
ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ. ನಿಜವೆ, ನಾನು ಹುಚ್ಚಿಯೇ ಜನದ ಕಣ್ಣಿಗೆ! ಲಜ್ಜೆ ಏಕೆ ಕೃಷ್ಣ ಮೆಚ್ಚಿ ಕರೆದ ಹೆಣ್ಣಿಗ...
ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ|| ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು ನವೋದಯದ ಸರ್ವೋದಯ ...
ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ ಹಸೆ ಏಕೆ? ಬೇಯುತ್ತಿದೆ ಎದೆ ಒಂದೇ ಸಮನೆ ಸುರಿದಿದೆ ಕಂಬನಿ...
ಬರುವುದ ಕಂಡೆ ಗಿರಿಧಾರಿ ನನ್ನ ಮನೆಯ ಮುಂದೆ ಹಿಗ್ಗಿ ಅಡಗಿದೆನು ಲಜ್ಜೆಯಲಿ ಮನೆಬಾಗಿಲ ಹಿಂದೆ. ಹಳದಿಯ ರೇಸಿಮೆ ವಸ್ತ್ರದಲಿ ಹೊಳೆವ ದಿವ್ಯ ದೇಹ ಬಾನಿನ ಬಣ್ಣದ ಮುಖದಲ್ಲಿ ಕಣ್ಣು ಜೋಡಿ ಸೂರ್ಯ. ಕೇಸರಿ ಬಣ್ಣದ ಸೀರೆಯಲಿ ಮಿಂಚುತಿರುವ ರಾಧೆ ಕಾದೇ ಇರು...
ಅಕ್ಕ ತಂಗಿಯರೇ! ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ ಎರವಲು ಬೆಳಕಿನಿಂದ ಮೆರೆವ ಗ್ರಹ ಉಪಗ್ರಹಗಳನ್ನೋ ಉಲ್ಕೆಗಳನ್ನೋ ಕೊಡಬೇಡಿ ಒಂದರೊಳಗೊಂದು ಸಿಕ್ಕಾ ಸಿಕ್ಕಾ...
ಪ್ರೀತಿಯ ದೀಪವ ಎದೆಯಲಿ ಬೆಳಗಿ ಮರೆಗೆ ಸರಿದೆಯೇನು? ಅರಿಯದ ಹೆಣ್ಣ ಉರಿಸುವೆಯಲ್ಲ ಎಂಥ ಕಟುಕ ನೀನು! ನೀನಿಲ್ಲದೆ ನಾ ಹೇಗಿರಲಿ – ಶಶಿ ಹರಸದ ನಭದಂತೆ, ಮಿಡುಕುತ್ತಿರುವ ನೀರಿನಲಿ ಉಸಿರು ಕಟ್ಟಿದಂತೆ. ದಾರಿದಾರಿಯ ಅಲೆಯುವೆ ನಿನ್ನ ಹೆಸರನೆ ಕೂ...
ಜನರ ಲೌಕಿಕಾಶಯಗಳ ತುಳಿದ ಕಲ್ಲು ಕಲ್ಲುಗಳ ತಳಪಾಯ ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು ಶೋಷಣೆಯ ವೈಭವೀಕರಣದ ನವರಂಗಗಳು ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ ಮತಾಧಿಕ್ಯತೆಯ ಬೆರಗಿನ ಗೋಪುರ ಅಜ್ಞಾನಕ್ಕಿಟ್ಟ ಕಳಸುಗಳು ಮೆರೆದಿವೆ ಭವ್ಯ ಭಾರತದ ...
ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ ಹೇಳಲಾರೆನೇ ಕಂಪಿಸಿದೆ ಜೀವ ನಾ ತಾಳಲಾರೆನೇ ನೀನೆ ಬಲ್ಲೆಯೇ ನನ್ನ ಎಲ್ಲ ಮ...













