ಸ್ನೇಹಕಿರುವ ಶಕ್ತಿಯನು

ಸ್ನೇಹಕ್ಕಿರುವ ಶಕ್ತಿಯನು
ಅಳೆಯಲಾಗದು|
ಸ್ನೇಹಕ್ಕಿರುವ ಬಾಂಧವ್ಯವನು
ಮುರಿಯಲಾಗದು||

ಸ್ನೇಹವೊಂದು ಮಧುರತೆಯು
ಸ್ನೇಹವೊಂದು ಸಹೃದಯತೆಯು|
ಸ್ನೇಹವೊಂದು ಪವಿತ್ರತೆಯ ಲಾಂಛನವು
ಸ್ನೇಹವೊಂದು ವಿಶಾಲತೆಯು||

ಸ್ನೇಹವೊಂದು ಪುಣ್ಯ ಜೀವಿಯು
ಬೆಸೆವುದದು ಸ್ನೇಹಜೀವಿಗಳನು|
ಸ್ನೇಹವೊಂದು ಆತ್ಮೀಯತೆಯಭಾವವು
ಸ್ನೇಹವೊಂದು ತ್ಯಾಗದ ಸಂಕೇತವು||

ಸ್ನೇಹಕೆ ಜಾತಿ ಎಂಬುದಿಲ್ಲ
ಸ್ನೇಹಕೆ ಯಾವ ಎಲ್ಲೆಯದಿಲ್ಲ|
ಸ್ನೇಹ ನಿಸ್ವಾರ್‍ಥ ಹಣತೆಯಂತೆ
ಒಬ್ಬರು ಬತ್ತಿಯಾಗಿ ಇನ್ನೊಬ್ಬರು
ಎಣ್ಣೆಯಾಗಿ ಲೋಕಕೆ ಬೆಳಕನೀಡುವ
ರವಿಚಂದ್ರರಿರುವಂತೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಮಶಾನ
Next post ಬಯಕೆ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…