ಉಮರನ ಒಸಗೆ – ೨೮

ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್‍ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! *****

ಮೂಡುತಿಹನದೊ

ಬಾನ ಬಣ್ಣ ಮಾಗಿಸಿ ಶಶಿ ಮೂಡುತಿಹನದೋ. ಸಂಜೆ ಹೂವನೆರಚಿ ಸಾರೆ ನಮ್ರವಾಗಿ ತಾರೆ ತೋರೆ ಶರದದಿರುಳ ಕರವ ಪಿಡಿದು ಏರುತಿಹನದೋ. ಉದ್ಯಾನದ ಪುಷ್ಪಬೃಂದ ಲಜ್ಜೆಯ ಸಿರಿ ಹೊಂದಿದಂದ ತೆಳು ಬೆಳಕಿನ ಮೇಲುದುವನು ಧರಿಸುವಂತಿದೋ. ತಮವನುಳಿದುವೆನುವ...

ಶಾಂತಿ ಮಳೆ

ಬರೀ ಮಾತುಗಳು ಇವು ಕೇವಲ ಅರ್ಥಕಳಕೊಂಡ ಶಬ್ದಗಳು ಬೀಜ ನೆಲದಲ್ಲಿ ಹೂತು ಪಸೆಯೊಡೆದು ಮೊಳಕೆ ಕಟ್ಟಿ ಬೇರು ಬಿಡುವತನಕ ಇವು ಅರ್ಥವಿಲ್ಲದ ಕೇವಲ ಮಾತುಗಳು. ಬರೀ ಮಾತುಗಳು ಇವು ಉಗುಳಿನ ವಿಷಕ್ಕೆ ನಂಜೇರಿದ ಮಹಾತ್ಮನ...

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ ದೀ ಮಹಾಕೃತಿಯಿಂದೊಲವು ಮಿಗೆ ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ| ಕೌಮುದಿಯೊಲೀ ಕನ್ನಡದೊಳಾ ಸೀಮಮೆನೆ ನೆಲಸಿಹುದಿದಂ ನೆಗ ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧|| ಮೊದಲ ಮಗನಾ ಶುಕನು ಭಾಗವ...

ಕನ್ನಡಿಗರು ನಾವು

ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು!...

ಸಿರಿಗೆರೆಯ ಸಿರಿದೇವಿ

ಸಿರಿಗೆರೆಯ ಸಿರಿದೇವಿ ಬನಶಂಕರಿ ಬನಗಿರಿಯ ಶಿವ ಶಿವಶಂಕರಿ ವರೇದೆ ತಾಯೆ ವೇದಾಂಭಿಕೆ ಪುಷ್ಪಾಂಕಿತ ಶೋಭಿತೆ ಸರ್‍ವೇಶ್ವರಿ ವಿಶ್ವನುತೆ ವಿಶ್ವಾಂಭರಿ ವಿಶ್ವೇಶ್ವರಿ ಮಹೋನ್ನತೆ ಮಹಾದೇವಿ ಮಾಹೇಶ್ವರಿ ಮುತ್ತೆ ದೆ ಸಿರಿತನದ ತಾಯೆ ಮುತ್ಯಾಲಮ್ಮ ಆನಂದದಾಯಿನಿ ಅನಂತ...

ಲೀಡಾ ಮತ್ತು ಹಂಸ

ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ. ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ ತೊಡೆಯಿಂದ...

ರಾಮಲಿಂಗ ದೇವಾಲಯ

ಲಕ್ಷ್ಮೇಶ್ವರದ ರಾಮಲಿಂಗ ದೇವಾಲಯದ- ಲೊಂದು ಸಾವಿರಲಿಂಗ ಮೂಡಿರಲು ಪಿಂಡದಲಿ ರಾಮೇಶ್ವರವೆ ಆಗುತದು ಭರತಖಂಡದಲಿ ಮೆರೆಯಬಹುದಿತ್ತೆಂದು ಜನರೊಂದು ವಿಸ್ಮಯದ ಮಾತ ನುಡಿವರು. ಅಕಟ! ಕೋಳಿ ಸೂರ್‍ಯೋದಯದ ಕಾಲಕ್ಕೆ ಕೂಗಿತ್ತು. ಆ ಶಿಲಾಖಂಡದಲಿ ಮೂಡಲಿಹ ಕೊನೆಯ ಲಿಂಗವನಳಿಸಿ!...

ಬನತುಂಬ ಮಳೆಬಿಲ್ಲು ಅತ್ತಿ ಬಾರ

ಮ್ಯಾಲ ತುಂತುರ ಹನಿಯು ತಂತಿ ವಾದ್ಯದ ಮುಗುಲು ಬನತುಂಬ ಮಳೆಬಿಲ್ಲು ಬಿತ್ತಿಬಾರ ಹನಿಹನಿಯು ಬಿದ್ದಲ್ಲಿ ಸವಿಮುದ್ದು ಇದ್ದಲ್ಲಿ ಭೂರಮಣಿ ಮೈಬಿಚ್ಚಿ ಹೂವು ತಾರ ಏಳು ಬಣ್ಣದ ಮುಗುಲು ಸಂಜಿ ಶೀತಲ ನವಿಲು ಗಗನ ಮಲ್ಲಿಗಿ...