ಸ೦ಧ್ಯಾ

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ 'ಮುನಸ್ಸೀನ'ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು ಸುರಕನ್ಯೆ ಹಣತೆಯಿದ ತೇಲಿಸಿಹ- ಳೆನುವಂತೆ...

ಕವಿ

ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ, ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ, ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ- ರಾಳದೊಳು ಸಂತತಂ ಸಂಜನಿಸುವಾನಂದ- ಮಾತೃಕೆಯೆ ತಾನಾದ, ವಿಶ್ವ...

ಋತದ ಮೊದಲ ಕಣಸು

ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು' ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ ಇಹದ ರಚನೆಯ ಕಂಡು!...

ಕೆರೆಯ ತಡಿಯಲ್ಲಿ

೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ ಗೆಲವಿತ್ತು. “ಕ್ಲೇಶವ...

ಒಂದಿರುಳು

ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ ದೀಪ ಜೀವದೊಂದಿಗಿದ್ದಿತು. ಪಾನಭೂಮಿಯಲ್ಲಿ ಮತ್ತ- ಜನದ...

ಶರಾವತೀ ಜಲಪಾತ ನಿರ್ಘೋಷ

ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ ಚಿತ್ರತರ ಭ್ರಗುಪತನ ಘೋಷವನು- ಮೌನದಳತೆಗೆ ಶಬ್ದ...

ನಂದಿಯ ಬೆಟ್ಟದ ಮೇಲುಗಡೆ

ಬೇಡದೆ ಬಿಸುಡಿದ ವಸ್ತುವೊಲಾಯ್ತಿಳೆ ಕೆಳ ಕೆಳಗಾಳದ ಕಣಿವೆಯೊಳು; ಕಪ್ಪೆಯ ಗೂಡೋ, ಹುತ್ತವೊ ಇದು ಎನೆ ನಗೆಗೇಡಾಯಿತು ನೆರೆಹೊಳಲು; ಕೆರೆಯೋ ಕೊಚ್ಚೆಯೊ, ಪೈರೋ ಪಾಚೆಯೊ, ಹಳುವೋ ಹುಲ್ಗಾವಲ ಹರಹೋ? ಎನ್ನುತ ಭ್ರಮಿಸುವ ತೆರವಿಂದಾಯಿತು ನಂದಿಯ ಬೆಟ್ಟದ...

ಕಾರ್ತೀಕ

ಕನಸಿಗರಿಗೆ ಮಾಸವೇಕ ಕಣಸುತರುವ ಕಾರ್ತಿಈಕ! ನಿಯತಿ ತನ್ನ ಬಿಡುವಿಗೆಂದು ಮೀಸಲಿಡುವ ಕಾಲವಿಂದು. ನಿಗಿ ನಿಗಿ ನಿಗಿ ನಗುವ ಹಗಲು, ಝಗಿ ಝಗಿ ಝಗಿ ಝಗಿಸುವಿರಳು. ಬಹು ಮನೋಜ್ಞ ಲಲಿತ ಮಧುರ- ರಾಗ ರಚಿತ, ಭಗಣರುಚಿರ...

ಕೊಳದೆಡೆಯ ಇರುಳು

ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್ಚಲ ಕಿಂಚಿನ್ಮೀಲಿತ- ಫಾಲಾಂಬಕಮೆನಲು,...

ಮೀನಕನ್ಯೆ

ಚಾರು ಶಾರದ ಸಂಧ್ಯೆ, ನೀರ ನೀಲಾಕಾಶ ಪೇರಾಳದರ್ಣವವ ಹೋಲುತಿತ್ತು. ಜಲಸಸ್ಯ ನಿವಹದೊಲು ಜಲದವಂಚಿನೊಳಿತ್ತು, ಎಳೆಯ ಪೆರೆ ಪಾತಾಳ ಯಾನದಂತೆ. ಬಾನಿನಂತರದಲ್ಲಿ ಮೀನಂತೆ ತೇಲಿದುವು ವೈನತೇಯಗಳೆರಡು ಗರಿಯಲುಗದೆ. ಅಡಿಯೊಳಗೆ ನಾನಿದ್ದೆ ಕಡಲ ಕರುಮಾಡದೊಳು ಬಿಡುವಿಗೆಳಸುವ ಮೀನಕನ್ಯೆಯಂತೆ....