ನನ್ನ ಬುದ್ಧಿ ಶಕ್ತಿಯೆಲ್ಲ ಮಾಯವಾಯಿತು
ನಿನ್ನ ದಿವ್ಯ ಪ್ರಭೆಯದೊಂದು ಬೆಳಗಿ ಎದ್ದಿತು
ನನ್ನ ತನವು ತಗ್ಗಿ ಕುಗ್ಗಿ ಕೆಳಗೆ ಇಳಿಯಿತು
ನಿನ್ನ ಪ್ರೇಮ ತುಂಬಿ ತುಳುಕಿ ಉಕ್ಕಿ ಹರಿಯಿತು
ಬಂತು ಬಂತು ಏನೊ ಬಂತು ಹೇಳಲಾರೆನು
ಸಾಕು ಸಾಲದಾಗಿ ನಾನು ಸ್ತಬ್ಧಳಾದೆನು
ಕಳ್ಳನಂತೆ ಒಳಗೆ ಅಡಗಿ ಕೆಣಕುತಿರುವೆಯಾ?
ನಿಲ್ಲು ಇನ್ನು ನಿನ್ನ ಬಿಡೆನು ನಾನು ಜನಕಜೆ!
*****