Home / ಕವನ / ಕವಿತೆ

ಕವಿತೆ

ಐವರು ಯಾವ ಕಂಪನಿಯ ಮೇಕಪ್‌ಗಳಿರಬೇಕಿವು! ಇಪ್ಪತ್ನಾಲ್ಕೂ ತಾಸು ಆಕಾಶ ಏನೆಲ್ಲ ಬಣ್ಣ ಹಚ್ಚಿಕೊಳ್ಳುತ್ತದಲ್ಲ, ಕಾಲೇಜಿಗೊ, ಕ್ಲಬ್ಬಿಗೊ ಮದುವೆಗೊ ಮಸಣಕೊ ಹೋಗುವಂತೆ ಅದೆಷ್ಟು ಬಣ್ಣಗಳದಕೆ ಅರೆರೆ! ಇದಾವ ಸರಕಾರಿ ಪೋಸ್ಟ್‌ಮ್ಯಾನ್ ಹೊಳೆಹಳ್ಳ ಕೆರೆಬೆಟ್...

ಇರುಳು ಸುಮ್ಮನೆ ಬೆಳಕಾಗಿ ಅರಳುವುದಿಲ್ಲ ಮುಗಿಲು ಸುಮ್ಮನೆ ಮಳೆ ಸುರಿಸುವುದಿಲ್ಲ ಶಿಲುಬೆಗೇರಿದ ಕತ್ತಲು ನೋವುಗಳಿಗೆ ಮೈಯೊಡ್ಡಿ ಹದ ಬೆಂದು ಬೆಳಕಾಗಬೇಕು ತಕ್ಕಡಿಯಲಿ ಕೂತ ತುಂಬು ಬಸುರಿನ ಮುಗಿಲು ಹಿಂಸೆಯನುಭವಿಸುತ್ತಲೇ ಈಗಲೋ – ಆಗಲೋ ಅನುಮ...

ಆಗಮ ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ ಪಡುಕೋಣೆಯ ರಂಗಮಹಲಿನ ಮೇಲೆ ದೇವಾನುದೇವತೆಗಳ ಅರೆನಗ್ನ ನರ್ತನ ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ ಲೋಪ ಬಡ ಹೊಟ್ಟೆಯ ಮೇಲರಳಿದ ಕಮಲದ ತಲೆ ತ...

ಯಾರಿವಳೀ ದೀಪಿಕಾ? ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ! ಬಿಸಿಯೂಡಿಸಿ ಹಸಿರಾಡಿಸಿ ಕನವರಿಕೆಯ ನಾಡಿಗೆ ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ ಚಿತ್ರವ...

ಎಂದೋ ಬಿದ್ದ ಕಾಳೊಂದು ಇತ್ತೀಚಿನ ಮಳೆಗೆ ಮೊಳಕೆಯೊಡೆದು ಎರಡೆಲೆ ಚಿಗುರಿಸಿ ನಗುತಿದೆ ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ- ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,...

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ ನೀರ ಜಾಲರಿಬಟ್ಟೆ ಮೈಗಂಟಿ ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು ...

ಶತಶತಮಾನಗಳಿಂದ ಧಗಧಗನೆ ಹೊತ್ತಿ ಉರಿಯುತ್ತಲೇ ಇದೆ ಈ ಅಗ್ನಿಕುಂಡ. ಬೇಯುತ್ತಲೇ ಇದೆ ತಪ್ಪಲೆಯೊಳಗೆ ಅನ್ನವಾಗದ ಅಕ್ಕಿ! ಮತ್ತೆ ಮತ್ತೆ ಸೌದೆಯೊಟ್ಟಿ ಉರಿ ಹೆಚ್ಚಿಸುವ ಕಾಯಕ. ತಪ್ಪಲೆಗೆ ನೀರು ಸುರಿದು ತಳ ಸೀಯದಂತೆ ಕಾಯುವ ಕರ್ಮ ನಡೆದೇ ಇದೆ ನಿರಂತರ....

ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ, ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂದು ಬೇಲಿಸಾಲ ಪ್ರೀತಿ ಹಳೆಯ ಮಧುರ ನೋವ ಎಲ್ಲಿ ಜಾರಿತೋ… ಬಾನಿನಲ್ಲಿ ಒಂಟಿ ತಾರೆ ಸೋನೆ ಸುರಿವ ಇರುಳ ಮೋರೆ...

ಪರಮಾವಧಿ ಬಿಂದುವಿನ ಕಾದೆಣ್ಣೆಗೆ ಬಿದ್ದರೂ ಚೀಕಲು ಸಾಸಿವೆ ಎಂದಿಗೂ ಸಿಡಿಯುವುದಿಲ್ಲ ಬದಲಿಗೆ ಸುಟ್ಟು ಕರಕಲಾಗುತ್ತದಷ್ಟೇ! ನಿಜ ಗರಿಷ್ಟ ಕಾವಿಗೇರಿದ ನೀರು ಕೊತಕೊತನೆ ಕುದಿಯುತ್ತದೆ ಆದರೆ ಹಾಲು… ಸದ್ದಿಲ್ಲದೇ ಉಕ್ಕುತ್ತದೆ! ಒಲೆಯ ಮೇಲೆ ಗಂ...

ಬೆಳಕು ಬೇಡವಾದರೆ ಇಲ್ಲ ಇಲ್ಲಿ ಏನೂ ಆಗಿಯೇ ಇಲ್ಲ ಆಗಿದ್ದು ಆಟವಷ್ಟೇ ಲೆಕ್ಕವಲ್ಲ ಜಮಾ ಆಗಿಲ್ಲ ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ ಎಲ್ಲಾ ಕೊಡವಿ ಎದ್ದು ಹೋಗಿಬಿಡಬಹುದು ಕತ್ತಲು ಬೇಡದ್ದೆಲ್ಲಾ ಒಪ್ಪಿ ತೋಳ್ತೆರೆದು ಅಪ್ಪಿ ತುಂಬಿ ತುಂಬಿ ಮೇಲೇರಿ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...