ಕಳವಳದ ಮೂರ್ತಿ ತಾ ಕಂಗೆಟ್ಟು ನಿಂತಿಹುದು
ತಳಮಳಕ್ಕೆ ತೀರವೆಲ್ಲಿರುವದವನ
ಹುಳುವು ಹುಪ್ಪಡಿಗಿಂತ ಕೀಳಾದಬಾಳುವೆಯ
ಅಳುತಬಾಳುತ್ತಿಹನು ಸಾನಬಯಸಿ
ಗೇಣು ಹೊಟ್ಟೆಯ ತುಂಬೆ ಬೊಟ್ಟು ಬಟ್ಟೆಯ ಹೊರೆಯೆ
ಪ್ರಾಣವನೆ ಒಪ್ಪಿಸಿಹ ಸಿರಿವಂತಗೆ
ಗಾಣದೊಳು ಸಿಕ್ಕಿರುವ ಕಬ್ಬಿನೊಲು ಜಬ್ಬಾಗಿ
ತ್ರಾಣವೆಲ್ಲವ ಕಳೆದುಳೊಂಡಿರುವನು
ರೋಮರೋಮಗಳಲ್ಲಿ ತೂರಿ ಬರುತಿದೆ ನೋವು
ಭೂಮಂಡಲದಿ ಅವಗೆ ತಾಣವಿಲ್ಲ
ಸಾಮಗಾನದಿ ಶಾಂತಿದೇವತೆಯ ಕರೆಯುವರು
ಪ್ರೇಮವಿರಹಿತ ಪೃಥ್ವಿಗೆಲ್ಲಿ ಶಾಂತಿ?
ಸತ್ತಿಹರು ಅಬ್ಜಾನು ಅಬ್ಜಜನ ನರಳುತ್ತ
ಬಿತ್ತಿಹರು ಜನಮನದಿ ಕ್ರಾಂತಿಬೀಜ
ಹೊತ್ತಲಿದೆ ಆರದದು ಎಂದಿಗೂ ಎಚ್ಚರವು
ನೆತ್ತಿಯಲಿ ಕಣ್ಣುಳ್ಳ ಧನದೊಡೆಯನೇ
ಮಾನವನೆ ನಿನೊಬ್ಬ? ಮಾನವರ ಮರುಕವನನು
ನೀನರಿಯದಿಹೆಯಲ್ಲ ಕಲ್ಲೆದೆಯವ
ಜನ್ನದಲ್ಲಿ ಆಹುತಿಯ ಹಾಕುತಿರುವರು ಅವರು
ಧನ್ಯರಾಗುವರವರು ಸಿದ್ಧಿಯಲ್ಲಿ
*****
(ಮೈಕೆಲ್ ಅಂಜಲೊನ Dying slave ಎಂಬ ಚಿತ್ರ ನೋಡಿ)








