ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

ನಿಮಗೆ ಬೇಕಾದ ಮಗುವನ್ನು (ವಿಜ್ಞಾನದಿಂದ) ಪಡೆಯಬಹುದು

embryo-159690_960_720ಹೆಣ್ಣುಮಗುವಿಗೆ ಜನ್ಮವೆತ್ತ ಕಾರಣಕ್ಕಾಗಿ ಆ ಮಗುವನ್ನೇ ಕಣ್ಮರೆಯಾಗಿಸುವ ಅಥವಾ ಹೆಣ್ಣುಹೆತ್ತದ್ದಕ್ಕಾಗಿ ತಾಯಿಗೆ ಮಾನಸಿಕ ಹಿಂಸೆ ಕೊಡುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಕೇವಲ ಗಂಡು ಮಕ್ಕಳೆ ಡಜನ್‌ಗಟ್ಟಲೇ ಸೃಷ್ಟಿಯಾಗಿ ಒಂದಾದರೂ ಹೆಣ್ಣು ಮಗು ಇಲ್ಲ ಎಂದು!! ಪರಿತಪಿಸುವ ತಾಯಂದಿರರು ಇದ್ದಾರೆ. ಹೆಣ್ಣು ಅಥವಾ ಗಂಡು ಮಗು ಬೇಕು ಎನ್ನುವವರಿಗಾಗಿ ವಿಜ್ಞಾನವು ಇತ್ತೀಚೆಗೆ ಸಂಶೋಧನೆ ನಡೆಯಿಸಿ, ಪ್ರಯೋಗ ಮಾಡಿ ಯಶಸ್ವಿಯಾಗಿದೆ. ನಮಗೆ ಯಾವ ಮಗುಬೇಕೋ ಅದನ್ನು ಪಡೆಯುವ ಬಯಕೆಗಳಿಗೆ ಉತ್ತರ ಇಂದು ಸಿಕ್ಕಿದೆ.

ಚರ್ಮದ ಬಣ್ಣದಿಂದ ಆರಂಭಿಸಿ ಬುದ್ದಿಮತ್ತೆಯವರೆಗೂ ಎಲ್ಲ ಲಕ್ಷಣಗಳು ನಿರ್ಧಾರವಾಗುವುದು. ಪ್ರತಿಯೊಂದು ಜೀವಕೋಶಗಳಲ್ಲಿರುವ “ವಂಶವಾಹಿ”ಗಳೆಂಬ ಜಿನುಗು ಕಣಗಳಿಂದ. ಈ ಜಿನುಗು ಕಣಗಳು D.N.A ಮತ್ತು R.N.A. ಎಂಬ ಅತಿಪುಟ್ಟ ರಾಸಾಯನಿಕ  ಘಟಕಗಳಿಂದ ಮಾರ್ಪಟ್ಟಿರುತ್ತದೆ. ಇವುಗಳ ಹೊಂದಾಣಿಕೆಯಲ್ಲಿ ತಮ್ಮದೇ ಸಾಂಕೇತಿಕ ಭಾಷೆ ಇರುತ್ತದೆ. ಈ ಸಾಂಕೇತಿಕ ಹೊಂದಾಣಿಕೆಯೇ ಒಬ್ಬ ವ್ಯಕ್ತಿಗೆ ಅವನದೇ ವೈಶಿಷ್ಟ್ಯೆಗಳನ್ನು ಒದಗಿಸಿಕೊಡುತ್ತದೆ. ವಂಶವಾಹಿಗಳ ಸಾಂಕೇತಿಕ ಭಾಷೆಯನ್ನು ಭೇದಿಸಿ ಅರ್ಥಮಾಡಿ ಕೊಳ್ಳಬಹುದಾದರೆ ಎಂತಹ ಮಗುಬೇಕು ಅಂಥದ್ದನ್ನು ಪಡೆಯಬಹುದೆಂದು ವಿಜ್ಞಾನದಿಂದ ಕಂಡುಹಿಡಿಯಲಾಗಿದೆ.

ಪ್ರಯೋಗ ಶಾಲೆಯಲ್ಲಿ ಬೇಕಾದಂತಹ ವಂಶವಾಹಿಯನ್ನು ರಚಿಸಿ ನಿರ್ಮಾಣ ಮಾಡಬಹುದು. ಅವುಗಳನ್ನು ಇಚ್ಚಿತ ಮಗುವಿನ ಶರೀರದಲ್ಲಿ ಸೇರಿಸಬಹುದು. ಇದೀಗ ಈ ವಂಶವಾಹಿ ವಿಜ್ಞಾನವು ಬಹಳ ತ್ವರಿಗತಿಯಲ್ಲಿ ಬೆಳೆಯುತ್ತಲಿದೆ. ಲಿಂಗವಷ್ಟೇ ಅಲ್ಲ ಅನೇಕ ಅನುವಂಶೀಯ ರೋಗಗಳನ್ನು ಕಂಡುಹಿಡಿಯಬಹುದು. ಕೆಲವೇ ವರ್ಷಗಳಲ್ಲಿ ಭ್ರೂಣಾವಸ್ಥೆಯಲ್ಲಿಯೇ ರೋಗಗಳನ್ನು ಉಚ್ಚಾಟಿಸಬಹುದು. ಮುಂದೊಂದು ದಿನ ಶಿಶುವಿನ ಆಕಾರವನ್ನು ಭೃಣಾವಸ್ಥೆಯಲ್ಲಿಯೇ ತಯಾರಿಸಬಹುದು. ಫೆಕ್ ಪ್ಯಾಕ್ಸ್‌ನಲ್ಲಿರುವ ಜೆನೆಟಿಕ್ಸ್ ಮತ್ತು I.V.F. ಸಂಸ್ಥೆಯ ಸಂಶೋಧಕರು ಸರಳ ಜೀವಶಾಸ್ತ್ರದ ನಿಯಮದ ಲಾಭ ಪಡೆದರು. ಹೆಣ್ಣುಮಕ್ಕಳ ಜೀವಕೋಶದಲ್ಲಿ ಎರಡು ಎಕ್ಸ್ (X) ವರ್ಣ ತಂತು ಅಥವಾ ಕ್ರೋಮೋಸೋಮ್‌ಗಳು ಇರುತ್ತವೆ ಗಂಡುಮಕ್ಕಳ ಜೀವಕೋಶದಲ್ಲಿ ಒಂದು X ಮತ್ತು ಒಂದು Y ವರ್ಣತಂತುಗಳಿರುತ್ತದೆ. ತಾಯಿಯಲ್ಲಿ ಎರಡು ಇದ್ದುರಿಂದ ತಂದೆಯಿಂದ X ಆಗಲಿ Y ಆಗಲಿ ಮಗು ಪಡೆಯುತ್ತದೆ. Y ಕ್ರೋಮೋಸೋಮ್‌ಗಳಲ್ಲಿ X ಗಿಂತ ಕಡಿಮೆ ಪ್ರಮಾಣದಲ್ಲಿ D.N.A. ಘಟಕಗಳಿರುತ್ತವೆ. ವರ್ಜಿನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪುರುಷನ ವೀರ್ಯದಿಂದ ಲಿಂಗ ಆಯ್ಕೆಗನುಗುಣವಾಗಿ ವೀರ್ಯಾಣುಗಳನ್ನು ಹೊರತೆಗೆದು ಕೃತಕ ಗರ್ಭಧಾರಣೆಯನ್ನು ಮಾಡಿದರು. ಇದರ ಉದ್ದೇಶವು ಕೆಲವು ಕೆಟ್ಟ ಕಾಯಿಲೆಗಳ ನಿರ್ಮೂಲನವಾಗಿತ್ತು I.V.F. ಅಥವಾ ಇನ್‌ವಿಟ್ರೋ ಪರ್ಟಿಲೈಜೇಷನ್ ಅಂದರೆ ಪ್ರನಾಳದಲ್ಲಿ ಗರ್ಭಧಾರಣೆ ಎಂಬ ತಂತ್ರವು ಇಪ್ಪತ್ತು ವರ್ಷಗಳಷ್ಟು ಹಳೆಯದ್ದಾಗಿದೆ. ಹೆಚ್ಚು ಪ್ರಯೋಗಗಳು ಯಶಸ್ವಿಯಾಗಲಿಲ್ಲ. ಲಿಂಗ ಆಯ್ಕೆ ಬಂದಾಗ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಚೀನಾ, ಭಾರತದಂತಹ ಜನರು ಹೆಚ್ಚು ಆಯ್ಕೆ ಮಾಡುವುದು. ‘ಬಾಲಕರನ್ನು’ ‘ಪುರುಷರನ್ನು’ ಇದು ಲಿಂಗಸಮತೋಲವನ್ನು ತಪ್ಪಿಸುತ್ತದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ಅಧ್ಯಾಯನಗಳು ನಡೆಯುತ್ತಲಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರ
Next post ಸಂಸಾರ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…