ಬೆದರುಗೊಂಬೆ

ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ ಹಳೇ ದೊಗಲೆ ಶರ್ಟು. ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ. ಒಡೆದ ಮಡಕೆಯ ತಲೆ.  ಕಣ್ಣುಗಳಿರಬೇಕಾದಲ್ಲಿ ಬಿಳೀ ಸುಣ್ಣದ ಬೊಟ್ಟು. ಕಣ್ಣಲ್ಲಿ ಕಣ್ಣಿಟ್ಟು...

ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ ಬೃಹತ್ತಾದ ತೈಲಚಿತ್ರಗಳು...

ದೇವರು

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು ಕರೆದುಕೊಂಡು...

ರೆನೆಯನ್ನು ಕಂಡಮೇಲೆ

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ ನಾವು ಗಮನಿಸುವುದೆ ಇಲ್ಲ. ...

ಬಿಳಿಬೆಕ್ಕು, ಕರಿಬೆಕ್ಕು

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್ರಗಳಂತೆ ನಿದ್ದೆಹೋಗಿವೆ. ಕರಿಬೆಕ್ಕಿನ ಕಣ್ಣುಗಳು ಬೆಂಕಿಬಿದ್ದ ಕಾಡುಗಳಂತೆ...

ಘಟ್ಟದ ಕೆಳಗೆ

ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು. ಕಾಡುಮರಗಳ ಸಂದಿಯಿಂದ...

ಕಂಡದ್ದು ಕಂಡಹಾಗೆ

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ ನೋಡುತ್ತ...

ಇಲಿಗಳನ್ನು ಕೊಲ್ಲುವುದು

ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ.  ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ, ತಿಂದರೆ ಹೆಂಡತಿ ಕೂಡ...

ಕ್ಷಾಮ

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆದುರಿನ...

ಬಣ್ಣಗಳ ವಿಷಯದಲ್ಲಿ

ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ ನಾನು.  ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ.  ನಾನು ಸುವ್ಯವಸ್ಥಿತವಾದ ಹಳದಿ ಬಣ್ಣದ...