Home / ಲೇಖನ / ಇತರೆ / ಕುರ್-ಆನ್ ಕತೆ

ಕುರ್-ಆನ್ ಕತೆ

ಬಹಳಷ್ಟು ಜನರಿಗೆ ಕುರ್-ಆನ್ ಬಗ್ಗೆ ತಿಳಿದಿಲ್ಲ. ಎಲ್ಲರಿಗೆ ತಿಳಿದಿರುವ ಅವಶ್ಯಕತೆ ಏನಿದೆ? ಎಂದು ನೀವೆಲ್ಲ ಕೇಳಬಹುದೇನೋ….

ಹೌದು! ನಮ್ಮ ದೇಶ ಸರ್ವಧರ್ಮಗಳ ಸಮನ್ವಯ ದೇಶ. ಎಲ್ಲ ಧರ್ಮಗಳ ಸಾರ ಒಂದೇ. ಅದು ತಿಳಿದಿದ್ದರೆ ಒಳ್ಳೆಯದಲ್ಲವೇ?

ಲಂಡನ್‌ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕುರ್-ಆನ್ ಹಸ್ತಪ್ರತಿಯೊಂದರ ತುಣುಕುಗಳು ಇಡೀ ವಿಶ್ವದಲ್ಲಿರುವ ತೀರಾ ಹಳೆಯ ಕುರ್-ಆನ್ ಹಸ್ತಪತಿಗಳಲ್ಲಿ ಒಂದು ಮೊತ್ತ ಮೊದಲನೆಯದೆಂದು ಜುಲೈ ೨೦೧೫ ರ ತಿಂಗಳಲ್ಲಿ ಸಂಶೋಧಕರು ಸತ್ಯವನ್ನು ಹೊರಗೆಡವಿದ್ದಾರೆ!

ಈ ಹಸ್ತ ಪ್ರತಿಯು ೧೩೭೦ ವರ್ಷಗಳಷ್ಟು ತೀರಾ ಹಳೆಯದಾಗಿದ್ದು ಪ್ರವಾದಿ ಮುಹಮ್ಮದ್ ಅವರ ಕಾಲಕ್ಕೆ ಸಂಪರ್ಕಕ್ಕೆ ತೀರಾ ನಿಕಟ ಸಂಬಂಧವಿದೆಯೆಂದು ಸಂಶೋಧಕರು ಪತ್ತೆ ಹಚ್ಚಿರುವರು. ಇದು ಚರ್‍ಮದ ಹಾಳೆಗಳನ್ನು ಹೊಂದಿದೆ. ಇದನ್ನು ಈಗಾಗಲೇ ಸಂಶೋಧಕರು ರೇಡಿಯೊ ಕಾರ್ಬನ್ ವಿಶ್ಲೇಷಣೆಗೆ ಒಳಪಡಿಸಿರುವರು.

ಹೀಗಾಗಿ ಈ ಹಸ್ತಪ್ರತಿಯು ೫೬೮ ರಿಂದ ೬೪೫ ನೆಯ ಇಸವಿಯಲ್ಲಿ ಸೃಷ್ಠಿಯಾಗಿದೆಯೆಂಬ ಒಮ್ಮತಕ್ಕೆ ಬಂದಿರುವರು.

ಈ ಸಂಶೋಧನೆಯು ನೂರಕ್ಕೆ ನೂರರಷ್ಟು ಖಚಿತವಾದುದ್ದು ನಿಖರವಾದುದ್ದು ಎಂದು ಇವರು ತಿಳಿಸಿರುವರು.

ಕಾರಣ- ಈ ಕುರ್ ಆನ್‌ನಲ್ಲಿ ಯಾವುದೇ ಸೇರ್ಪಡೆ ಬದಲಾವಣೆ ತಿದ್ದುಪಡಿ ಇರುವುದಿಲ್ಲ. ಮುಹಮ್ಮದ್ ಅವರ ದಿವ್ಯ ಸಂದೇಶವನ್ನೊಳಗೊಂಡಿರುವುದರಿಂದ ಇದೊಂದು ಪರಮ ಪವಿತ್ರ ಕುರ್‌ಆನ್ ಎಂದೇ ಖ್ಯಾತವಾಗಿರುವುದು.

ಇದರಲ್ಲಿ ಹಿಜಾಜಿ ಎಂದು ಕರೆಯಲಾಗುವ ಅರೇಬಿಕ್‌ ಆರಂಭಿಕ ಕಾಲದ ಲಿಪಿಯನ್ನು ಈ ಗ್ರಂಥದಲ್ಲಿ ಬಳಸಿರುವುದೊಂದು ವಿಶೇಷವಾಗಿದೆ.

ಇದು- ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಮಧ್ಯಪ್ರಾಚ್ಯ ಹಸ್ತಪ್ರತಿ ವಿಭಾಗದಲ್ಲಿ ಈ ಮಹಾ ಕುರ್‌ಆನ್ ಹಸ್ತ ಪ್ರತಿ ಇದೆ. ಇದನ್ನು ಬಲು ಅಮೂಲ್ಯವಾಗಿ ಅಪರೂಪವೆಂಬಂತೆ ಸಂರಕ್ಷಿಸಿ ಇಡಲಾಗಿದೆ.

ಬರ್ಮಿಂಗ್ ಹ್ಯಾಮ್‌ಗೆ ಯಾರೇ ಹೋಗಲಿ ವಿಶೇಷವಾಗಿ ಮುಸ್ಲಿಮ್ ಬಾಂಧವರು ಭೇಟಿ ನೀಡಿದವರೆಲ್ಲ ತಪ್ಪದೆ, ಮರೆಯದೆ, ಅದನ್ನು ವೀಕ್ಷಿಸಿ, ಅದಕ್ಕೆ ನಮಸ್ಕರಿಸಿ ಬರುವರು.

ಇದು ಕುರ್‌-ಆನ್ ಮಹತ್ವವೆಂದರೆ…
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...