Home / ಕವನ / ಕವಿತೆ / ಇನ್ನಾದರೂ ಎಚ್ಚರು

ಇನ್ನಾದರೂ ಎಚ್ಚರು

ಇನ್ನಾದರೂ ಎಚ್ಚರು
ಓ ನನ್ನ ರಾಜಕುವರ!  || ಪ ||
ಕಾಲಮೀರಿಹುದೆಂಬ
ಸೋಲಿಗೀಯದಿರಿಂಬ
ನಿಮಿನಿಮಿಷವಾಗಿರಲು
ಅಮೃತರಸದಾ ಹೊನಲು.  ೧
ಅರಿವನರುಹಿರೆ ಮೊಗವು
ಮರಣದಂತಹ ಮರವು
ಕರೆದಂತೆ ಮನಬೆರೆತು
ಒರಗಿರುವೆ ಮೈಮರೆತು.  ೨
ಎಂಥ ಕುದುರೆಯನೇರಿ
ಪಂಥದಲಿ ಕಾಹೇರಿ
ಬೇಟಗೋಸುಗ ಬಂದೆ
ಬಿಲ್ಲುಬಾಣವ ತಂದೆ.  ೩
ನೆಲದ ಸಿರಿ ಸೊಗಸೆಲ್ಲ
ನನ್ನದೆನ್ನುವ ಸೊಲ್ಲ
ನುಡಿವ ನೋಟವ ಬೀರಿ
ನಡೆದೆ ನೀ ಮಿತಿಮೀರಿ.  ೪
ಹಕ್ಕಿ ಹರಣವ ಕೊಂಡೆ
ಹಿಗ್ಗಿನೂಟವನುಂಡೆ
ಚಿಗರೆಕಣ್ಗಳ ಸೆರೆಗೆ
ನೆಗೆದೆ ನೀನೆದೆ ಕರಗೆ.  ೫
ಬೇಟೆಯಾಡಲು ಬಯಸಿ
ಬಿಲ್ಲೆ ಬಾಣವನಿರಿಸಿ
ಮೃಗವ ಗುರಿಗೊಂಡಂತೆ
ಮೃಗಕಾದೆ ಗುರಿಯಂತೆ.  ೬
ಬೇಟೆಗಾರನು ಹೋಗಿ
ಬೇಟಬಲೆಗೊಳಗಾಗಿ
ಸಿರಿಯ ಸೋಗಿನ ಹಿರಿದು
ಮರೆಮೋಸವನೆ ಮರೆದು-  ೭
ಕಾಡಿನಲಿ ಧುಮುಕಿದೆ
ಮೇಡಿನಲಿ ದುಡುಕಿದೆ
ಬೇಕುಬೇಕೆಂದುಸುರಿ
ನೂಕುನುಗ್ಗೆಂದೊದರಿ.  ೮
ಮನೆಮಾರುಗಳ ತೊರೆದು
ಜನಜಾತ್ರೆಯನು ಜರೆದು
ಸಾಸದಲಿ ಮನನೆಟ್ಟು
ಕಾಡುಪಾಲಾದೆ ಕೆಟ್ಟು.  ೯
ಕತ್ತಲೆಯ ತವರಾಗಿ
ಎತ್ತಲೂ ತೊಡಕಾಗಿ
ಬೆಳೆದ ಕಾರಡವಿಯೊಳು
ಸುಳಿದೆ ನೀ ತಿಳಿಯಲು.  ೧೦
ಅಲೆದು ತಂದಿಹ ಸರುವ
ಮೋಲಜಿಂಕೆ ಗಿಳಿಗೊರವ-
ಬೇಟೆಯಲಿ ಮುಚ್ಚಿಹುದು
ಕುದುರೆಮೈ ಹೆಚ್ಚಿಹುದು.  ೧೧
ಮುಂದೇನು ಎನ್ನೊಡೆಯ
ಎಂದೆಂಬ ಕಣ್ಕಡೆಯ
ಕೆಳಬೀರಿ ಕಳವಳದಿ
ದೊರೆಯಲಾರದ ಹಾದಿ-  ೧೨
ನಿಂದಿರಲು ಆ ಕುದುರೆ
ಮೈ ನವಿರು ತಾನದುರೆ
ಕೆಡೆದಿತ್ತೊ ನೆಲದೆಡೆಗೆ
ಮಡಿದಿತ್ತೊ ಆಕಡೆಗೆ.  ೧೩
ಮಡಿದ ಕುದುರೆಯ ಮೇಲೆ
ನಿನ್ನ ಮೈಯದು ಜೋಲೆ
ಸಾಸ ಕೆಳಗುರುಳಿದೊಲು
ಗಾಸಿಯದು ಸುರುಳಿದೊಲು-  ೧೪
ಜಿಯ್ಗುಡುವ ಕಾಡಿನಲಿ
ಒಯ್ಯನುರುಳಿದೆ ಒರಲಿ
ತಣಿಯಲಾರದೆ ದಣಿದು
ಮಣಿಯಲಾರದಎ ಮಣಿದು.  ೧೫
ಬಿಲ್ಲು ಬಿದ್ದಿರಲಿದಿರು
ಒಲ್ಲೆನೆನ್ನುವ ಚದುರು
ಬಣವೆದೆ ಸೇರಿಹುದು
ಕಾಣದೊಳಗೂರಿಹುದು.  ೧೬
ನೆಲದೊಡೆಯ ಮೇಲೊರಗಿ
ಕಲ್ಲುಮಣ್ಣೊಳು ಬೆರೆತು
ಜಡಕಿಂತ ಜಡವಾದೆ
ತೃಣಕಿಂತ ಕಡೆಯಾದೆ.  ೧೭
ಕೊರಗಿನಲಿ ಕೊನರಿಹುದು
ಬರಡಿನಲಿ ಹಯನಿಹುದು
ಮರವಿನಾ ಮರೆಯಲ್ಲಿ
ಅರಿವಿನಾ ತೊರೆ ಅಲ್ಲಿ.  ೧೮
ಗಾಳಿಗೊಳಲೆಲ್ಲೆಡೆಗೆ
ಕೇಳುವೊಲು ಕೇಳ್ವವಗೆ
ಸಾರುತಿದೆ ಸವಿಯಲೆಯ
ಮೇಲೆ ಬಾಳಿನ ಕಲೆಯ.  ೧೯
ಕನಸು ನಾಡಿನೊಳಲೆತು
ನನಸು ಕಂಡಿಹ ಗುರುತು
ತುಟಿಯ ನಸುನಗೆಯಲ್ಲಿ
ಮಿನುಮಿನುಗುತಿದೆ ಅಲ್ಲಿ.  ೨೦
ನಿಜಸುಖದ ನೆಲೆಯರಿತು
ಬದುಕಿದಾಕ್ಷಣವನಿತು
ಕೋಟಿಯುಗ ಕಳೆದಿರೆಯು
ನಿತ್ಯನವ ನಸುಕುಹರೆಯು.  ೨೧
*****
Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...