ಹೊಸಗನ್ನಡ ಪ್ರಂಚತಂತ್ರದಲ್ಲಿ “ವೈರ ಸಾಧಿಸುವುದು” ಎಂಬ ಮೂರನೆಯ ತಂತ್ರವು. ಅದರ ಮೊದಲನೆಯ ಶ್ಲೋಕವಿದು:– ನಂಬಲು ಬಾರದು ಪೂರ್ವ ವಿರೋಧಿಯ ॥ ಗೆಳೆಗೊಂಡಿದ್ದರು ಹಿಂದಿನ ಹಗೆಯ ॥ ನೋಡೈ ಗೂಗೆಗಳಿದ್ದಾ ಗುಹೆಯ ॥ ಸುಟ್ಟುವು ಕಾಗೆಗ...
ಯಾರೋ ನನ್ನನ್ನು ನಾಯಿ ಎಂದರು ನನ್ನಾಕೆಗೆ ಬಂದಿತ್ತು ಸಿಕ್ಕಾಪಟ್ಟೆ ಕೋಪ ಕೋಪದಲ್ಲೇ ಸಿಡುಕಿದ್ದಳು- “ನಾಯಿ ಅವರಿಗೇನು ಮಾಡಿತ್ತು ಪಾಪ?!” *****...
ತಂಗಿ ಬಂದಳೆನ್ನ ಮನೆಗೆ ಮಂಗಳವನು ತಂದಳು ಅಕ್ಕ ನಕ್ಕು ನಡೆದ ದಾರಿ ತಕ್ಕದೆಂದು ತನಗೆ ತೋರಿ ಅಕ್ಕರತೆಯ ನಗೆಯ ಬೀರಿ ಚಕ್ಕಂದದಿ ನೆಗೆದು ಹಾರಿ ಹಡೆದ ಮನೆಯ ಹೊನ್ನು ದೀಪ ಹಡೆದವ್ವನ ಸಣ್ಣ ರೂಪ ನಡೆದು ಬಂದಳಪರೂಪ ಒಡಲಕುಡಿ! ಬಾ ಸಮೀಪ *****...
ಭವನುತ್ಸವಾಗ್ರದೊಳು ಮೆರೆವ ಗಣದುರವಣೆಯ ಹೋಲಿ ಭೋರಿಡುತಿಹುದು ಅಷಾಢದೀ ಗಾಳಿ ಓಲಾಡೆ ಗರಿಕೆದರುತಾವೇಶದೊಳು ತೆಂಗು ತವಕದೊಳು ಹುಯ್ಯಲಿಡೆ ಬೀಳವೊಲು ಬಿಗಿಹಿಡಿದ ಮರದ ಮಮತೆಯ ಗೂಢ ರಕ್ಷೆಯೊಳು ರೆಂಬೆಯೆಲೆ. ಬಾನ ತುಂಬಿಹ ಗಾಳಿಯಾಲಿಸುತ ತಣಿಯದಿದೆ ಧ್ಯಾ...
ಆ ರಕ್ಷಿ ಈ ರಕ್ಷಿ ಶ್ರೀ ರಾಮನಿಗೆ ರಕ್ಷಿ ಆ ಕ್ಷೇಮ ಈ ಕ್ಷೇಮ ಅಕ್ಷಯ ಕ್ಷೇಮ ಈ ಪ್ರೇಮನಾಮಗೆ ಕ್ಷೇಮ ಪ್ರೇಮಧಾಮಗೆ ಕ್ಷೇಮ ಆ ರಕ್ಷಿ ಈ ರಕ್ಷಿ ಶ್ರೀರಾಮನಿಗೆ ರಕ್ಷಿ ಪ್ರೇಮನಾಮಗೆ ರಕ್ಷಿ ಪ್ರೇಮಧಾಮಗೆ ರಕ್ಷಿ ನನ್ನ ರಾಮಗೆ ರಕ್ಷಿ ಅಣ್ಣ ರಾಮಗೆ ರಕ್ಷಿ...
ಪೂರ‍್ಣಿಮೆಯ, ಪೂರ‍್ಣಿಮಾ ಇಂದು ನಿನಗೆ ಪತ್ರ ಬರೆಯುವ ಸರದಿ ಇನ್ನೂ ಬಂದಿಲ್ಲ. ನಾನು ಎರಡು ದಿನಗಳ ಹಿಂದೆ ಬರೆದ ಪತ್ರಕ್ಕೆ ಇನ್ನೂ ಉತ್ತರವೇ ನಿನ್ನಿಂದ ಬಂದಿಲ್ಲ. ಆದರೂ ಇಂದು ಬಂದ ಟಪಾಲಿನಲ್ಲಿ ಪತ್ರಿಕಾಲಯಕ್ಕೆಂದು ಪಾಂಡಿಚೇರಿಯ ಆಶ್ರಮದಿಂದ ಶ್ರೀ...
ಅಪ್ಪನು ಕೇಳಿದ “ಒಡೆದವರಾರು ಹಳೆ ಕಂದೀಲಿನ ಹೊಸ ಕಾಜು?” ಆಂದಳು ಅವ್ವನು “ನಾನೇನಲ್ಲ ಒಡೆದಿ ರಬಹುದು ಮಗು, ರಾಜು” ಅಪ್ಪನು ಕೇಳಿದ ನನ್ನನು “ಏಕೆ ಕಾಜನು ಒಡೆದದ್ದು?” “ನಾನೇನಲ್ಲಾ” ಅಂದರ...
ಜಗವನು ನೋಡಲುಭರದಲಿ ಬಂದನುಮಂಗಳ ಲೋಕದದೂಕನುತಾನೂ| ಜಗದಲಿ ಮನುಜರನಡುವಳಿ ನೋಡಲು ಭೊಮಿಗೆತಾನಿಳಿದೂ|| ಜಗದೊಳು ಕಾನನಸಿರಿ ಹಾಳಾದುದ ನೋಡಲು ಕರಗಿತು ಮನವಾದೂತನ | ಜಗದೊಳ ಗಣಜನ ಕಾನನ ಬೆಳಿಸದೆಗೆಡೆಹಿಹ ಹಾಳದನೆನ್ನುತಲಿ || ೧ || ಮುಂದೆ ನಡೆಯುತವ ಹೊ...
ಕೊರಝೋನ್ ಡಿ ಮರಿಯಾದಲ್ಲಿ ಅಪ್ಪ-ಮಗ, ಯೆರಮೈಟ್ಸ್ ಹೆಸರಿನವರು, ಇದ್ದರು-ಬಹಳ ಹಿಂದಿನ ಕಾಲದಲ್ಲೇನೂ ಅಲ್ಲ. ಇಬ್ಬರದ್ದೂ ಒಂದೇ ಹೆಸರು. ಇಬ್ಬರನ್ನೂ ಗುರುತಿಸುವುದು ಕಷ್ಟವಲ್ಲದಿದ್ದರೂ ಒಬ್ಬನ ಹೆಸರು ಯೂರೆಮಿಯೋ ಸೆಡಿಲ್ಲೋ. ಇನ್ನೊಬ್ಬ ಕೂಡ ಯೂರೆಮಿಯೋ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...
ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...
ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...








