Home / ಕವನ / ಕವಿತೆ

ಕವಿತೆ

ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ | ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ...

ಬಾನೊಳಗಾಯಿತು ಮುಗಿಲು ಸೊಕ್ಕುಳಿದಡಗಿತು ಬಿಸಿಲು ಈ ನೋಟಕದೇಂ ಮಿಗಿಲು ಸ್ಕಿತಿಗೇಕಯಿ ಈ ದಿಗಿಲು? ಗೂಡೆಡೆ ಹಾರಿತು ಹಕ್ಕಿ ಆವೋಡಿತು ದೌಡಿಕ್ಕಿ ತರು ಮೊರೆಯಿತು ಶರಣಿಕ್ಕಿ ಜನ ಕಕ್ಕಾವಿಕ್ಕಿ! ದೆಸೆಗುಬ್ಬಸವೀ ಸದ್ದು ಏನೆ ಗುಡುಗಲು ಗುಡುಗೆದ್ದು, ಬರ...

೧ ಇಳೆಯ ನೆಲದಲ್ಲಿ ಮುಗಿಲೆಂತ ಮುಗಿಲಲ್ಲಿ ಸುಳಿ- ದಾಡುತಿಹ ಗಾಳಿಯಲ್ಲಿ ನಲಿನಲಿವ ಕಡಲಲ್ಲಿ ನೀನಿದ್ದು ಹಿಗ್ಗುತ್ತ ಊದುತಿಹೆ ಕಾಳಿಯಲ್ಲಿ! ೨ ಹಿಂದಿದ್ದಿ! ಇಂದಿದ್ದು ಮುಂದೆಯೂ ಇದ್ದರೂ ನನಸೆ ನೀನೆನಗೆ ಕಾಣೆ! ಹಿಂದು ಮುಂದಿಂದುಗಳನಿನ್ನುಳಿದು ಎಂದೆ...

ಗದುಗಿನ ನಾಡಹಬ್ಬದಲ್ಲಿ ಶ್ರೀ `ಮಧುರ ಚೆನ್ನ’ ರಿಂದ ಪರೀಕ್ಷಿಸಲ್ಲಟ್ಟ ರಜತಪದಕವನ್ನು ಪಡೆದುದು ಅಮ್ಮಾ, ಚಿತ್ರದ ಆಂಗಡಿ ನೋಡೆ! ಸುಂದರ ಸೊಬಗಿನ ಅಂಗಡಿ ನೋಡೆ! ಬಗೆ ಬಗೆ ಬಣ್ಣದ ಪಟಗಳ ನೋಡೆ! ಭಾರತದೇಶದ ಚಿತ್ರ ನೋಡೆ! ||೧|| ಅಮ್ಮಾ, ಇಲ್ಲಿದ...

೩೮ ನಲ್ಲೆಯ ನೆನಪು ಪಲ್ಲವಿ ನಲ್ಲೆ! ಎಂದೈತರುವಿಯೊ? ಬಗೆಗೆ ಸೊಗವನ್ನೀವೆಯೊ? ೧ ಯಾವ ಕಜ್ಜನ ಗೈಯ ಹೋದರು ನಿನ್ನ ನೆನಪೇ ಸುಳಿವುದು ಅಚ್ಚುಗಟ್ಟಿನೊಳಾವ ಕಾರ್ಯವ- ನೆಸಗಲಿಚ್ಛೆಯೆ ಬಾರದು ೨ ಪ್ರಕೃತಿ ರ೦ಗದೊಳೆಲ್ಲಿ ನೋಡಲು ನಿನ್ನ ನೆನಪಿದೆ ನಲ್ಲೆಯೆ! ...

ಮುಗಿಲ ತಾರೆ ಚಲುವ ನೀರೆ ಬಾನಬಯಲ ಬೆಳಗು ತಾರೆ! ಗಗನವೇರಿ ಮುಗಿಲಗೇರಿ ಧರೆಯ ಬೆಳಗಿ ಮೆರೆಸು ತಾರೆ! ಮುಗಿಲ ಬಿಂಬ ರಜನಿರಂಗು ಬಾಹ್ಯ ಬಾಳು ತೋರು ತಾರೆ! ಭುವಿಯ ಬಣ್ಣ ಬೈಗು ಕಣ್ಣ ಭಾವ ತೋರಿ ಮಿನುಗು ತಾರೆ! ಕಾಂತಿ ಕಿರಣ ಬೆರೆಸಿ ಮರೆಸಿ ಮನವ ತನುವ ...

ಇಲ್ಲಿ ತಂದ ಸಂಕಲ್ಪ ಬರಿ ವಿಕಲ್ಪವಾಯಿತೆ? ಅಂದು ನುಡಿದ ಬೀರನುಡಿಯದಿಂದು ಜಲ್ಪವಾಯಿತೆ? ಜಲಧಿಯಾಚೆ ಕರೆದು ತಂದ ದೈವ ಕೈಯ್ಯ ಬಿಟ್ಟಿತೆ? ದುರ್‍ದೈವವು ಬಿಟ್ಟ ಬಾಣ ಮರೆ-ಮೋಸದಿ ನಟ್ಟಿತೆ? ಎದೆಯ ಮುಗುಳ ಮುಟ್ಟಿತೆ? ಹಾತೊರೆಯಲಿಲ್ಲ ನಾನು ಹ೦ಸತಲ್ಪದಂದ...

ಮಳೆಯ ದನಿಯ ಮಧ್ಯದಲ್ಲಿ ಬರುತಿರುವ ಹೊಂಬಿಸಲು ಎಳೆಬಣ್ಣ ಕಿರಣದಲ್ಲಿ ಬೆಳೆದಿಹವೊ ಬೆಳಕನೋ ಕಳೆ ಏರಿ ನಿಂತಿರುವ ಸೌಂದರ್‍ಯ ಈ ಹೊಳಪು ಬಳಿಯಲ್ಲಿ ಕರಿತಿಹದು ಹರಷವನ ಭೋಗಿಸಲು || ೧ || ಹಾರುತಿಹ ರಮಣೀಯ ಆಕಾಶ ಪಕ್ಷಿಗಳು ಝರಿಯಾ ಪ್ರವಾಹದಿ ಮುಳಿ ಮುಳಿಗ...

`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು- ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘ ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ ನೀನೆಮ್ಮ ಸಂಸಾರದಲಿ ಬೆರೆತು ಬಂದ...

ತುಮ್‌ ತುಮ್‌ ತುಮ್‌ತುಮ್‌ ತುಮ್‌ತುಮ್‌ ತುಮ್‌ ತುಮ್‌ ತುಂಬಿ ಬಂದಿತ್ತಽ ತಂಗೀ ತುಂಬಿ ಬಂದಿತ್ತು ॥ ಪಲ್ಲ ॥ ಬೆಳಕಿಗಿಂತ ಬೆಳ್ಳಗೆ ಇತ್ತ ಗಾಳಿಗಿಂತ ತೆಳ್ಳಗೆ ಇತ್ತ ಜಡಿಯಿಂದಿಳಿದ ಗಂಗಿ ಹಾಂಗ ಚಂಗನೆ ನೆಗೆದಿತ್ತ ಮೈಯೊಳಗಿರುವ ಮೂಲಿಮೂಲಿಗೂ ಮೂಡಿ ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...