ಒಂದು ಸುಡು ಮಧ್ಯಾಹ್ನ

ಪವರ್‌ಕಟ್‌ದ
ಒಂದು ಸುಡು ಮಧ್ಯಾಹ್ನ
ಹೊರಟೆ ಹುಡುಕಲು
ದೇವರ ಉಸಿರಾಟ

ಒಂದೂ ಎಲೆ ಅಲುಗಾಡುತ್ತಿಲ್ಲ
ಎಲ್ಲಿ ಹೋದನಪ್ಪ ಶಿವ
ಒಂದರ ಹಿಂದೊಂದು
ಬೈಗುಳ ಉಪಯೋಗಿಸಿ
ಬೆವರೊರೆಸಿಕೊಳ್ಳುತ್ತಿದ್ದೆ-

ಸೆಲ್ಯುಲಾರ್ ಕನೆಕ್ಟ್ ಆಯಿತೇನೋ
ಬಿರುಗಾಳಿಯ ತಿರುಗಣಿ ಬಂದು
ಕಣ್ಣು ಕಿವಿ ಬಾಯಿ ಮೂಗು ತುಂಬಿ
ಕುಕ್ಕರಿಸಿತ್ತು ಹತ್ತಿರದ ಛಾವಣಿ ಮೂಲೆಗೆ.

ಇನ್ನೊಮ್ಮೆ, ನನ್ನ ಉಸಿರಾಟ
ಹುಡುಕಿದರೆ ಜೋಕೆ ಎಂದು ಹೇಳಿ
ಎಲ್ಲಿಯೋ ಓಡಿ ಹೋಗಿಯೇ ಬಿಟ್ಟಿತು
ತಿರುಗಿ ನೋಡುವುದರಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮ
Next post ದೃಷ್ಟಿ – ಅಂತರ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…