ಬೇಡಿದುದೆಲ್ಲವ ಕೊಡುವಾ ಜೋಳಿಗೆ ಬಯಸಿದ ತಾಣಕೆ ಒಯ್ಯುವ ಹಾವುಗೆ ದೊರೆತ ತೆರದಿ, ಮಗು, ರಾಜಕುಮಾರಗೆ ನಿನಗೂ ದೊರೆತೊಡೆ ಏಗೆಯ್ವೆ? “ಜೋಳಿಗೆ, ಜೋಳಿಗೆ, ಹಾರೆ ಕೊಡೆನುವೆ, ಒಂದೇ ನೆಗೆತಕೆ ಬಾನಿಗೆ ನೆಗೆವೆ, ಎತ್ತೆಡೆ ಹೋದರು ಬೆನ್ನೊಳೆ ಬರುವೀ...
(ಗೋ. ಕೃ. ಅವರಿಗೆ) ಎದುರು ಬಾನ ತೀರದಲ್ಲಿ ರಾಶಿ ರಾಶಿ ಹೊನ್ನ ಚೆಲ್ಲಿ ಸರಿಯುತಿಹಳು ಸಂಜೆ, ಕೆಳೆಯ, ಸ್ವರ‍್ಣಲುಬ್ಧವಾಗಿ, ಎಲೆಯ ಕೈಗಳಿಂದ ಬೊಗಸೆಯಾಯ್ದು ಹಳುವಿಹುದಿಕೊ ಹುಯಿಲಗಯ್ದು. ಇದನು ಕಂಡು ಕೊಂಕು ಚಂದ್ರ ನಗುತಿಹನದೊ ಮುಗಿಲಿನಿಂದ, ಕೊನೆ ಆ...
ತಾಳೆಯ ಹೂಹುಡಿ ಬಣ್ಣದ ಜೊನ್ನವು ಇರುಳೊಳು ಹರಡುತಿದೆ-ತಮ ತಿಳಿಯಿತು ಎನ್ನುತಿದೆ. ಅರಿಲಿನ ಕಿರುಕಿರು ದೋಣಿಗಳಾಗಸ- ದೆದೆಯೊಳು ತೇಲುತಿವೆ-ನಗು- ವಮರರ ತೋರುತಿವೆ. ಮುಗಿಲ ತೀರದೊಳು ರಾಜನೌಕೆಯಹ ಕರೆಯನು ಬಿಟ್ಟಿತಿಗೋ-ಮುದ- ಕೆಂದೆಯೆ ಸಾಗಿತಿಗೋ. ಕನಸ...
ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆನು, ದೀನಗಿಂತ ದೇವ ಬಡವ- ನೆಂದು ಬಗೆವೆನು. ನಿಜವು, ವಿಷ್ಣು ವಿಶ್ವದರಸು, ವಿಶ್ವಧಾಮನು, ಒಂದೆ ಹೆಜ್ಜೆಯಿಟ್ಟು ಬುವಿಯ ನಾಕವಳೆದನು, ಎಷ್ಟು ಚಿಕ್ಕದೆನ್ನ ಹೃದಯ; ಏನು ಹೊಲಸದು! ಇಲ್ಲು ನೆಲೆಯ ಬೇಡುವವನ ದೈನ್ಯ...
೧ ಬೆಳುಬೆಳಗಾಯಿತು, ಎಳಬೆಳಕಾಡಿತು ದೇವನ ಹಳ್ಳಿಯ ನೆಲ ನಲಿದಿತ್ತು. ಆತ್ಮೋಲ್ಲಾಸದ ಮಧುರಾಲಾಪದ ತೊಟ್ಟಿಲ ಮಗುವೊಲು ಜಗವುಲಿದಿತ್ತು. ಆಗಸ ಮಾನಸಸರದೊಳು ಮಿಂದೊಲು ತಣ್ಣನೆ ತೆಳುಗಾಳಿಯು ಬೀಸಿತ್ತು; ಎದುರಿನ ಹೊಲದೊಳು ಹೊಂಗೆಯ ತುರುಗಲು ಬೆಳಕಿನ ತುಂತ...
ಬುವಿಗಾಯಿತು ಬೆಳುದಿಂಗಳ ಸೇತುವೆ ಇಗೊ ಬನ್ನಿ ; ನಂದನವನ ಕುಸುಮಂಗಳ, ಕೆಳದಿಯರೇ, ತನ್ನಿ. ದೈನಂದಿನದಿಳೆಯಾರ‍್ತಿಯ ಪೂಜೆಗೆ ಆಸತ್ತು ಬೇಸತ್ತಿಹ ಮಾದೇವನ ನಲಿಸುವ ಈ ಹೊತ್ತು. ಬಾನ್‌ಬಟ್ಟೆಯೊಳಡಿಗೆಜ್ಜೆಯ ನೇವುರ ಝಣರೆನಲಿ, ಹಾಸಿಗೆಯೊಳು ಹಸುಮಕ್ಕಳು ...





