ಏತಕೋ ನಾನಿಲ್ಲಿ ಸುಳಿಯುತಿಹೆನು
ಆವುದೋ ಬೆನ್ನಟ್ಟಿ ಬರುತಲಿಹುದು
ಆವುದೋ ಕೈಸನ್ನೆ ಗೆಯ್ಯುತಿಹುದು
ಲಗ್ಗೆಯೋ ದಿಶೆದಿಶೆಗು ಮೊಳಗುತಿಹುದು
ಪಾಶವೋ ಕಂಡತ್ತ ಸೆಳೆಯುತಿಹುದು
ರೂಪವೋ ಕಣ್‌ತುಂಬಿ ಹನಿಸುತಿಹುದು
ಭಾವವೋ ರಭಸದಿಂ ಹರಿಯುತಿಹುದು
ಪಯಣವೋ ಚಣಚಣಕು ಸಾಗುತಿಹುದು
ಈಗಲೋ ಆಗಲೋ ಸ್ತಬ್ಧವಹುದು
ಸಾಹಸೀ, ಮಥನದಿಂ ಸವಿ ಮಧುವನು
ದೊರೆತುದನು ಕಂಡವರಿಗುಣಿಸು ನೀನು
ಜನಕಜೇ, ಮಿಂಚಿನೊಳು ಕಾಣು ಜೇನು
*****