Home / ಲೇಖನ / ಇತರೆ / ನಮಗೆ ನಿಮ್ಮ ಪ್ರೀತಿ ಸಾಕು

ನಮಗೆ ನಿಮ್ಮ ಪ್ರೀತಿ ಸಾಕು

‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂದಿದ್ದಾರೆ ಡಿವಿಜಿ. ಆದರೆ ಇವತ್ತು ಹಳೆ ಬೇರು ಹೊಸ ಚಿಗುರಿಗೆ ಬೇಡ ಎನ್ನುವುದಕ್ಕೆ ಪೂರಕವಾಗಿ ಒಂದು ಉದಾಹರಣೆ. ಯಾರೋ ಒಬ್ಬ ಹುಡುಗ ಹೆಣ್ಣು ನೋಡಲು ಹೋಗಿದ್ದ ಸಂದರ್‍ಭದಲ್ಲಿ ಆ ಹುಡುಗಿ ಹೇಳಿದ್ದಂತೆ ‘ನಿಮಗೆ ನಿಮ್ಮ ಅಪ್ಪ, ಅಮ್ಮನ ಮೇಲೆ ಪ್ರೀತಿ ಇದ್ದರೆ ನನ್ನ ತಕರಾರಿಲ್ಲ. ಆದರೆ ಅವರ ಫೋಟೋಗೆ ಮಾಲೆ ಹಾಕಿರಬೇಕು.’ ಒಂದು ಕ್ಷಣ ತಬ್ಬಿಬ್ಬು ಮತ್ತು ಆಘಾತ ಉಂಟು ಮಾಡುವ ಮಾತು. ಹಿರಿಯರ ಮೇಲೆ ಕಿರಿಯರಿಗಿರುವ ಪ್ರೀತಿ ಅಭಿಮಾನ ಮಾಯವಾಗುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಇದು ನೋವು ಕೊಡುವ ಸಂಗತಿಯಾದರೂ ಇವತ್ತಿನ ವಾಸ್ತವ.

ಬಾಲ್ಯದಲ್ಲಿ ತಂದೆ-ತಾಯಿಯ ಕೈಬೆರಳು ಹಿಡಿದು ಮಕ್ಕಳು ನಡುಗೆ ಕಲಿಯುತ್ತಾರೆ. ಬೆಳೆದು ದೊಡ್ಡವರಾಗುತ್ತಾ ತಮ್ಮ ಜೀವನದ ದಾರಿಯನ್ನು ಕಂಡುಕೊಂಡು ಹೆತ್ತವರ ಬೆಚ್ಚಗಿನ ಗೂಡಿನಿಂದ ದೂರ ಹಾರಿ ಹೋಗುತ್ತಾರೆ. ಹೀಗಿರುವಾಗ ಮಕ್ಕಳು ವೃದ್ಧಾಪ್ಯದ ಊರುಗೋಲು ಆಗಬೇಕು, ಕೊನೆಯ ಕಾಲದಲ್ಲಿ ಹತ್ತಿರವಿರಬೇಕು ಎನ್ನುವ ಒತ್ತಾಯ ಹೇರಿದರೆ ಕಿರಿಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಕಾಲ, ಪರಿಸರ ಇಂದು ನಿರ್‍ಮಾಣವಾಗಿದೆ. ಮಕ್ಕಳು ಹತ್ತಿರದಲ್ಲಿಲ್ಲ ಎನ್ನುವ ಕಹಿ ಭಾವನೆಯಿಂದ ಹಿರಿಯರು ಮುಕ್ತರಾಗಲೇಬೇಕು.

ಮುಪ್ಪಿನ ಕಾಲಕ್ಕೆ ಬೇಕಾದ ಆರ್‍ಥಿಕ ಭದ್ರತೆಯನ್ನು ಮಾಡಿಕೊಂಡು ಸ್ವತಂತ್ರವಾಗಿ ಜೀವನ ಸಾಗಿಸುವ ಆತ್ಮವಿಶ್ವಾಸವನ್ನು ಇವತ್ತಿನ ಹಿರಿಯರು ಬೆಳೆಸಿಕೊಂಡಿರುವುದರಿಂದ ಹಿಂದಿನಂತೆ ಮುಪ್ಪಿನಲ್ಲಿ ಮಕ್ಕಳಿಗೆ ಭಾರವಾಗಿರಲು ಇಷ್ಟಪಡುವುದಿಲ್ಲ. ಇದೊಂದು ಆರೋಗ್ಯಕರ ಬೆಳವಣಿಗೆ ಮಕ್ಕಳ ಮೇಲಿನ ಪ್ರೀತಿ ಅವರನ್ನು ಸೆಳೆಯುತ್ತಿದ್ದರೂ ಮಕ್ಕಳು ಎಲ್ಲಾದರೂ ಚೆನ್ನಾಗಿರಲಿ ಎನ್ನುವುದಷ್ಟೇ ಅವರ ಆಶಯವಾಗಿರುತ್ತದೆ.

ಮುಪ್ಪಿನಲ್ಲಿ ಹಿರಿಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ಮಾನಸಿಕ ನೆಮ್ಮದಿ. ಮಕ್ಕಳು ದೂರದಲ್ಲಿದ್ದರೂ ಮಾನಸಿಕ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದರೆ ಅದರಲ್ಲೇ ಹೆತ್ತವರಿಗೆ ಸಮಾಧಾನ ಸಿಗುತ್ತದೆ. ಆದರೆ ಇಂದಿನ ಕ್ಲಿಷ್ಟಕರ ಜೀವನದಲ್ಲಿ ಹಿರಿಯರಿಗೆ ಅದೇ ಸಿಗುತ್ತಿಲ್ಲ. ಇದು ದುರ್‍ದೈವ.

ಹಿರಿಯರು, ಕಿರಿಯರು ಎಲ್ಲರೂ ಒಟ್ಟಾಗಿ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿದ್ದ ಕಾಲದಲ್ಲಿ ಹಿರಿಯರಿಗೂ, ಕಿರಿಯರಿಗೂ ಜೀವನ ಸುಲಭವಾಗಿತ್ತು. ಹಿರಿಯರು ಮುಪ್ಪಿಗೆ ಜಾರಿದಾಗ ಕಿರಿಯರು ಅವರನ್ನು ಹೆಚ್ಚಿನ ಪ್ರೀತಿಯಿಂದ, ಮುತುವರ್‍ಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಆಧುನಿಕ ಜಗತ್ತಿನ ಬದಲಾಗುತ್ತಿರುವ ಮೌಲ್ಯಗಳನ್ನು ಒಪ್ಪಿಕೊಂಡು ಬದುಕುತ್ತಿರುವ ಹೆಚ್ಚಿನ ಮಕ್ಕಳಿಗೆ ಹಿರಿಯರು ತಮ್ಮೊಂದಿಗಿರುವುದು ಇಷ್ಟವಿಲ್ಲ. ಮಕ್ಕಳಿಂದ ದೂರವಾಗಿ ಒಬ್ಬಂಟಿಗರಾಗಿಯೋ, ವೃದ್ಧಾಶ್ರಮದಲ್ಲೋ ಇರುವ ಬಹುಪಾಲು ಹಿರಿಯರಿಗೆ ಮುಪ್ಪು ಒಂದು ಶಾಪ ವಾಗುತ್ತಿರುವುದನ್ನು ಸುತ್ತಲೂ ನೋಡುತ್ತೇವೆ. ಇದನ್ನು ಮೀರಿ ಮುಪ್ಪಿನ ಜತೆಗೆ ಬದುಕಲು ಕಲಿತಾಗ ಮಕ್ಕಳೇ ಆಧಾರ ಎನ್ನುವ ಭಾವದಿಂದ ಮುಕ್ತರಾಗಿ ಸಮಾಧಾನದಿಂದ ಜೀವಿಸಬಹುದು.

ಜಗವಿಡೀ ಹಬ್ಬಿರುವ ಇವತ್ತಿನ ಮಕ್ಕಳಿಗೆ ಹಿರಿಯರು ಹೊರೆಯಾಗುತ್ತಿರುವ ಪರಿಸರದಲ್ಲಿ ವಿಶ್ವ ಹಿರಿಯರ ದಿನವನ್ನು ಆಚರಿಸುವ ಸಂದರ್‍ಭದಲ್ಲಿ ಹಿರಿಯರು ಇದನ್ನು ಅರಿತುಕೊಂಡು ಕಿರಿಯರಿಗೆ ಭಾರವಾಗದೆ ಜೀವಿಸಬಲ್ಲೆವು ನಮಗೆ ನಿಮ್ಮ ಪ್ರೀತಿ ಮಾತ್ರ ಸಾಕು ಎನ್ನುವ ಅರಿವುಂಟುಮಾಡುವುದು ಹೆಚ್ಚು ಸೂಕ್ತ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...