ಹೊತ್ತಿಸು ಎದೆಯಲಿ ಕನ್ನಡಿಗ
ಅಭಿಮಾನದ ಹಣತೆ
ತಾಯ್ನಾಡಿಗೆ ಬೆಳಕಾಗುತಲಿ
ಕಾಯ್ದುಕೊ ನಿನ್ನ ಘನತೆ
ಇತಿಹಾಸದ ಪುಟಪುಟದಲ್ಲೂ
ಬೆಳಗಿದೆ ಕರುನಾಡು
ಏತಕೊ ಏನೋ ಸೊರಗುತಿದೆ
ಈ ದಿನದಲಿ ನೋಡು
ಪೋಷಿಸಿ ಬೆಳಸಿಹ ಕಾವೇರಿ
ಹೊರಟಿಹಳು ಅಲ್ಲಿ
ನಮ್ಮಲ್ಲಿರದ ಅಭಿಮಾನ
ಕಾಣುತ ಅವರಲ್ಲಿ
ಮರೆಯಾಗುತಿದೆ ಕನ್ನಡವು
ಕನ್ನಡ ನೆಲದಲ್ಲೆ
ಕಾಯದಿದ್ದರೆ ನಾವಿಂದು
ಪರಕೀಯರು ಇಲ್ಲೆ
ಎದ್ದೋಳೋ ಏ ಕನ್ನಡಿಗ
ಅಭಿಮಾನವ ಚೆಲ್ಲಿ
ವೀರಬಾವುಟ ಹಾರಿಸುತ
ಮುಗಿಲೆತ್ತರದಲಿ
****