ಬೇಡಿದುದೆಲ್ಲವ ಕೊಡುವಾ ಜೋಳಿಗೆ
ಬಯಸಿದ ತಾಣಕೆ ಒಯ್ಯುವ ಹಾವುಗೆ
ದೊರೆತ ತೆರದಿ, ಮಗು, ರಾಜಕುಮಾರಗೆ
ನಿನಗೂ ದೊರೆತೊಡೆ ಏಗೆಯ್ವೆ?
“ಜೋಳಿಗೆ, ಜೋಳಿಗೆ, ಹಾರೆ ಕೊಡೆನುವೆ,
ಒಂದೇ ನೆಗೆತಕೆ ಬಾನಿಗೆ ನೆಗೆವೆ,
ಎತ್ತೆಡೆ ಹೋದರು ಬೆನ್ನೊಳೆ ಬರುವೀ
ಚಂದಕ್ಕಿ ಮಾಮನ ಛೂರ್‍ಗೈವೆ.”
*****
ಕನ್ನಡ ನಲ್ಬರಹ ತಾಣ
ಬೇಡಿದುದೆಲ್ಲವ ಕೊಡುವಾ ಜೋಳಿಗೆ
ಬಯಸಿದ ತಾಣಕೆ ಒಯ್ಯುವ ಹಾವುಗೆ
ದೊರೆತ ತೆರದಿ, ಮಗು, ರಾಜಕುಮಾರಗೆ
ನಿನಗೂ ದೊರೆತೊಡೆ ಏಗೆಯ್ವೆ?
“ಜೋಳಿಗೆ, ಜೋಳಿಗೆ, ಹಾರೆ ಕೊಡೆನುವೆ,
ಒಂದೇ ನೆಗೆತಕೆ ಬಾನಿಗೆ ನೆಗೆವೆ,
ಎತ್ತೆಡೆ ಹೋದರು ಬೆನ್ನೊಳೆ ಬರುವೀ
ಚಂದಕ್ಕಿ ಮಾಮನ ಛೂರ್‍ಗೈವೆ.”
*****