Home / ಮರ್ಯಾದಸ್ಥ ಮನುಷ್ಯರಾಗೋಣ

Browsing Tag: ಮರ್ಯಾದಸ್ಥ ಮನುಷ್ಯರಾಗೋಣ

ಕೆಲವು ವರ್ಷಗಳ ಹಿಂದಿನ ಮಾತು. ನಾನು ಚಿತ್ರದುರ್ಗ ಜಿಲ್ಲೆಯ ಮರಿಕುಂಟೆ ಎಂಬ ಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆ. ಲೇಖಕ ತಿಪ್ಪಣ್ಣ ಮರಿಕುಂಟೆ ಅವರು ತಮ್ಮ ಹಳ್ಳಿಯ ಜನರನ್ನುದ್ದೇಶಿಸಿ ಭಾಷಣ ಮತ್ತು ಸಂವಾದಕ್ಕೆ ಕರೆದಿದ್ದರು. ಅದು ರಾತ್ರಿ ಭಾಷಣ. ಹ...

ಗೆಳೆಯ ಜಾಣಗೆರೆ ವೆಂಕಟರಾಮಯ್ಯನವರು ಇತ್ತೀಚೆಗೆ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವು ಉತ್ತಮ ಕತೆ, ಕಾದಂಬರಿಗಳನ್ನು ಕೊಟ್ಟಿರುವ ಜಾಣಗೆರೆಯವರು ಕನ್ನಡ ಚಳವಳಿಯಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಲೇಖಕರು. ಸಾಮಾಜಿಕ ಕಾಳ...

ಗೆಳೆಯರಾದ ಆರ್. ನಾಗೇಶ್ , ಶ್ರೀ ಮುಕುಂದರಾಜು ಮತ್ತು ಶ್ರೀ ವೆಂಕಟರಾಜು ಅವರು ಇತ್ತೀಚೆಗೆ ನನ್ನ ಮನೆಗೆ ಬಂದರು. ಮುಕುಂದರಾಜು ‘ಮುಳ್ಳಿನ ಕಿರೀಟ’ವನ್ನು ಮುಂದಿಟ್ಟು ‘ನಾನು ನಿಮ್ಮನ್ನ ಏನೂ ಕೇಳಿಲ್ಲ ಸಾರ್. ದಯವಿಟ್ಟು ಇದಕ್ಕೆ ಮುನ್ನುಡಿ ಬರ್‍ಕೊಡ...

ಪತ್ರಿಕಾ ರಂಗವನ್ನು ಪ್ರವೇಶಿಸಿದ ಅನೇಕ ಲೇಖಕರು ಪೂರ್ಣ ಪತ್ರಕರ್ತರಾಗಿ ಪರಿವರ್ತನೆ ಹೊಂದುವುದು ಅಥವಾ ಪತ್ರಿಕಾ ಲೇಖಕರಾಗಿ ರೂಪಾಂತರಗೊಳ್ಳುವುದು ಒಂದು ಅನಿವಾರ್ಯ ಪ್ರಕ್ರಿಯೆಯೆಂಬಂತೆ ಭಾವಿಸಲಾಗಿದೆ. ಇದು ಬಹುಪಾಲು ನಿಜವಾಗುತ್ತಿರುವುದು ಇಂತಹ ಭಾ...

“ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು ಯೋಗ್ಯತೆಯ ಪರೀಕ್ಷೆಗೆ ಕಳಿಸಿಕೊಟ್ಟರು. ಆ ಎರಡೂ ...

ಪ್ರಗತಿಪರ ಚಳವಳಿಗಳ ಗೆಳೆಯ, ನನ್ನ ಆತ್ಮೀಯ, ಆರ್‌.ವಿ. ಭಂಡಾರಿಯವರು ಇನ್ನಿಲ್ಲ. ಅಕ್ಟೋಬರ್ ೨೫ರಂದು ಸಾಯಂಕಾಲ ಅವರ ನಿಧನದ ಸುದ್ದಿ ನನಗೆ ತಲುಪಿದಾಗ ತಬ್ಬಲಿತನದ ಅನುಭವವಾಯಿತು. ನನಗೆ ತಬ್ಬಲಿತನ ಕಾಡಿದ್ದು ಯಾಕೆಂದು ಪ್ರಶ್ನಿಸಿಕೊಂಡಾಗ ಭಂಡಾರಿಯವ...

ಡಾ. ಬೆಸಗರಹಳ್ಳಿ ರಾಮಣ್ಣ ೧೯೯೮ ಜುಲೈ ೧೩ರಂದು ನಮ್ಮನ್ನು ದೂರ ಸರಿಸಿ ಕೊನೆಯದಾರಿ ಹಿಡಿದೇಬಿಟ್ಟರು. ಅದು ನಾವು ಕಾಣದ ದಾರಿ, ಕಾಣದ ಸತ್ಯಗಳನ್ನು ಹುಡುಕುತ್ತ, ಹಿಡಿದಿಡುತ್ತ, ಕತೆ ಕಟ್ಟುತ್ತಿದ್ದ ಈ ಗೆಳೆಯ, ಸಾವಿನ ಸತ್ಯವನ್ನು ಇಷ್ಟು ಬೇಗ ಹುಡುಕ...

ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಾಗಬೇಕೆಂದು ರಾಜ್ಯದ ಬಿ.ಜೆ.ಪಿ. ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಈ ‘ಸಂಕಲ್ಪ’ ಸರ್ಕಾರ ಮತ್ತು ಸರ್ಕಾರದ ಸಮಾನ ಮನಸ್ಕರದಾಗಿದೆಯೇ ಹೊರತು ಸಮಸ್ತ ಸಾಂಸ್ಕೃತಿಕ ಲೋಕದ್ದಾಗಿಲ್ಲ; ಸಮಸ್ತ ಶಿಕ್ಷಣ ಕ್ಷೇತ್ರದ್ದೂ ಆ...

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ ವಹಿಸಿಕೊಂಡವರು ಸ್ಥಳೀಯ ...

೨೦೦೯ರ ಲೋಕಸಭಾ ಚುನಾವಣೆಯು ಅನೇಕ ದೃಷ್ಟಿಗಳಿಂದ ಮಹತ್ವ ಪಡೆದಿದೆ. ಅತಂತ್ರ ಲೋಕಸಭೆಯ ನಿರೀಕ್ಷೆಯಲ್ಲಿ ಹಗ್ಗ ಜಗ್ಗಾಟಕ್ಕೆ ಸಿದ್ದವಾಗಿಯೇ ಚುನಾವಣೆಗಿಳಿದ ಪಕ್ಷಗಳಿಗೆ ನಿರಾಶೆಯಾಗಿದೆ. ನಿರೀಕ್ಷೆ ಮೀರಿ ಬೆಂಬಲಗಳಿಸಿದ ಕಾಂಗ್ರೆಸ್‌ಗೆ ಸಂಭ್ರಮವೆನಿಸಿ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...