ಭಾವನಾ ಪ್ರಪಂಚ

ಭಾವನಾ ಪ್ರಪಂಚದೊಳಗೆ ತೇಲಿ ನಲಿವುದೇ ಸುಖ ಕೋವಿದರನು ಕಮಡು ತಿಳಿದು ಸುಮ್ಮನಿರುವುದೇ ಸುಖ ಬೇಕು ಎಂಬ ಮಾತು ಬಿಟ್ಟು ಬೇಡವೆಂಬುದೇ ಸುಖ ಲೋಕದಾಟವೆಲ್ಲ ನೋಡಿ ನಗುತಲಿರುವುದೇ ಸುಖ ಉತ್ತಮರೊಳು ಸೇರಿ ಕಾಲ ಕಳೆದುಕೊಂಬುದೇ ಸುಖ...

ಪ್ರೇಮ

ನನ್ನ ಬುದ್ಧಿ ಶಕ್ತಿಯೆಲ್ಲ ಮಾಯವಾಯಿತು ನಿನ್ನ ದಿವ್ಯ ಪ್ರಭೆಯದೊಂದು ಬೆಳಗಿ ಎದ್ದಿತು ನನ್ನ ತನವು ತಗ್ಗಿ ಕುಗ್ಗಿ ಕೆಳಗೆ ಇಳಿಯಿತು ನಿನ್ನ ಪ್ರೇಮ ತುಂಬಿ ತುಳುಕಿ ಉಕ್ಕಿ ಹರಿಯಿತು ಬಂತು ಬಂತು ಏನೊ ಬಂತು...

ಯಾತ್ರಿಕ

ಜಡ ಮಾನಸವ ತಟ್ಟಿ ಚೇತನವ ಬಿತ್ತರಿಸಿ ಸಾಗುತಿಹ ಓ ಯಾತ್ರಿಕ ತಾಳಣ್ಣ ನಾ ಬರುವೆ ಹಿಂದಿಷ್ಟು ಸೋತಿರುವೆ ದಿಬ್ಬಗಳ ಹಾಯ್ವತನಕ ಮುಳ್ಳೆಷ್ಟೊ ತುಳಿದಿಹೆನು ಕಲ್ಲೆಷ್ಟೊ ಎಡವಿದೆನು ಹಸಿವಿನಿಂ ಸೊರಗುತಿಹೆನು ನಿಲ್ಲಣ್ಣ ನಿಲ್ಲಣ್ಣ ನಿನ್ನಂಥ ಪಯಣಿಗರ...

ಪ್ರಕೃತಿ ಜನ್ಯ

ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ಏನಿದೆನ್ನುತ...

ಗುರುದೇವ

ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ನೋಡುತಲಿರುವೆನು...

ಪಯಣ

ಏತಕೋ ನಾನಿಲ್ಲಿ ಸುಳಿಯುತಿಹೆನು ಆವುದೋ ಬೆನ್ನಟ್ಟಿ ಬರುತಲಿಹುದು ಆವುದೋ ಕೈಸನ್ನೆ ಗೆಯ್ಯುತಿಹುದು ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು ಪಾಶವೋ ಕಂಡತ್ತ ಸೆಳೆಯುತಿಹುದು ರೂಪವೋ ಕಣ್‌ತುಂಬಿ ಹನಿಸುತಿಹುದು ಭಾವವೋ ರಭಸದಿಂ ಹರಿಯುತಿಹುದು ಪಯಣವೋ ಚಣಚಣಕು ಸಾಗುತಿಹುದು ಈಗಲೋ...

ದಿಗ್ವಿಜಯ

ತಂದಿಹೆಯ ತಕ್ಕಡಿಯ ತೂಗುವುದಕೆ? ಭೂಮಿ ಆಕಾಶಗಳು ಸಾಲವಿದಕೆ. ಚಾಚಿಹೆಯ ನಾಲಿಗೆಯ ಸವಿಯುವುದಕೆ? ಒಂದಲ್ಲ, ಎರಡಲ್ಲ ನುಂಗುವುದಕೆ. ಮಾಡಿಹೆಯ ಲೆಕ್ಕವನು ತಿಳಿಯುವುದಕೆ? ದಾಟಿಹುದು ಸಂಖ್ಯೆಗಳ ಲೆಕ್ಕವೇಕೆ? ನೀಡಿಹೆಯ ಕರಗಳನು ಹಿಡಿಯುವುದಕೆ? ಗೋಳವಿದು ತುದಿಮೊದಲು ತೋರದಿದಕೆ. ಕಂಗಳನು...

ರೂಪ

ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್ಡಿತು...

ಪ್ರಕೃತಿ

ಕಾಲರಾಯನ ಗರ್ಭದಿಂದ ಸೀಳಿ ಬಂದೆನು ದೇಹದೊಡನೆ ವೇಳೆ ಮುಗಿದರೆ ನಿಲ್ಲಲಾರೆನು ತಾಳು ನಿನ್ನನ್ನು ನುತಿಪೆನು ನನ್ನ ಹಿಂದಿನ ಸುಕೃತ ಫಲವೊ ನಿನ್ನ ಕರುಣದ ಸಿದ್ಧಿಬಲವೊ ಮಾನ್ಯ ಗುರು ಸರ್ವೇಶನೊಲವಿಂ ಮಾನವತ್ವವ ಪಡೆದೆನು ಮಾರುಹೋದೆನು ಜಗವ...

ವಿಶ್ವಲೀಲೆ

ಬಣ್ಣಬಣ್ಣದ ಭಾವಗಳ ಬಲೆಯೊಡ್ಡಿ ನಿಂತಿದೆ ಈ ಜಗ ಕಣ್ಣುಕುಕ್ಕುವ ನೋಟವಿದು ಯಜಮಾನ ಕಾಣನು ಸೋಜಿಗ ಅತ್ತ ಸೆಳೆವುದು ಇತ್ತ ಸೆಳೆವುದು ಇಲ್ಲದಿರುವನು ಕಲ್ಪಿಸಿ ವ್ಯರ್ಥಮಪ್ಪುದು ಮರುಚಣವೆ ಇದೊ ಬಂದೆನೆಂಬುದು ವ್ಯಾಪಿಸಿ ಏನು ಸಿಂಗರ ಮದುವೆ...