Home / ಏನೆಂದು ಹಾಡಲಿ

Browsing Tag: ಏನೆಂದು ಹಾಡಲಿ

ದಿನಪತ್ರಿಕೆಯ ಪುಟವ ತಿರುಗಿಸಲು ಕಾಣುತಿಹವು ಸಾವು ರೈತರ ಆತ್ಮಹತ್ಯೆ ಸಾವು ಅಲ್ಲಿ ಸಾಯುವನು ಇಲ್ಲಿ ಸಾಯುವನು ದಿನವು ಸಾಯುವರು ಮಣ್ಣಿನ ಮಕ್ಕಳು ದಿನವು ಸಾಯುತಿದೆ ದೇಶದೊಕ್ಕಲು ಬೆನ್ನೆಲುಬು ಬಾನು ಬಿಕ್ಕಲು ಬೀಜ ಬಂಜೆಯಾಯಿತೋ ರೋಗ ಮುತ್ತಿತೋ ಮಳೆ...

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ ನಿಸರ್ಗವೆಲ್ಲಾ ಚೆಲುವಿನ ತವರು ಶ...

ಕಾಡುತಿದೆ ಭೂತ ಅನೇಕ ರೂಪಗಳಲ್ಲಿ ಅನೇಕ ಪರಿಗಳಲ್ಲಿ ಮನೆ ಬಾಗಿಲು ಕಿಟಕಿಗಳ ಕೊನೆಗೆ ಕೋಣೆ, ಮೆಟ್ಟಲುಗಳ ದಿಕ್ಕ ದೆಸೆಗಳ ನಿರ್ಧರಿಸುತ್ತದೆ ಸಾಯುವ ಹುಟ್ಟುವ ಕ್ಷಣ ಗಣನೆಗಳ ಗುಣುಗುಣಿಸಿ ಪೂಜೆ ಬಲಿದಾನಗಳ ಮಾಡಿಸುತ್ತದೆ ಗಂಡು ಹೆಣ್ಣು ಕೂಡಿಸಲು ಓಡಿ ...

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ|| ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧|| ಮೂಡಲ ದೇಶದ ಬುಡುಬುಡುಕ್ಯಾನಾ ಹಾಡನು ಹಾಡುತ ಬಂ...

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ|| ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧|| ವಿದ್ಯೆಯ ಕ...

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ|| ಶಾಲು ಬಣ್ಣದ ಹೊದ್ದೋನ್ಯಾರೆ ಲೋಲು ಕಿನ್ನುರಿ ನುಡಿಸೋನ್ಯಾರೆ ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ|| ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ ಕಾವಾಳದೊಳಗೊಂದು ಕೋಲ್ಮಿಂಚು ಹೊಳ...

ಅಕ್ಷರ ಜ್ಯೋತಿಯ ಬೆಳಗೋಣ ನಾವ್ ಅಕ್ಷರ ಸುಖವನು ಪಡೆಯೋಣ ||ಪ|| ಬಾಳಿನ ನೆಮ್ಮದಿ ಸುಖ ಸೌಭಾಗ್ಯದ ಮನ್ವಂತರಕಿದು ಮೊದಲ ಪಣ ನೂತನ ಸಮಾಜ ಕಟ್ಟೋಣ ನಾವ್ ಭವ್ಯ ಭಾರತವ ಬೆಳೆಸೋಣ ||೧|| ಅಜ್ಞಾನವೆಂಬ ಕತ್ತಲೆ ಮನೆಯಲಿ ಕೊಳೆಯುತ ಬಾಳೋದು ಸಾಕಣ್ಣ ಜ್ಞಾನದ ...

ನಗ್ತರಲ್ಲೋ ತಮ್ಮ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಪ|| ಎದುರಿಗೆ ಕೊಂಡಾಡಿ ಭಾಷಣ ಬಿಗಿದಾಡಿ ಹಿಂದಿಂದೆ ನಗ್ತಾರೋ ತಮ್ಮಾ ನಮ್ಮನ್ನು ನಗ್ತಾರಲ್ಲೋ ಅಣ್ಣಾ ||ಅ.ಪ.|| ನೀನೇ ದೇಶಕ್ಕೆ ಬೆನ್ನೆಲುಬು ಅಂತಾರೆ ತಾಂಡವ ತುಳದಾರೆ ಮ್ಯಾಲೆ ದೇಶಕ್ಕೆ ಅನ್ನ...

ದುಡಿಮೆಯೆ ದೇವರು ದುಡೀ ದುಡೀ ಅಕ್ಷರ ಬ್ರಹ್ಮನ ಪಡೀ ಪಡೀ ||ಪ|| ಭೂಮಿ ತಾಯಿಯು ದುಡಿತಾಳೆ ಸೂರ್ಯ ಚಂದ್ರರು ದುಡಿತಾವೆ ಗಾಳಿ ಬೀಸುತಾ ನೀರು ಹರಿಯುತಾ ಬೆಂಕಿ ಉರಿಯುತಾ ದುಡಿತಾವೆ ||೧|| ದುಡಿಮೆಯಿಂದಲೇ ಕೋಟೆ ಕೊತ್ತಲ ವೈಭವ ರಾಜ್ಯವು ಮೆರೆದಾವೆ ಗ...

ಧರ್ಮಾ ಧರ್ಮಾ ಅಂತಾರೋ ಎಲ್ಲಿದೆ ಧರ್ಮಾ ತೋರಿಸರೋ ||ಪ|| ನಮ್ಮದು ಧರ್ಮಾ ನಿಮ್ಮದು ಧರ್ಮಾ ಅವರದು ಧರ್ಮಾ ಅಂತಾರೆ ಜನಗಳ ನಡುವೆ ಗೋಡೆಗಳೆಬ್ಬಿಸಿ ಆಗಸ ಕಾಣದೆ ನಿಂತಾರೆ ||೧|| ಕೊಂಬಿ ರೆಂಬಿಗಳ ಜೋತು ಬಿದ್ದು ಅವುಗಳೆ ಮರ ಮರ ಅಂತಾರೆ ಬೊಡ್ಡೆಗೆ ಕ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...