ಏನೇನ್ ತುಂಬಿ

ತುಂಬಿ ತುಂಬಿ ಏನೇನ್ ತುಂಬಿ? ಮಲ್ಲಿಗೆ ಹೂವಿನ ಪರಿಮಳ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಸಂಪಿಗೆ ಹೂವಿನ ಕಂಪನು ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಗುಲಾಬಿ ಹೂವಿನ ಪನ್ನೀರ್ ತುಂಬಿ ತುಂಬಿ...

ಜಾಣ-ಕೋಣ

"ಎಲ್ಲಾ ತಿಂಡಿಯು ನನಗೇ ಬೇಕು ಎಲ್ಲಾ ಹಣ್ಣೂ ನನಗೇ ಬೇಕು ಆರಿಗು ಚೂರನು ಗೀರನು ಕೊಡೆನು" ಕೊಡೆನೆನ್ನುತ ಎಳ ಮಗ ಹರಮಾಡಿದನು. "ಅಣ್ಣನು ತಮ್ಮನು ಎಲ್ಲರು ಇರುವರು ಅಕ್ಕನು ತಂಗಿಯು ಎಲ್ಲರು ಇರುವರು ನಾನೂ...

ದೀಪಾವಳಿ ದಿನ

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ! ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?! ಆದಿಶೇಷನ ತೆರದಿ ಭುಸುಗುಟ್ಟುವೆ! ಕಣ್ಣು ಗುಡ್ಡೆ... ನಿಗಿ, ನಿಗಿ......

ಹೊದಿಕೆ ಹೊದಿಸೋಕೆ

ಕಿಟಕಿಯಲ್ಲಿ ಹಣಕಿದ್ದು ಹನಿಮೂನ್ ಗಂಡು ಹೆಣ್ಣನ್ನ ಕದ್ದು ನೋಡೋಕಲ್ಲ ಮಾರಾಯರೆ, ಹೇಳ್ತಿನಿ ಕೇಳಿ ಹೋದದ್ದು ಪಾಪ, ಬೆತ್ತಲೆ ಮಲಗಿದ್ದವರಿಗೆ ಬೆಳದಿಂಗಳ ಹೊದಿಕೆ ಹೊದಿಸೋಕೆ. *****

ಕನ್ನಡಿತಿ

ಆಗ ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು ಬಗೆಬಗೆಯಲಂಕಾರದದೊಡವೆಗಳನಿಟ್ಟು ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ, ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ, ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ...
ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

ಹೆಣ್ಣುಮಗುವಿಗೆ ಜನ್ಮವೆತ್ತ ಕಾರಣಕ್ಕಾಗಿ ಆ ಮಗುವನ್ನೇ ಕಣ್ಮರೆಯಾಗಿಸುವ ಅಥವಾ ಹೆಣ್ಣುಹೆತ್ತದ್ದಕ್ಕಾಗಿ ತಾಯಿಗೆ ಮಾನಸಿಕ ಹಿಂಸೆ ಕೊಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಕೇವಲ ಗಂಡು ಮಕ್ಕಳೆ ಡಜನ್‌ಗಟ್ಟಲೇ ಸೃಷ್ಟಿಯಾಗಿ ಒಂದಾದರೂ ಹೆಣ್ಣು ಮಗು ಇಲ್ಲ ಎಂದು!!...

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ. ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು. ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು ನೋಡುತ್ತಾ ಆಟ...

ಪ್ರಕೃತಿ ಜನ್ಯ

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ಏನಿದೆನ್ನುತ...