Home / ಕವನ / ಕವಿತೆ

ಕವಿತೆ

ಬದುಕಿನ ಹೆಚ್ಚ ಹೆಚ್ಚಗಳ ಗೆಜ್ಜೆವುಲಿವಾಗಿ ಗಿಡಮರ ಪ್ರಾಣಿ ಪಕ್ಷಗಳ ಒಡನಾಟದ ಹಸಿವು ಹಂಬಲ ಬೇಟೆ ಬೇಟ ಹಿಗ್ಗು ಕೂಗುಗಳ ತೊದಲು ನುಡಿಯುತ್ತಾ ಗವಿ ಗುಡಿಸಲು ಹಳ್ಳಿ ಊರು ಪಟ್ಟಣಗಳಲ್ಲಿ ಬಯಲಾಟವಾಡುತ್ತಾ ಪಶುವನ್ನು ದುಡಿಮೆಗೆ ಹೂಡಿ ನೆಲವ ಹಸನು ಹಸಿ...

ಶ್ರೀ ಕೃಷ್ಣನ ಚರಣಕಮಲ ಭಜಿಸು ಮನವೆ ನೀ ಅವಿನಾಶೀ ಶ್ಯಾಮನ ಪದ- ಕಮಲ ಭಜಿಸು ನೀ ಲೋಕ ಒಂದು ನೀರ ಗುಳ್ಳೆ, ಕಂಡರೇನು, ಕಡೆಗೆ ಸುಳ್ಳೇ! ಬುವಿ ಬಾನಿನ ಮಧ್ಯೆ ಮಾಯೆ ಮೆರೆವ ಮಿಥ್ಯಕಿಲ್ಲ ಎಲ್ಲೆ, ಮನೆಯ ಬಿಟ್ಟ ಮಾತ್ರಕೇನು, ಕಾವಿಯುಟ್ಟ ಶಾಸ್ತ್ರಕೇನು? ...

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ|| ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾ...

ಎಲ್ಲಿಗೆ ಕರೆದೊಯ್ಯುವೆ ನೀ ಹೇಳು ಕನ್ನಯ್ಯಾ? ಬ್ಬಂದಾವನ ಬೀದಿಗಳಲಿ ಹೂ ಚೆಲ್ಲಿದ ಹಾದಿಗಳಲಿ ಎಳೆದೊಯ್ಯುವೆ ಎಲ್ಲಿಗೆ ಹೇಳು ಕನ್ನಯ್ಯಾ? ಮಡಕೆ ಒಡೆದು ಮೊಸರ ಕುಡಿದೆ ನನ್ನ ಭಂಗಿಸಿ! ಬೆಣ್ಣೆ ಸವಿದು ನಡೆದೆ ಪುಂಡ ನನ್ನ ನಂಬಿಸಿ ಮೋಡಿ ಮಾಡಿ ಕೂಡಿ ಮು...

ಏಳಿ ಏಳಿ ಗೆಳೆಯರೇ ಏಳಿರಿ ಹೋರಾಟಕೆ ತಾಳಿ ಬಾಳು ಎನುತ ಕೊಳೆತು ಹೋದೆವಲ್ಲ ಹಿಂದಕೆ ||ಪ|| ಗುಬ್ಬಿ ಪಾರಿವಾಳಗಳನು ಹದ್ದಿನಿಂದ ಉಳಿಸಲು ಜಿಂಕೆ ಮೊಲಗಳನ್ನು ವ್ಯಾಘ್ರ ಬಾಯಿಯಿಂದ ಉಳಿಸಲು ಮುರುಕು ಗುಡಿಸಲಲ್ಲಿ ದೀಪ ಮಿಣುಕು ಕುಟುಕು ಜೀವಕೆ ಕಣ್ಣ ನೀ...

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ ನಿನ್ನ ಶ್ರೀಚರಣಗಳ ಹಾಡಿ ಬೆಳೆಸುವೆ ವನವ ಕನ್ನಯ್ಯಾ, ನನ್ನ ಕನ್ನಯ್ಯಾ. ಕನಕಾಂಬರೀ ಬಣ್ಣ ಸೀರೆಯನ್ನುಡುವೆ, ಬಣ್ಣಬಣ್ಣದ ಗಿಡವ ಪಾತಿಯಲಿ ನೆಡುವೆ ಸೇವೆಯಾನಂದವೇ ಕೂಲಿ ನನಗೆನುವೆ ಹೂ...

ಕೆಲವು ತೋಳ ಹದ್ದು ಹೆಗ್ಗಣ ಹಂದಿ ಕಿರುಬಗಳು ಸಾವಿರ ಲಕ್ಷ ಕೋಟಿಗಟ್ಟಲೆ ಹರಾಮಿ ಹಣ ನುಂಗುತ್ತ ಬಂಗಲೆ ಕಾರು ಫರ್ಮು ಫಾರ್ಮು ಫ್ಯಾಕ್ಟರಿಗಳ ಬೆಳೆಸುತ್ತ ತಲೆಹಿಡುಕ ರಾಜಕಾರಣದ ವೇಷದಲ್ಲಿ ನಾಯಿಗೆ ಒಣರೊಟ್ಟಿ ಚೂರು ಹಾಕಿದಂತೆ ಬಡಬಗ್ಗರಿಗೆ ಬಟ್ಟೆ ಬರೆ...

ಕೇಳು ಕೇಳು ಓ ಜೀವಗೆಳತಿಯೇ, ಲೋಕ ಮೀಟಿದೆ, ನಾ ಕ್ಲೇಶ ದಾಟಿದೆ. ಗೆಜ್ಜೆ ಕಾಲಿಗೆ, ತುಳಸಿಮಾಲೆ ಕೊರಳಿಗೆ, ಲಜ್ಜೆ ಬಿಟ್ಟೆನೇ, ಹೆಜ್ಜೆ ಹಾಕಿ ಕುಣಿದೆನೇ. ರಾತ್ರಿ ಹಗಲಿಗೆ ಸೂತ್ರಧಾರಿ ಶ್ಯಾಮನ ಮಾತ್ರ ನನೆದನೇ, ಪ್ರೀತಿಪಾತ್ರಳಾದೆನೇ ಕಾಸು ಇಲ್ಲದೆ,...

ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ|| ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧|| ಬೆಳಕನೆಲ್ಲ ಬಚ್ಚಿಟ್ಟುಕೊಂಡ...

ಗಿರಿಧರ ಪ್ರಿಯತಮನ – ಶ್ರೀ ಪಾದಕೆ ಸಲ್ಲುವನೇ ಅವನೊಲವನು ಗೆಲ್ಲುವೆನೇ! ಚೆಲುವಿನ ಚಂದ್ರಮ ಇನಿಯ-ನಾ ಬೆರೆವೆನೆ ಆವನೊಳು ರಾತ್ರಿ; ನನ್ನನೆ ಮೀರಿ ಕ್ಟಷನ ಸೇರಿ ಮರೆವೆನೆ ಗಿರಿವನ ಧಾತ್ರಿ. ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ ಇತ್ತುದ ನಲಿಯ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...