ಮೂಡಿ ಬಂದ ಹೊಸ ವರುಷ ಹೊಸ ಹರುಷ ನೀಡಲಿ ಹಳೆಯದರಲಿ ಒಳಿತನುಳಿಸಿ ಹೊಸ ಗೀತೆ ಹಾಡಲಿ|| ಒಣಗಿ ನಿಂತ ವನರಾಶಿಗೆ ಹಸಿರೋಕುಳಿ ಚೆಲ್ಲಲಿ ಬರಡಾಗಿಹ ಈ ಬುವಿಗೆ ಹನಿಯೆರಡ ಎರೆಯಲಿ ಎಲ್ಲರೆದೆಯ ಹೂದೋಟದಿ ನವ ಕುಸುಮಗಳರಳಿಸಿ ಭ್ರಾತೃತ್ವದ ಸಿರಿಗಂಪನು ದಿಕ್‌ದ...
ಮೂಲ: ವಿ ಎಸ್ ಖಾಂಡೇಕರ ತೆಂಗಿನ ಗರಿಗಳ ಗುಡಿಸಲಿನ ಮುಂದೆ ಕುಳಿತು ಅಂತೂನನು ದಾರಿ ಕಾಯುತ್ತಿದ್ದ. ಅಂದವಾದ ಚಂದ್ರಕಲೆಯನ್ನು ತನ್ನ ಆಟಿಗೆಯನ್ನಾಗಿ ಮಾಡಿಕೊಳ್ಳಲು ಹವಣಿಸುವ ಬಾಲಕನ ಚೀರಾಟದಂತೆ ದೂರಿನಿಂದ ಸಮುದ್ರದ ತೆರೆಗಳ ಸಪ್ಪಳವು ಕೇಳಬರುತ್ತಿತ್...
ಗೀಚಿ ಗೀಚಿ ಬಣ್ಣ ಗೀಚಿ ಹಾರಿತು ಚಿಟ್ಟೆ ರೆಕ್ಕೆ ಬಿಚ್ಚಿ *****...
ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ) ಎಚ್ಚರಾಯಿತು ನಮಗೆ ಅದೆಷ್ಟು ಸಹಸ್ರವರ್ಷ ನಿದ್ದೆಯಿಂದಲೊ ಏನೊ ತಿಳಿಯಲಿಲ್ಲ. ಹದ್ದು ಹಾರಿತು ಮತ್ತೆ ಬಿಸಿಲಿನಲ್ಲಿ ಹಿಂದೆಂದಿನಂತೆ ಅಂತ ಅನಿಸಲಿಲ್ಲ. *****...
ಭೂದಾನದ ವಿಷಯಕ್ಕೆ ಬಂದು ಭೂಸುಧಾರಣೆ ಸಂಗತಿ ತಿಳಿಸಿದ್ದಾಯ್ತು. ಈಗ ಅನೇಕರಿಗೆ ಗೊತ್ತಾಗಿದೆ `ಸಂಗಪ್ಪನ ಭೂಸುಧಾರಣೆ’ ಹೇಗಾಯ್ತು ಅಂತ. ಆದರೆ ಅದಕ್ಕೆ ಯಾರೇನೂ ಮಾಡಲಿಲ್ಲ. ಈ ಮಾದರಿ ಮನುಷ್ಯನನ್ನು ಇನ್ನೂ ಅನೇಕರು ಅನುಸರಿಸಿದರು. ಆದ್ದರಿಂದಲ...
ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು! ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು! ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು! ಮುಗಿಲನಣಕಿಸುವ ದಟ್ಟನೀಲಿಯಾದ ನೀರು! ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ! ನಿನ್ನ ಚಿರಜೀವಿಪಟ್ಟವೇ ಪಟ್ಟ! ತಬ್ಬುತಿರು...
ಒಂದಂಕಿ ಗೊಳಗೊಳಕಿ ಯಾಡಂಕಿ ಮುಳಗಳಿಕಿ ಮೂರಂಕಿ ಮುತ್ತೈದಿ ಕೇಳು ಗುರುವೆ ನಾಕ೦ಕಿ ನೆಲ್ಲಕ್ಕಿ ಐದ೦ಕಿ ಪಲ್ಲಕ್ಕಿ ಪಂಚಲಿಂಗದ ಪಾದಾ ತೋರು ಗುರುವೆ ಸರದಾರ ದೊರಿಸಾಮಿ ಮುಕ್ಕಣ್ಣ ಗುರುಸಾಮಿ ಎಲ್ಲಿ ಬಿಟ್ಟೆಲ್ಲೀಗೆ ಪಾರೋತಿನಾ ಚಿನ್ನಿ ಸಕ್ಕರಿ ಚಲುವಿ ಚ...
ಹಣದ ಮುದ್ರಣ ಅಥವಾ ನೋಟು ಬಿಡುಗಡೆಯು ವಿತ್ತೀಯ ಪ್ರಾಧಿಕಾರದ ಕಾರ್ಯವಾಗಿದ್ದು ಅದನ್ನು ಕೇಂದ್ರ ಬ್ಯಾಂಕು ನಿರ್‍ವಹಿಸುತ್ತದೆ. ಪ್ರತಿಯೊಂದು ದೇಶವು ಒಂದು ಕೇಂದ್ರ ಬ್ಯಾಂಕನ್ನು ಹೊಂದಿದ್ದು ಅದರ ಮುಖ್ಯಸ್ಥನನ್ನು ಗವರ್‍ನರ್ ಎಂದು ಕರೆಯಲಾಗುತ್ತದೆ. ...
ಅಹಾ ನನ್ನ ಚೆಂದದ! ಚಂದಿರೆಯೆ! ಕುಂದದ ಕುಡಿಮಲರೆ! ಅಹಾ! ನಾನು ಕೈಕೊಂಡ ಜಿದ್ದೇ! ನನ್ನ ಮೈಗೊಂಡ ಮುದ್ದೆ! ಅಧರದಲ್ಲಿ ಮುದ್ದಾಗಿ ಉದರದಲ್ಲಿ ಮುತ್ತಾಗಿ ಇದಿರು ಮೂರ್‍ತಿಗೊಂಡು ನಿಂತ ಜೀವದ ಹೂವೇ! ಬ್ರಹ್ಮಾಂಡವನೊಳಗೊಂಡ, ನಾನು ಹೊತ್ತು ಹೆತ್ತ-ಪಿಂಡವ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...








