ಭಾಸಹಾಸಗಳಲ್ಲಿ ಜೀವ ತೇಲುತ್ತಿರಲು ನಿನ್ನ ನಾಮವು ಬಂತು ಸಿಡಿಲು ಸಿಡಿದಂತೆ ಹೇಸಿಗೆಯ ಹೂವ ಮೂಸಿಡುವ ತುಂಬಿಗೆ ದೂರ- ದಲ್ಲಿರುವ ನಂದನದ ಕಂಪು ಬಡಿದಂತೆ ಪ್ರೇಮಸಂಕೇತಗಳನೆಂದು ಧಾಳಾಧೂಳಿ- ಯಿಂದ ಕುಣಿದೆನು ನಾನು ವ್ರಾತ್ಯಶುಕದಂತೆ ಮಾಮರನ ಚಿಗುರನ್ನು ಕನಸಿನಲ್ಲಿಯೆ ಕಂಡು ಕಣ್ಮುಚ್ಚಿ ಕುಕಿಲುತಿಹ ತರುಣ ಪಿಕದಂತೆ...

ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಅಕ್ಕ ಮತ್ತು ಹೊನ್ನಮ್ಮನನ್ನು ಹೊರತು ಪಡಿಸಿದರೆ ಕನ್ನಡ ಸಾಹಿತ್ಯದ ವಿಶಿಷ್ಟ ಮಹಿಳಾ ಪ್ರತಿಭೆಗಳನ್ನು ಕಾಣಲು ನಾವು ಹೊಸಗನ್ನಡ ಸಾಹಿತ್ಯಕ್ಕೇ ಬರಬೇಕು. ನವೋದಯ ಸಾಹಿತ್ಯದ ಲೇಖಕಿಯರಾದ ನಂಜನಗೂಡು ತಿರುಮಲಾಂಬಾ ಅವ...

ನಾವೆಲ್ಲ ಒಂದೇ ನಾಡೆಲ್ಲ ನಮದೇ ವೇಷ ಭಾಷೆ ಬೇರೆ ಬೇರೆ ಹರಿಯುವ ನೀರು ಬೀಸೋ ತಂಬೆಲರು ಕೇಳುತಿಹವು ಹೇಗೆ ಬೇರೆ? ಜಾತಿ ಮತಗಳು ಆರಾಧ್ಯ ದೈವಗಳು ಹೇಗಿದ್ದರೇನು? ದೇವರೊಂದೇ ಶಾಲೆ ನೂರಾರು ಒಂದೇ ನಮ್ಮ ಗುರು ಬೋಧನೆಯು ಮಾತ್ರ ಒಂದೇ ಹಿರಿಯರ ಭಿನ್ನಮತ ಅ...

ಶ್ರೀ ಮಹಾತ್ಮರ ರಾಣಿ ಕಸ್ತೂರಿಮಾನಿನೀ ಓ ಜಗತ್ಸಂಹಿನೀಂ – ಭಾರತತಪಸ್ವಿನೀ ಮಲ್ಲಿಕಾಸ್ಮಿತವದನಿ – ಸುತ್ಯಾಗದರ್ಶಿನೀ ಲೋಕದಾಸೆಯ ಬಿಟ್ಟು – ಪ್ರೇಮಸೂರೆಯ ಕೊಟ್ಟು ಸರ್ವಾತ್ಮ ಲೀಲೆಯೊಳು – ಧರ್ಮ ಕವಚವ ತೊಟ್ಟು ಸತ್ಯದರ್ಶ...

ಹೋಳಿ ಹಬ್ಬ ಬಂದಿದೆ ರಕ್ತದೋಕುಳಿಯ ಚೆಲ್ಲುತ ಕೊಚ್ಚಿ ಹಾಕಿದ ಅಸಂಖ್ಯಾತ ಮನುಜರ ಗುಂಡಿ ಗುಂಡಿಗಳಲ್ಲಿ ಎಸೆದ ಹೆಣ ರಾಶಿ ಹರಿದ ರಕ್ತಕ್ಕೆ ನೆಲದ ಒಡಲು ಕೆಂಪಾಗಿದೆ ಅಂದು ಬಲಿಯಾದ ಬಸುರಿಯರು ಭೂಮಿಗಿನ್ನೂ ಬಾರದ ಹಸುಳೆಯನ್ನು ಸಿಗಿದು ತ್ರಿಶೂಲಕ್ಕೆ ಸಿ...

ಎಷ್ಟೊಂದು ಚಳಿ ಈ ಕಂಬಳಿ ಹುಳಕೆ ಕಂಬಳಿ ಹೊದ್ದೇ ಹೊರಡುವುದು ಮಳೆಗಾಲವಾಗಲಿ ಬೇಸಿಗೆಯಾಗಲಿ ಕಂಬಳಿಯಿಲ್ಲದೆ ಹೋಗುವಂತಿಲ್ಲ ಎಷ್ಟೊಂದು ಶೀತ ಈ ಬಸವನ ಹುಳಕೆ ಮೈ ಕೈ ಶೀತ ಕೊಂಬುಗಳು ಶೀತ ಯಾವಾಗಲೂ ನೆಗಡಿ-ಇದಕೆ ಚಳಿಯಾಗಲಿ ಸೆಕೆಯಾಗಲಿ ನಡೆದಲ್ಲೆಲ್ಲಾ ನ...

‘ಭೂಮಿ’ ಬಿಸಿಯಾಗುತ್ತಲಿದೆ, ಭೂಮಿಯ ತಾಪಾಮಾನ ಹೆಚ್ಚುತ್ತಲಿದೆ. ಇದಕ್ಕೆ ಕಾರಣಗಳೆಂದರೆ ಬಿಸಿಮಾರುತಗಳು, ಚಂಡಮಾರುತಗಳು, ಬರಗಾಲ, ಭೀಕರ ಪ್ರವಾಹ, ಭೂಕಂಪ, ಕೈಗಾರಿಕೆಗಳು, ಇನ್ನು ಮುಂತಾದ ಕಾರಣಗಳನ್ನು ಹೇಳಬಹುದು. ನಾವಿಂದು ಕಾಣುತ್ತಿರುವ ತಾಪಮಾನಕ...

ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳಽ ಹುಲಗೆಜ್ಜಿ | ಕೋಲ ||೧|| ಕೊಂಬುಽ ಆಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿಽನ ತರವೋಽ ನಡದಾರ | ಕೋ ||೨|| * * * ಹೆಳ್ಳಽದ ದಂಡಿಽಗಿ ಹೂವ ಕೋವೂ ಜಾಣಿ || ಲಿಂಗಕೊಂದ್ಹೂವಽ ದಯಮಾಡ | ಕೋ...

ಹೇಗೆ ಕಳೆಯಲಿ ತಾಯಿ ನೀನಿಲ್ಲದ ದಿನಗಳ ಎಂದೂ ಊಹಿಸಿಕೊಳ್ಳದ ನನ್ನ ಈ ದಿನಗಳ ನೀ ತೋರಿದ ಬೆಟ್ಟದ ಗುಡಿ ನಿನ್ನನ್ನು ಕೇಳಿದೆ ಮೌನವಾದ ನನ್ನ ನೋಡಿ ಕಾಡು ಮೌನ ಹೊದ್ದಿದೆ ನೀ ನುಡಿದ ನೂರು ಹಾಡು ಗಾಳಿಯಲ್ಲಿ ತೇಲಿದೆ ಏಕೊ ಏನೊ ರಾಗ ಬದಲು ಶೋಕ ಗೀತೆ ಹೊಮ...

ಕುಂಟೋಬಿಲ್ಲೆ ಆಡುತ್ತಿದ್ದಾಗ ಬಾಲ್ಯದಲ್ಲಿ ಕುಂಟುವುದೆಂ ದರೇನೆಂದೇ ತಿಳಿಯದು ಬಡಿಯಿತಂತೆ ಬಾಲ್ಯದಲ್ಲೇ ಪೋಲಿಯೋ ಬೆಳೆಯಬೇಕಿದ್ದ ಕಾಲು ಕುಂಟಿತು – ಕಲ್ಪನಾ ಶಕ್ತಿ ಗರಿಗೆದರಿತು ಬಾಗಿಲೊಂದು ಹಾಕಿಕೊಂಡಾಗ ಇನ್ನೊಂದು ತೆರೆಯಿತು. ನಮ್ಮ ಸಿಜಿಕ...

ನನ್ನ ಅಜ್ಜನ ಕುಲ ಯಾವುದೋ ಅವನ ಅಜ್ಜನ ನೆಲೆ ಯಾವುದೋ ನನ್ನ ಅಪ್ಪನ ಸೆಲೆ ಯಾವುದೋ ನಾನೇನು ಬಲ್ಲೆ? ನಾನು ಕಸಿ ಮಾವಿನ ಮರ ಕಡಲಂಥ ಹೆಣ್ಣು ತೆರೆಯಣ್ಣ…… ಕಣ್ಣು! *****...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...