ಊಳಿಡುತ್ತಿದೆ ಮತ್ತೆ ಬಿರುಗಾಳಿ. ನನ್ನ ಮಗು ತೊಟ್ಟಿಲಿನ ಕಟಕಟೆ, ಹೊದಿಕೆಗಳ ಮರೆಗಡಗಿ ನಿದ್ದೆ ಮಾಡುತ್ತಿದೆ. ಅಟ್ಲಾಂಟಿಕಕ್ಕೆ ಹುಟ್ಟಿ ಅಟ್ಟಿ ಹಾಯುವ ಗಾಳಿ ಹುಲ್ಲು ಛಾವಣಿ ಮೆದೆಯ ಎತ್ತಿ ಹಾರಿಸದಂತೆ ತಡೆವ ಅಡ್ಡಿಯೆ ಇಲ್ಲ – ಒಂದು ಬೆತ್ತಲ...

ಜ್ಯೋತಿಗಳ ಸಾಸಿರವನೊಳಕೊಂಡ ನಭದಲ್ಲಿ ನೂರು ಸೂರ್‍ಯರ ನಡುವೆ ನಿಂತು ಮಿನುಗುವ ತಾರೆ! ನಿನ್ನ ಕಿರುವೆಳಕ ದೊರೆವೆತ್ತಿಹೆನು, ಮೈದೋರೆ ನಿನ್ನ ಸುಂದರ ದೀಪ್ತಿ ನನ್ನ ಜೀವಿತದಲ್ಲಿ ನಿಸ್ಸೀಮ ನಿರವೇದ್ಯವನ್ನರಿವರಿಹರೆಲ್ಲಿ ಭೂತಲದಿ? ನನಗಿಲ್ಲ ಎಣ್ದೆಸೆಗ...

ಯೋಗ ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ ಸಹಜಯೋಗವೆ ಯೋಗ ರಾಜಯೋಗ ಮಾಡೂವ ಕೈ ಕೆಲಸ ನೆನಪಿನಾಟವ ಮಾಡು ಕರ್‍ಮಯೋಗವೆ ಯೋಗ ಮುದ್ದುಕಂದ ಸಂಸಾರ ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ ಸಂಸಾರ ಸುಂದರದ ದ್ರಾಕ್ಷಿತೋಟ ಹೂವು ಹಣ್ಣಿನ ತೋಟ ಮಾವು ಗಿ...

ಯೆಚ್ಗೆ ಯೆಂಡ ಕೇಳ್ತಾನಿದ್ರೆ ಮಚ್ನೆ ಎತ್ತಿ ಕೊಚ್ತೀನ್ ಅಂತ ಯೋಳ್ತೀಯಲ್ಲ ಮುನಿಯಣ್ಣ- ಕೊಲ್ಲೋ ಕೆಲಸ ಬದಕ್ಸೊ ಕೆಲಸ ಎಲ್ಲಾ ನಿಂಗೆ ಕೊಟ್ಟೋರಾರು? ಸಲ್ಲದ್ ಮಾತು ಕಾಣಣ್ಣ! ೧ ಮಾತ್ಗೆ ಮಾತು! ಯೇಟ್ಗೆ ಯೇಟು! ಯಾತ್ಕೆ ಯೋಳ್ತಿ ಕೊಲ್ತೀನ್ ಅಂತ? ಗ್ರಾಸ...

ದುಃಸಾಧ್ಯಸಂಭಾವ್ಯವೆಂಬ ಸೊಲ್ಲಿನ ಗುಲ್ಲು ಗುಡುಗಾಡುತಿದೆ. ಕನ್ನಡದ ಕನ್ನಡಿಯು ಒಡೆದು ಬೆಸೆಯ ಬರದಂತೆ ದೆಸೆದೆಸೆಗೆ ಬಿದ್ದಿದೆ. ಹಿಡಿದು ಕಟ್ಟಬಲ್ಲಾ ಕೈಯೆ ಕಾಣದಿದೆ. ಒಡಹುಲ್ಲು ಬೆಳೆಯೆ, ಹೂದೋಟ ಹುದುಗಿದೆ ನೆಲದೊಳೆಲ್ಲೆಲ್ಲು. ದನದ ಜಂಗುಳಿಯಂತೆ ...

ಎಂದಾದರೆಲ್ಲಾದರುಂ ತಿನಲೆಮಗಪ್ಪುದಷ್ಟೇ ಅಂದೀ ಮನುಜ ಕುಲವುದಿಸಿದಂದೆಷ್ಟೋ ಅಷ್ಟೇ ಉಂಬುದಷ್ಟಾದೊಡಂ ಹತ್ತಾರುಪಟ್ಟಧಿಕ ಕಷ್ಟ ವಿಂದದನು ಗಳಿಸಲಾ ದೂರದ ಪೇಟೆ ಯಂಗಡಿ ಸೇರಿಸಲೆಲ್ಲ ಶಕುತಿಯು ನಷ್ಟ – ವಿಜ್ಞಾನೇಶ್ವರಾ *****...

ಬೆಂಕಿಗೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ ಹೋದನೇ || ೧ || ಸೊಣ್ಣಕ್ಕೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ್ ಹೋದನೇ || ೨ || ನೀರಿಗೆ ಬಂದಾ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ...

ಇಂದು ನನ್ನ ಮನ ಮಲಿನ ವಾಯ್ತು ಸುಳ್ಳು ಮೋಸಗಳ ಹುಟ್ಟಿಸಿತ್ತು ಸುಖದ ಬಾಳಿನ ಗುರಿಗೆ ಯಾವುದಕ್ಕೆ ಹೇಸದೆ ವಟಗುಡಿಸಿತು ತೂತು ಹೊಂದಿದ ಮಡಕೆಯಲಿ ನೀರು ತಾನೇ ನಿಲ್ಲಬಹುದೆ ಆತ್ಮ ಸತ್ಯದ ದಾರಿಯಲ್ಲಿದಾಗ ಸುಳ್ಳಿದ್ದರೆ ಆತ್ಮ ನಲಿಯಬಹುದೆ! ಹೃದಯದ ಮನೆಯಲ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...