ಸುಳಿ

ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ? ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ. ಇವಳ ಹೊಳೆಮೈಯನ್ನು ಸೆಳೆದು ಆಳಗಳಲ್ಲಿ ಇಳಿದು ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ; ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ ಬಿಳಲು...

ಮಧ್ಯಚಿತ್ತ

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು ನೀರು ಬತ್ತಿದ ತೊರೆಯ ವಿಕಟಪಾತ್ರ, ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು ಕೊಟ್ಟ ಸುಖಬಾಧೆಗಳ ಚಿತ್ರಗಣಿತ. ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ ತುರಿಕೆಹಿತ ಮುಖದಲ್ಲಿ ಮೊಳೆತ...

ಸುದ್ದವ್ವ

ಸುದ್ದವ್ವ ಈ ಊರವಳಲ್ಲ ವಲಸೆ ಬಂದ ಹುಡುಗಿ ಇಲ್ಲಿ ನಿಂತವಳೂ ಅಲ್ಲ ಊರೂರಲೆಯುವ ಚಪಲಿ; ಅವಳಿಗೆ ಮಿಂಡನೆ ತಂದೆ ರಂಡೆಯೆ ತಾಯಿ ಹುಟ್ಟಿದ ಕೂಡಲೆ ಫಟ್ಟನೊಡೆದುವಂತೆ ಮೈಯೆಲ್ಲ ಬಾಯಿ; ಅಪ್ಪನ ನೆರಳಿಲ್ಲದೆ ಅವಳಿಗೆ ಜಾತಕ...