ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೪ ರೂಪ ಹಾಸನ November 26, 2019June 5, 2019 ಹಸಿವಿನ ಕಾಠಿಣ್ಯಕ್ಕೆ ಮೃದು ರೊಟ್ಟಿ ಸ್ಪಂದಿಸಿ ಸೋಲುವಾಗೆಲ್ಲಾ ಅರ್ಥವಿರದ ಕವಿತೆಯ ಹುಟ್ಟು. ದಾಖಲಾಗದ ಇತಿಹಾಸದ ಗುಟ್ಟು. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೩ ರೂಪ ಹಾಸನ November 19, 2019June 5, 2019 ಹಸಿವು ಬ್ರಹ್ಮಾಂಡ ವ್ಯಾಪಿಸಿ ದಾಪುಗಾಲಿಟ್ಟು ನಡೆಯುತ್ತದೆ. ನಿಶ್ಚಲ ರೊಟ್ಟಿ ಇದ್ದಲ್ಲೇ ನೂರು ನಡೆ ಇಡುತ್ತದೆ. ಸದ್ದಿಲ್ಲದೇ ಸಂಭವಿಸುತ್ತದೆ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೨ ರೂಪ ಹಾಸನ November 12, 2019May 4, 2019 ಚರಿತ್ರೆಯಲಿ ದಾಖಲಾಗುವ ಹಂಬಲದಲಿ ಹಸಿವು ನೂರಾರು ದಾರಿಗಳಲಿ ಚೆಲ್ಲಾಪಿಲ್ಲಿ. ಆಗೊಮ್ಮೆ ಈಗೊಮ್ಮೆ ಮಾತ್ರ ದಾರಿಯೇ ಇರದ ದುರ್ಗಮಾರಣ್ಯದ ರೊಟ್ಟಿಯ ಅಕ್ಕರೆಯ ಸೆಳೆತ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೧ ರೂಪ ಹಾಸನ November 5, 2019June 5, 2019 ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೪೦ ರೂಪ ಹಾಸನ October 29, 2019October 29, 2019 ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೯ ರೂಪ ಹಾಸನ October 22, 2019May 4, 2019 ರೂಪಾತೀತ ಹಸಿವಿಗೆ ನಾನಾರೂಪ ಬಹುರೂಪ ಸಾಧ್ಯತೆಯ ರೊಟ್ಟಿಗೆ ಏಕರೂಪ Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೮ ರೂಪ ಹಾಸನ October 15, 2019May 4, 2019 ಹಸಿವೆಗೆ ಬಲಕ್ಕೆ ಬಲವಿಲ್ಲ ಎಡಕ್ಕೆ ಎಡವಿಲ್ಲ ಮೊದಲಿಲ್ಲ ಕೊನೆಯೆಂಬುದಿಲ್ಲ. ಆದರೂ ಊರು ಉಸಾಬರಿಯ ಕೆಲಸ. ಯಜಮಾನಿಕೆಯ ಗತ್ತು. ರೊಟ್ಟಿಗೆ ತಿಳಿದಿಲ್ಲ ತನ್ನ ತಾಕತ್ತು. Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೭ ರೂಪ ಹಾಸನ October 8, 2019June 5, 2019 ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೬ ರೂಪ ಹಾಸನ October 1, 2019June 5, 2019 ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ. ***** Read More
ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೩೫ ರೂಪ ಹಾಸನ September 24, 2019May 4, 2019 ಕನ್ನಡಿಗೆ ಹಿಡಿದ ಹಸಿವೆಗೆ ಇಲ್ಲ ಪ್ರತಿಫಲಿಸುವ ಬೆಳಕಿಂಡಿ ಅದಕಿಲ್ಲ ಕಣ್ಣು. ರೊಟ್ಟಿಯ ಮೈ ತುಂಬ ಕಣ್ಣು ಕಣ್ಣಿನ ತುಂಬ ಕನ್ನಡಿ ಒಂದೊಂದು ಕನ್ನಡಿಗೂ ಸಾವಿರಾರು ಪ್ರತಿಬಿಂಬ. Read More