಓದುತ್ತಿರುವ ಅಕ್ಷರಗಳು, ಸಾಕ್ಷಿಯಾಗಿವೆ ಕವಿತೆಗಳು. ದಟ್ಟ ನೆರಳಿನ ಬೇವಿನ ಬಡ್ಡಿಗೆ ಒರಗಿದ ಅವ್ವನ ಬೆವರ ಹನಿಗಳು ಇಂಗಿ ನೀಲಿ ಆಕಾಶದ ತುಂಬ ಬದುಕಿನ ...

ನನ್ನ ಕನಸಿನ ಭಾವನೆ ತಾಯ ನುಡಿಗಳ ಧಾರಣೆ ಮುಗಿಲೆತ್ತರದ ಕಾಮನೆ ಭೂಮಿಗಿಳಿದ ಧಾಮನೆ ಎಲ್ಲೆಲ್ಲೂ ಮೂಡಿಹುದು ಚಿತ್ತಾಕಾರ ಸಂಚರಿಸುತಿಹುದೆ ಸತ್ಯಾಕಾರ ಭುಗಿಲೆದ್ದಿಹುದು ಮಿಥ್ಯಾಕಾರ ಅಪಸ್ವರಗಳ ಆಹಾಕಾರ ಕೇಳುತಿಹಳು ತಾಯಿ ಒಡಲ ದನಿಗಳ ಮಮಕಾರ ಎಂದಿಗೆ ಮ...

ಬಾಳೊಂದು ತೊರೆದು ಆಚೆ ಬಾ ದೇವರ ಪಾದದಲ್ಲಿ ಕರಗಿಹೋಗು ಪರಮಾತ್ಮನ ಧ್ಯಾನದಲ್ಲಿ ನೀನು ಪಡೆದುಕೊ ಮುಕ್ತಿಯೆಂಬ ಜೇನು ಹೆರವರ ಭಾವಗಳು ನಾವೇಕೆ ತಿದ್ದಬೇಕು ಹೆರವರ ಅನುಭಾವ ನಮಗೇಕೆ ಬೇಕು ನಿಂದೆ ಯಾಡುವುದು ಹೀನತನದ ವ್ಯಕ್ತಿತ್ವ ಪಡೆದುಕೊ ಅಮರನಾಗಿ ಪರ...

ದೇವಾಲಯ ಪ್ರವೇಶಕ್ಕೆ ಉಭಯ ಕಡೆಯಿಂದಲೂ ನಿಶ್ಚೈಸಲ್ಪಟ್ಟ ಮುಹೂರ್ತವು ರಾತ್ರಿ ಕಾಲವಾಗಿತ್ತು. ಇದು ಪುಂಡಾಟಕೆ ನಡೆಸಲಿಕ್ಕೆ ಹೆಚ್ಚು ಅನುಕೂಲವಾದ ಸಮಯವಾದುದರಿಂದ ಉಭಯ ಪಕ್ಷದವರು ತಮ್ಮ ಪಂಥ ಕೈಗೂಡುವದಕ್ಕೆ ಹೆಚ್ಚು ಅಭ್ಯಂತರವಿರದೆಂದು ಗ್ರಹಿಸಿಕೊಂಡರ...

ಅಗ್ನಾಯಿ ! ಇನ್ನು ಆಲಿಂಗಿಸೆನ್ನ ಓ ಜಾತವೇದಜಾಯೆ ಗಂಧ-ಪಕಳೆಗಳು ಎಂದೊ ಉರುಳಿದವು ಕೊಂಬೆ ಕಾಮಮಾಯೆ ತೆಕ್ಕೆಯಲ್ಲಿ ಮುತ್ತೆನ್ನ ಜೀವನವ ಜ್ಯೋತಿಲಲಿತೆ ನಲ್ಲೆ ! ಬಯಕೆ ಸುಟ್ಟೆ ಆ ದುಗುಡ ಬಿಟ್ಟೆ ಹಿ- ಗ್ಗನ್ನು ತಾಳಬಲ್ಲೆ ಮೋದಮೂರ್ತಿ ! ಪುಲಕಿಸುತ ಬಾ...

ನಿನ್ನನರಿಯುವ ಅರಿವ ಚೆನ್ನ ನನಗೀಯುವುದು, ನನ್ನ ಈ ಬಯಕೆಯನು ಹಣ್ಣಿಸೈ ನೀನೊಲಿದು ! ೧ ಹೆರರು ತನ್ನವರೆಂಬ ಅರಿಕೆ ನಸುವಿಲ್ಲದೆಯೆ ನೆರೆದಿರುವ ಗರತಿಯರ ನೆರವಿಯನು ಕಡೆಗಣಿಸಿ, ತೊರೆದ ಮೊಲೆವಾಲುಣಿಸಿ ಹೊರೆಯುವಾ ತಾಯನ್ನು ಮರೆಯದೇ ಗುರುತಿಸುವ ಕಿರಿಯ...

ಸ್ನೇಹಕ್ಕಿರುವ ಶಕ್ತಿಯನು ಅಳೆಯಲಾಗದು| ಸ್ನೇಹಕ್ಕಿರುವ ಬಾಂಧವ್ಯವನು ಮುರಿಯಲಾಗದು|| ಸ್ನೇಹವೊಂದು ಮಧುರತೆಯು ಸ್ನೇಹವೊಂದು ಸಹೃದಯತೆಯು| ಸ್ನೇಹವೊಂದು ಪವಿತ್ರತೆಯ ಲಾಂಛನವು ಸ್ನೇಹವೊಂದು ವಿಶಾಲತೆಯು|| ಸ್ನೇಹವೊಂದು ಪುಣ್ಯ ಜೀವಿಯು ಬೆಸೆವುದದು ಸ್...

ಇತಿಹಾಸ ಪ್ರಸಿದ್ಧ ಊರಿಗೆ ಹೋದೆ; ಆ ಊರಿನ ಕರಿಯ ಹರಿದ ಬಾಳಿನ ಗೆಳೆಯ ತೋರಿಸಿದ ಒಂದೊಂದೇ ಸ್ಥಳ. ಕನಸು ಕಲ್ಲೊಳಗೆ ಮೂಡಿದ ಮೂರ್‍ತಿ ಭೂತ ಬೆಟ್ಟವಾದ ಕೋಟೆಯ ಕೀರ್‍ತಿ ಸೀತೆ ಸ್ನಾನ ಮಾಡಿದ ಪುರಾಣ ರಾಮ ತಂಗಿದ್ದ ಆವರಣ. ಎಲ್ಲ ನೋಡಿ ಎದುರುನಿಂತಿದ್ದ ಕ...

ಈಗಾಗಲೇ ಹದಿನೈದು ಕಾದಂಬರಿಗಳನ್ನೂ ಹತ್ತು ಕಥಾ ಸಂಕಲನಗಳನ್ನೂ ಪ್ರಕಟಿಸಿರುವ, ನವೋತ್ತರದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ, ಕುಂವೀ ಎಂದೇ ಪ್ರಸಿದ್ಧರಾದ ಕುಂ. ವೀರಭದ್ರಪ್ಪನವರ ಪ್ರಧಾನ ಆಸಕ್ತಿ ಕಥಾಸಾಹಿತ್ಯ ಎಂಬುದು ನಿರ್ವಿವಾದವಾದರೂ ಅವರು ಎರಡು ...

ಇರುವೆ ಇರುವೆ ಎಲ್ಲಿರುವೆ? ನೆಲದಲಿ ಹುತ್ತದಲಿ ನಾನಿರುವೆ ಸಣ್ಣನೆ ಕಪ್ಪನೆ ಇರುವೆ ನಿನಗೆ ಆಪರಿ ವೇಗವೇ? ಮೈಯಲಿ ಬುಳು ಬುಳು ಓಡುವೆ ಕಚ್ಚದೆ ಕರುಣೆಯ ತೋರುವೆ ರಾಜ ರಾಣಿ ಜೊತೆಗೆ ಸವಾರಿ ಅನ್ನವ ಅರಸುತ ಹೊರಡುವಿರಿ ಶಿಸ್ತಿನ ಶಿಪಾಯಿ ತರಹ ನಿಮ್ ಪರಿ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...