ಹೊತ್ತು ಮುಳುಗಿತು-ಮಾಸಿಹೋಯಿತು
ಭೂಮಿ ಹೊರಳುತ ನಸುಕೊಳು,
ತಾಯಿ ಕಣ್ಮರೆಯಾಗೆ ಧೂಳಿನೊ-
ಳಾಡಿ ಮಾಸುವ ಮಗುವೊಲು.
ಕತ್ತಲಾಯಿತು ಹೊಳೆದುವಿದಿಗೋ
ಮೇಲೆ ಚುಕ್ಕಿಗಳಂದದಿ,
ಅಂಧಕಾರದ ತೆರೆಗಳಾವುದೊ
ಬೆಳಕ ಬಿಂಬಿಸುವಂದದಿ.
ತಲದಿ ನಾನಿಹೆನೀ ಪ್ರರಾತನ
ತಮಕು ತಾರೆಗು ಮೋಹಿಸಿ,
ನಿಜ ವಿಷಾದದೊಳಲ್ಲಿಗಲ್ಲಿಗೆ
ಹೊಳೆವ ಭಾವಕೆ ಹೋಲಿಸಿ.
*****








