Home / ಲೇಖನ / ಇತರೆ

ಇತರೆ

ಹಳೆಯ ನಾಣ್ಣುಡಿಗಳೆಷ್ಟೋ ಈಗಿನ ಕಾಲದಲ್ಲಿ ಅನಾವಶ್ಯಕವಾಗಿವೆ.  ಈಗಿನ ಕಾಲಕ್ಕನುಸಾರವಾಗಿ ಅವುಗಳ ತಿದ್ದುಪಡೆಯ ಅವಶ್ಯವಿದೆ. ಉದಾ ಹರಣಾರ್ಥ, ಹಳ್ಳಿಗಳಲ್ಲಿಯ ವಯೋವೃದ್ದರು ಈಗಲೂ “ದೀಪದ ಕೆಳಗೆ ಬೆಳಕು ಇರುವದಿಲ್ಲ” ಎಂದು ಅನ್ನುತ್ತಾರೆ. ಆದರೆ...

ಪ್ರಿಯ ಕಿಟಿ, ಇವತ್ತು ನಿನಗೊಂದು ನಿರಾಸೆಯ ಸಂಗತಿಯ ಹೇಳುವುದಿದೆ. ನಮ್ಮ ಯಹೂದಿ ಮಿತ್ರರನ್ನೆಲ್ಲಾ ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಒಂದು ಚೂರು ಕರುಣೆ ಇಲ್ಲದವರಂತೆ, ಗೆಸ್ಟಪೋ [ ನಾಝಿ ಸರಕಾರದಲ್ಲಿಯ ಸಿಕ್ರೇಟ್ ಪೋಲಿಸರು]ಗಳು ಇವರನ್ನಲ್ಲ...

ಪ್ರೀತಿಯ ಕಿಟಿ, ನಿನ್ನೆ ಇನ್ನೊಂದು ಕಲಹ. ಮಮ್ಮಿ ಹೆದರಿಕೆ ಹುಟ್ಟಿಸುವಷ್ಟು ಕೋಪಗೊಂಡಿದ್ದರು. ಡ್ಯಾಡಿಯ ಹತ್ತಿರ ನನ್ನ ಬಗ್ಗೆ ಅವರಿಗೆ ಏನೆನ್ನಿಸುತ್ತದೆ ಎಂಬುದನ್ನು ಹೇಳಿದರು. ಆನಂತರ ತುಂಬಾ ಆರ್ದ್ರವಾಗಿ ಕಣ್ಣಿರಿಟ್ಟರು. ನಾನು ಅಲ್ಲಿಂದ ಎದ್ದು...

ಪ್ರೀತಿಯ ಕಿಟಿ, ನಿನ್ನೆ ನನಗೆ ನಿಜಕ್ಕೂ ಆಘಾತವಾಗಿತ್ತು. ಸುಮಾರು ಎಂಟು ಗಂಟೆಗೆ ಒಮ್ಮೇಲೆ ಕರೆಗಂಟೆ ಜೋರಾಗಿ ಸದ್ದಾಯಿತು. ಖಂಡಿತ ಯಾರಾದರೂ ಬಂದಿರಬೇಕೆಂದು ನಾನು ಊಹಿಸಿದೆ. ನಾನು ಯಾರಿರಬಹುದೆಂದು ಊಹಿಸಿರಬಲ್ಲೇ ಎಂಬುದನ್ನು ನೀನು ಕಲ್ಪಿಸಿಕೊಳ್ಳ...

ಪ್ರೀತಿಯ ಕಿಟಿ. ಹೀಗೆ ಅಜ್ಞಾತವಾಗಿ ಬದುಕುತ್ತಿರುವ ಜನರು ಕೆಲವೊಮ್ಮೆ ವಿಲಕ್ಷಣವಾದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸುಮ್ಮನೆ ಯೋಚಿಸು, ಸ್ನಾನಕ್ಕೇ ಅವಕಾಶ ಇಲ್ಲದ ಕಡೆಯಲ್ಲಿ ನಾವು ಸ್ನಾನದ ಟಬ್ಬುಗಳನ್ನು ಬಳಸುತ್ತೇವೆ. ಯಾಕೆಂದರೆ ...

ಪ್ರೀತಿಯ ಕಿಟಿ, ನಿನ್ನೆ ಎಲ್ಲ ಹೇಳಿಮುಗಿಸುವ ಮೊದಲೇ ನಾನು ನಿಲ್ಲಿಸಬೇಕಾಗಿತ್ತು. ನಾನಿಂದು ನಿನಗೆ ಇನ್ನೊಂದು ಕಲಹದ ಬಗ್ಗೆಯೇ ಹೇಳಬೇಕು. ಅದಕ್ಕೆ ಮುಂಚೆ ಇದನ್ನು ಕೇಳು. ಯಾಕೆ ದೊಡ್ಡವರು ಅಷ್ಟು ಸುಲಭವಾಗಿ, ಅದೂ ಅಲ್ಲದೇ ತೀರಾ ಅಲ್ಪ ಸಂಗತಿಗಳಿಗೆ...

ಪ್ರೀತಿಯ ಕಿಟಿ, ಬಹಳ ಕಾಲದ ಮೇಲೆ ಈಗ ತಾನೆ ನಾನು ಮಮ್ಮಿಯಿಂದ ಒದೆ ತಿಂದೆ. ಇತ್ತೀಚೆಗೆ ನಾವು ಒಬ್ಬರಿಗೊಬ್ಬರು ಹೆಚ್ಚಾಗಿ ಬೆರೆಯುವುದಿಲ್ಲ. ಮಾರ್‍ಗೊಟ್ ಮತ್ತು ನನ್ನ ಸಂಬಂಧವೂ ಸರಿಯಾಗಿಲ್ಲ. ನಮ್ಮ ಮನೆಯ ನಿಯಮದಂತೆ ನಾವು ಈ ರೀತಿಯಲ್ಲಿ ಸಿಟ್ಟು ಸ...

ಪ್ರೀತಿಯ ಕಿಟಿ, ನಿನ್ನೆ ಸಂಜೆ ಮೇಲ್ಮಹಡಿಗೆ ಹೋಗಿ ವ್ಯಾನ್ಡ್ಯಾನ್‌ರಲ್ಲಿಗೆ ಹೋದೆ. ಆಗಾಗ ಹರಟೆ ಹೊಡೆದು ಬರಲು ಹಾಗೆ ಹೋಗುವುದು ಸಹಜ. ಅಲ್ಲಿ ಕೆಲವೊಮ್ಮೆ ಮಜವಾಗಿರುತ್ತದೆ. ನಾವೆಲ್ಲ ಅಲ್ಲಿ ಮೊತ್ ಬಿಸ್ಕತ್ತುಗಳ [ನ್ಯಾಪ್ತಲೀನ ಗುಳಿಗೆಗಳಿಂದ ತುಂಬ...

ಪ್ರೀತಿಯ ಕಿಟಿ, ಇವತ್ತು ನಿನಗೆ ಕೆಲವು ಸಾಮಾನ್ಯ ವಿಚಾರಗಳ ಹೇಳಬೇಕು. ಮಿಸೆಸ್ ವ್ಯಾನ್ಡ್ಯಾನ್‌ರನ್ನು ಸಹಿಸಲಾಗುತ್ತಿಲ್ಲ. ತುಂಬಾ ಮಾತನಾಡುವ ಒಂದೇ ಕಾರಣಕ್ಕೆ ನಾನು ಅವರಿಂದ ಒದೆ ತಿಂದೆ. ಒಂದಲ್ಲಾ ಒಂದು ರೀತಿಯಿಂದ ಅವರು ನಮಗೆ ಉಪದ್ರವ ಕೊಡುತ್ತಿ...

ಪ್ರೀತಿಯ ಕಿಟಿ, ವ್ಯಾನ್ಡ್ಯಾನ್ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಭಯಂಕರವಾಗಿ ಜಗಳವಾಡಿದರು. ಈ ಹಿಂದೆ ನಾನೆಂದೂ ಇಂತಹ ಜಗಳ ನೋಡಿರಲಿಲ್ಲ. ಮಮ್ಮಿ ಮತ್ತು ಡ್ಯಾಡಿ ಎಂದೂ ಹೀಗೆ ಪರಸ್ಪರ ಕೂಗಾಡಿ ಕಾದಾಡುವುದನ್ನು ಕನಸಲ್ಲೂ ಕಂಡಿರಲಿಕ್ಕಿಲ್ಲ. ಈ ಜಗಳಕ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...