ಭಯವು ಹೊರಗೆ ಭಯವು ಒಳಗೆ
ಗಾಳಿಗುಂಟ ಮೇಲೆ ಕೆಳಗೆ
ಬಾಳಿದೇನು ಸಾವುತುತ್ತು
ಚಿಂತೆಸಂತೆ, ಹಗೆಯ ಹುತ್ತು
ನೆನವು ನೋವು ಮರವೆ ಸುಖವು
ಕನಸಿನಲ್ಲಿ ಕನವರಿಕೆಯು.
ಅಭಯ! ಇಂತಿದೇನೆ ಇರಲು
ಇದರ ಮರೆಗೆ ನೀನು ನಿಲಲು
ಜೀವಜಾತವೆಲ್ಲವನ್ನು
ಶುಭದ ಗುರಿಗೆ ನಡೆಸಿ ಚೆನ್ನು
ಸಾಧಿಸುತಿಹೆ ಎಂಬ ದರುಶನ
ಮೂಡಿ ಮೊಳಗುತಿರಲಿ ದಿನದಿನ.
*****








