Home / Ranganatha Srinivasa Mugali

Browsing Tag: Ranganatha Srinivasa Mugali

ಎಲ್ಲೆಡೆಗೆ ಈ ಚಿತ್ರ ನಿನ್ನಂತೆ ಸರ‍್ವವ್ಯಾಪಿ ಗೆಲ್ಲವೇ ಇದು ನಿನ್ನ ವಿಭುತನಕೆ ವಿಶ್ವರೂಪಿ ? ಬೇಸಗೆಯ ಉರಿಬಿಸಿಲು, ರಣಗುಡುವ ಬರಿಬಯಲು ತುಳಿತುಳಿದು ನೆಗ್ಗಿರುವ ದಾರಿಯೊಂದು ತನಗೆ ತಾ ನೆರಳಾಗಿ ನಿಂತಿಹುದು ಅದರಲ್ಲಿ ಮನುಜನೆನೆ ಕರೆಗೊಳ್ವ ಪರಿಜದ...

(೧) ನಾನು : ಗೆಳೆಯ ಬೆನಕ! ಕನ್ನಡಕ್ಕೆ ದೊರೆತಪೂರ‍್ವ ಕನಕ ನಿನಗೆ ನನ್ನ ನೆನಸಿಕೆ ಬೆಂದು ಬಾಯಿ ತೆರೆದ ನೆಲಕೆ ತಂಪುಗಾಳಿ ಮಳೆಯ ತೆರದೆ ಬಂದ ಕವನಕೆ.   ೧ ನಿನ್ನ ಕೂರುನೋಟ ಕಂಡ ನನ್ನ ಇರವಿನರಿವು ನನಗೆ ಆತ್ಮದರ‍್ಶಕ ನಿನ್ನ ಸ್ನೇಹರಸದ ತಳಿಯು ನನ್ನ...

ಕೇಳುತಿದೆ ಆಹ್ವಾನ ದಿಶೆದಿಶೆಯ ತುದಿಯಿಂದ ದಳ್ಳುರಿವ ನೆಲದಿಂದ ಬೇವ ಜನದೆದೆಯಿಂದ ಕೇಳಿಯಲ್ಲಿ ರಾಜ್ಯ ಸಾಮ್ರಾಜ್ಯಗಳ ನುಂಗಲಿಹ ಕಾಲಭೈರವನಿಂದ.  ೧ ‘ಶಾಂತಿಯಲಿ ಪ್ರೀತಿಯಲಿ ಸೊಗಬಾಳು ಬಾಳೋಣ ಅಂತಿರುವ ಇಂತಿರುವ ‘ ಎಂದು ಕನಸನು ಕಂಡು ನ...

ಇನ್ನಾದರೂ ಎಚ್ಚರು ಓ ನನ್ನ ರಾಜಕುವರ!  || ಪ || ಕಾಲಮೀರಿಹುದೆಂಬ ಸೋಲಿಗೀಯದಿರಿಂಬ ನಿಮಿನಿಮಿಷವಾಗಿರಲು ಅಮೃತರಸದಾ ಹೊನಲು.  ೧ ಅರಿವನರುಹಿರೆ ಮೊಗವು ಮರಣದಂತಹ ಮರವು ಕರೆದಂತೆ ಮನಬೆರೆತು ಒರಗಿರುವೆ ಮೈಮರೆತು.  ೨ ಎಂಥ ಕುದುರೆಯನೇರಿ ಪಂಥದಲಿ ಕಾಹ...

ಯತಿವರನೆ ಶ್ರೀಗುರುವೆ ಜನ್ಮಜನ್ಮದ ತಪವೆ ಮೈಗೊಂಡು ನಿಂತಿರುವ ಕಲ್ಪತರುವೆ ! ಹಲವು ವರುಷದ ಹಿಂದೆ ಕಲಿಕೆಯೆಲ್ಲವು ಸಂದೆ ನಿನ್ನ ಸಂನಿಧಿಯಲ್ಲಿ ನಡೆದು ಬಂದೆ. ೧ ಕಾಳಕತ್ತಲೆಯಲ್ಲಿ ಬಾಳದೀವಿಗೆಯಲ್ಲಿ ಬೆಳಕನಿಡು ಗುರುವೆಂದೆ ನಿನ್ನಲ್ಲಿ. ೨ ಮರಳಿ ಬಂದ...

ಕೆರಳಿ ಮೊರೆವ ಕಡಲಿನಲ್ಲಿ ಬಿರುಕುಪಡೆದ ಕಿರಿಯ ನಾವೆ ಬಿರಿಯುತಿಹುದು ಬಿರುಸಿನೆದೆಯ ಕಾಯೆ ತಾಯೆ ಅಭಯದಾಯಿನಿ ! ಬಂದರಗಳ ಬಂಧಮೀರಿ ಬಂದು ನೀರ ಹರಹಿನಲ್ಲಿ ಮಿಂದು ತೇಲಿ ಸ್ವಚ್ಛಂದದಿ ಮುಂದೆ ಹುಟ್ಟುಹಾಕುತಿರುವೆನು. ೧ ಕಂಗಾಣದ ಗಾಳಿಸೆಳೆಗೆ ತುಂಗಗಿರ...

`ಈ ಮನೆಯ ಬಳ್ಳಿ ನನೆಕೊನೆ ಹೋಗಿ ಮುದ್ದು ಮಗು- ಗಳ ಮಧುರನಗೆಯ ಹೂಬಿಡಲಿ ನರುಗಂಪಿಡಲಿ ತಲೆತಲೆಯ ಹಳನಡತೆ ಬೇರೂರಿ ಪಸರಿಸಲಿ ‘ ಎಂಬ ಕನಸನು ಹೊತ್ತು ನನಸುಗೊಳಿಸಲಿಕೆಂದು ಕಲ್ಪವಲ್ಲರಿಯಂತೆ ತುಂಬಿದುಕ್ಕಂದದಲಿ ನೀನೆಮ್ಮ ಸಂಸಾರದಲಿ ಬೆರೆತು ಬಂದ...

ಸುತ್ತೆಲ್ಲ ನೀರೆ ನೀರಾದ ಕಡಲಿನ ಹರವು ಎತ್ತಲೂ ಏರೇರಿ ಬರುವ ತೆರೆ ಸಾವಿರವು ಇದು ಏನು ಯಾಕೆಂದು ತಿಳಿವ ಬಗೆನಾವೆಗಳು ಮದದಿ ಸುಳಿದಾಗಿಹವು ಬರಿ ಮೂಡುಮುಳುಗುಗಳು. ಎಂದಿಗೂ ಇದ್ದಂತೆ ಇಹುದು ಈ ಮುನ್ನೀರು ಇಂದಿಗೂ ಇದರಾಳವರಿತವರು ಅದು ಯಾರು ? ಅರಿಯ...

ನಿನ್ನ ಹರಕೆಯ ಕೈಯ ಹೊಂದಿ ತಣಿದೆನು ತಾಯೆ ಬನ್ನವೇನೇ ಬರಲಿ, ಇರಲಿ ನಿನ್ನ ಭಯಛಾಯೆ ! || ಪ || ನಾಡನೆಲೆಯನು ತೊರೆದು ದೂರದೂರಕೆ ನಡೆದು ಕಾಡುಕತ್ತಲೆಯಲ್ಲಿ ನಾ ಸಾಗಿರೆ ನೇಸರನ ಮರೆಮಾಡಿ ನೆರೆದ ಮರಬಳ್ಳಿಗಳು ಹಾಸಿರುವ ನೆರಳಲ್ಲಿಯೇ ಬಾಗಿರೆ. ೧ ಏನೋ...

ಮಾನಸಮರಾಳ! ಮರಳಿ ನೆಗೆದೇಳ ಕಲುಷಿತ ಕರಾಳ ಕೊಳದಿಂದ ಮೇಲೆ ಕದಡಿ ಕೊಳೆಯಾದ ಪಕ್ಷಗಳ ಬಿದಿರಿ ನಿರ್ಮಲನಿರಾಳಸರದಲ್ಲಿ ತೇಲೆ.  ೧ ತಿಳಿಬಿಳಿದುಪ್ಪುಳ ನಿನ್ನ ನಯನವುರು ಮಲಿತ ಜಲವುಂಡು ಮಾಸಿ ಹೋಗಿಹುದು ಮುಗಿಲನೆ ಮುದ್ದಿಪ ನಿನ್ನಯ ನೋಟವು ಮೀನದ ಕಣ್ಗಳ ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...