ಮುಂಗೋಳಿ ಕೂಗಿತ್ತು ಕನ್ನಡದ ಪದ ಹಾಡಿ ರಥವೇರಿ ಬರುತ್ತಿದ್ದ ನೇಸರಗೆ ಬೆಳ್ಳಕ್ಕಿ ಹಿಂಡಾಗ ಬರೆದಿತ್ತು ಸ್ವಾಗತವ ಹಾರಾಡಿ ನೀಲಿ ಆಗಸದಾಗೆ ಮೊಗ್ಗಾದ ಹೂವುಗಳು ಅರಳ್ಯಾವೊ ದಳ ತೆರೆದು ಚೆಲ್ಲುತ್ತ ಕನ್ನಡದ ಕಸ್ತೂರಿಯ ಉಣಿಸುತ್ತ ಕಂಪನ್ನು...
ಮೂಡು ಕೆಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೆ ಕನ್ನಡ ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ ಲಾಸ್ಯವಾಡಿದೆ ಕನ್ನಡ ಜಗವೆ ನಗುವಲ್ಲಿ ತುಂಬಿ ಬರುತಲಿದೆ ಎದೆಯ ಹಾಡು ಈ ಕನ್ನಡ ಬನದೆ ಬೆಡಗಿನಲಿ ಮೊರವ ಕುಕಿಲಿನಲಿ...
ಕನ್ನಡ ಎಂದರೆ ಬರಿ ನುಡಿ ಅಲ್ಲ ಮುತ್ತಿನ ಮಣಿ ಸಾಲು ಕನ್ನಡ ಎನ್ನಲು ನಿನ ಕೊರಳಲ್ಲಿ ಸಂಗೀತದ ಹೊನಲು ಕನ್ನಡ ಎನುವ ಮೂರಕ್ಷರದಿ ಎನಿತೋ ಅರ್ಥವಿದೆ ಕನ್ನಡತನವ ಮೈಗೂಡಿಸಿದರೆ ಬಾಳಿಗೆ ಸತ್ವವಿದೆ ಕವಿ ಕೋಗಿಲೆಗಳು...