ಜೀವವಿದ್ದರೂ ನೆನಪಿಗೆ ಬಾರದು ಸವಿ ಸಂಭ್ರಮದಾ ಕ್ಷಣ ನಾವು ಹುಟ್ಟಿದಾಗ. ಜೀವವಿಲ್ಲದಿದ್ದರೂ ನೆನಪಿಗೆ ಬಾರದು ಶೋಕ ಸಂಭ್ರಮದಾ ಕ್ಷಣ ನಾವು ಸತ್ತಾಗ. ನೆನಪಿರದ ಆ ಕ್ಷಣ ನೆನಪಿರದ ಈ ಕ್ಷಣ ಮರುಕಳಿಸಲಾರವು ಇನ್ನೊಂದು ದಿನ. *****...

ನಲ್ಮೆಯ ಗೆಳತಿ, ನಾನು ಈ ದೇಶ ಬಿಟ್ಟು ಬಹು ದೂರ ಹೊರಟಿರುವೆ. ಮತ್ತೆ ನನ್ನ-ನಿನ್ನ ಭೇಟಿ ಆಗದೆ ಹೋಗಬಹುದು. ನಮ್ಮ ಸ್ನೇಹ ಅಮರ ನಿರ್ಮಲ ಪ್ರೇಮ ನಿರಂತರ ಒಡನಾಟದ ಸವಿ ನೆನಪು ಚಿರ ನೂತನ. ನಿನ್ನಿಂದ ನಾನೀಗ ಬಯಸುವುದು ನೂರು ರೂಪಾಯಿ ನಗದು! ನೀನು ಅದಕ...

“ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು ಯೋಗ್ಯತೆಯ ಪರೀಕ್ಷೆಗೆ ಕಳಿಸಿಕೊಟ್ಟರು. ಆ ಎರಡೂ ...

ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ ನಾನದನ ತಿ...

ಮಾಲಾ: “ನನ್ನ ಮಗನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್ ಡಾಕ್ಟ್ರೆ…” ಡಾ||ಗುರು: “ನಾನಲ್ಲ ಉಳಿಸಿದ್ದು ದೇವರು..” ಮಾಲಾ: “ಸರಿ ಬರ್‍ತಿವಿ ಡಾಕ್ಟ್ರೆ..” ಡಾ||ಗುರು: “ನನ್ನ ಫೀಸು ಕೊಟ್ಟಿಲ್...

ಸಭಾದಾಗ ಕೂತುಕೊಂಡು ಇವರು ನಮ್ಮ ಮೇಲೆ ಕಾನೂನು ಮಾಡ್ತಾರ, ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು ಓಟ ಕೇಳಲಿಕ್ಕೆ ಬರತಾರ. ನಮ್ಮ ಉದ್ಧಾರವೇ ತಮ್ಮ ಧೈಯ ಅಂತ ಹೇಳಿ ಘೋಷಣೆ ಕೊಡ್ತಾರ ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ. ನಾವು ಇವರಿಗೆ ಬ್ಯಾಡಂತ...

ಕೃಷಿಯೊಳ್ ಕಡು ವಿಷವ ಕಡೆಗಣಿಸಿ ಕಡುಸೊಪ್ಪನರೆದರದೊಂದು ಕಿರು ಹಂತ ಕರೆ ಕರೆದು ನಾ ಸಹಜ, ಶೂನ್ಯ, ಸಾವಯವ ಕೃಷಿ ಬೆಟ್ಟವೇರಿಹೆನೆಂದರದು ಕಾಲ ಹರಣ ಕಡು ಕಷ್ಟದೆತ್ತರದ ಹಂತಗಳನ್ನಿಹುದು ನೋಡಾ – ವಿಜ್ಞಾನೇಶ್ವರಾ *****...

ಹೊಲೆಯ ನಿಕೃಷ್ಟ ಮಣ್ಣಿನ ಮಗ ಮಣ್ಣಿನ ವಾಸನೆಗೆ ಹುಟ್ಟಿದ ತಪ್ಪಿಗೆ ಹುಟ್ಟಿದ ಮಣ್ಣಿನ ನೆಲವನ್ನೆ ದುರ್ಗಂಧಗೊಳಿಸಿ ತನ್ನ ಧೂರ್ತ ಮಹತ್ವಾಕಾಂಕ್ಷೆಗೆ ಉಸಿರು ಹೋಗುವ ಮೊದಲು ಕೆಂಪು ದುರ್ಗದ ತುದಿಯನ್ನೇರಿ ದೇಹ ಬಲ ಉಡುಗಿದ್ದರೂ ನೀತಿಗೆ ಕ್ಷಯ ಹಿಡಿದು ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...