ಹೊಲೆಯ ನಿಕೃಷ್ಟ
ಮಣ್ಣಿನ ಮಗ
ಮಣ್ಣಿನ ವಾಸನೆಗೆ
ಹುಟ್ಟಿದ ತಪ್ಪಿಗೆ
ಹುಟ್ಟಿದ ಮಣ್ಣಿನ ನೆಲವನ್ನೆ
ದುರ್ಗಂಧಗೊಳಿಸಿ
ತನ್ನ ಧೂರ್ತ ಮಹತ್ವಾಕಾಂಕ್ಷೆಗೆ
ಉಸಿರು ಹೋಗುವ ಮೊದಲು
ಕೆಂಪು ದುರ್ಗದ ತುದಿಯನ್ನೇರಿ
ದೇಹ ಬಲ ಉಡುಗಿದ್ದರೂ
ನೀತಿಗೆ ಕ್ಷಯ ಹಿಡಿದು
ಅಧಿಕಾರದ ಮದದಿಂದ, ಪದದೊರೆತ
ತುಷ್ಟಿಯ ತೊರೆಯುಕ್ಕಿ ತಾನು
ಸೆರೆ ಕುಡಿದ ಕಪಿಯಾದರೂ
ಜನತೆಗೆ ಕೊಡುವ ಸಂದೇಶವೆಂದು
ಬಾಯಿಗೆ ಬಂದುದನೊದರಿ-
ಈ ಕೆಲವು ದಿನಗಳ ಹಿಂದೆ
ಗಾಂಧೀ ಸಮಾಧಿಯ ಎದುರು
ತಾನು ಮಾಡಿದ ಪಣದ, ವೃಣದ ಮುಖಕ್ಕೆ
ರಾಡಿ ಎರಚು-
ಸ್ವರ್ಗದಲ್ಲಿರುವ ಗಾಂಧಿ
ಜನನಾಯಕನೆಂದು
ಜನರಿಗೆ ಟೋಪಿ ಹಾಕುವ
ಈ ಡೋಂಗಿ ಮಾಡಿದ
ಅಗಸತನಕ್ಕೆ ತುಕ್ಕು ಹಿಡಿದು
ದರಿದ್ರಗೊಂಡ ಅಧಪತನಕ್ಕೆ
ನಾಚಿ, ಕಂಬನಿಯ ತೊರೆಯನ್ನು
ಸುರಿಸುತ್ತಿರಬಹುದು –
ಅದರಲ್ಲಿ ಕಂತಿ ಈ ಪಾಖಂಡಿ
ನಿರ್ನಾಮಗೊಂಡಾಗ
ಮಣ್ಣಿನಂರಾಳದಲಿ ಹೂತು ಹೋದಾಗ
ಆರೋಗ್ಯಕರ ಮೊಳಿಕೆಯೊಂದು
ನೆಲಬಿರಿದು ಹೊರಬರುವುದು.
*****
Related Post
ಸಣ್ಣ ಕತೆ
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಬೆಟ್ಟಿ
ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…