ಚಂದ್ರ ಚಕೋರಿ

ಇರುಳಿನ ಮಡಿಲಲಿ ಒಲವಿನೊಂದು ಮನ- ದಾಸೆಯ ನನಸಂತೆ, ಆಗಸದೊಡಲಲಿ ಚಂದಿರ ನಗುತಿರೆ, ಜೀವನೆ ಕನಸಂತೆ! ಒಂದು ಚಕೋರಿಯು ಚಂದಿರನೊಲವನು ಪಡೆಯಲಂದು ಮನವ ಭಾವ ಪುಷ್ಪಗಳ ಪರಿಮಳವಾಗಿಸಿ ಹರಿಸಿತು ಎದೆಯೊಲವ ಹಕ್ಕಿ ಚಂದಿರನ ಸನಿಯ ಸಾರಲಿಕೆ...

ಸ್ವರ್ಗದಲಿ ದೇವ ನಗುತಿಹನೇನು?

ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ ಮೈದಾನದಲಿ ಬಾಳ ಋತು ವಸಂತದ ಸುಗ್ಗಿ ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ ನಲಿದಿತೋ, ಆಕೆ ಬರುವಳು ಇಂದು...

ಒಮ್ಮೊಮ್ಮೆ ಎನಿಸುವುದು!

ಒಮ್ಮೊಮ್ಮೆ ಎನಿಸುವುದು ಜೀವವಾರಿದಮೇಲೆ ಸುಖ ಸ್ವಪ್ನಗಳ ಬಿಂಬ ಮೂಡಬಹುದೆಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೋ ! ಅಂತಾದರೆನಿತು ಸುಖ; ಬಾಳ ದುಃಸ್ವಪ್ನವನು ಮರೆಯಬಹುದಾಗ; ಜೀವದೊಳಗಿಲ್ಲದುದ ಸಾವಿನಲಿ ಪಡೆಯುತಲಿ,...

ನಸುಬೆಳಕಲಿ ಮುತ್ತಿತು ಚಂದ್ರನ ರಾಹು

ತಾರೆಯ ಚಿತ್ತಾರದ ಇರುಳಿನ ಹಸೆ ಕನಸಿನ ಆರತಿ ಆನಂದದ ದೆಸೆ ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ, ನಸುಬೆಳಕಲಿ ಮುತ್ತಿತು ಚಂದ್ರನ ರಾಹು! ಹಗಲುದಯಕೆ ಕೈದಾಳವನುರುಳಿಸಿ, ಇರುಳಿನಳಿವಿಗೆ ರಕ್ತವ ಹೊರಳಿಸಿ, ದುಗುಡದ ಮೋಡದ ಕೆಂಪೆದೆ...

ಹೃದಯದಲಿ ಕೂಡಿಯಾಡುವ ಹೋಳಿ

ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ...

ಜೀವನದ ರೂಪನ್ನೆ ಬದಲಿಸುವ, ಬಾ!

ಕೈಯ ಕೈಯಲಿ ಇಟ್ಟು ಕಣ್ಣ ಕಣ್ಣಲಿ ನಟ್ಟು ಮುಂದಕ್ಕೆ ಸಾಗೋಣ, ನೋಡೋಣ ಬಾ; ನಾನು ನೀನೂ ಕೂಡಿ ವಿಧಿಯೊಡನೆ ಹೆಣಗಾಡಿ ಜೀವನದ ರೂಪನ್ನೆ ಬದಲಿಸುವ, ಬಾ! ನದಿಯ ತಣ್ದುಟಿ ಮೇಲೆ ಶಶಿಯ ಒಲವಿನ ಓಲೆ...

ಹೊಸ ವರ್ಷವು ಬಂದಿದೆ, ಗೆಳತಿ!

ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, ಬಾಳೆದೆಯೊಳ ಪ್ರೀತಿ ಆಸೆ ಅಡಗಿದಭಿಲಾಷೆಯನೆಲ್ಲ ಮಣ್ಣು...

ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ

ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ ಹಿಡಿದ ಹಟವನು ಬಿಡದೆ, ಬೇಡಿದುದು ದೊರೆವನಕ ಕಾಡುವುದು ಮುನಿಯುವುದು, ಬೇಡಿದುದು ದೊರಕಿದೊಡೆ ಹಿಗ್ಗಿಗೆಣೆಯೇ ಇಲ್ಲ. ಕುಣಿ ಕುಣಿದು ಆಡುತ್ತ ನಿಮ್ಮನೇ ಮೈಮರೆತು ನವಿಲಂತೆ ನಲಿಯುವಿರಿ. ನಿಮ್ಮದಾದುದ ಮತ್ತೆ, ಎಲ್ಲರಿಗೆ...

ಹೃದಯ ಒಲವಿಗೆ ಅಲ್ಲದಿನ್ನೇತಕೆ?

ಹೃದಯ ಒಲವಿಗೆ ಅಲ್ಲದಿನ್ನೇತಕೆ? ಬಾನಿನಲಿ ತಾರೆಗಳ ಮಾಲೆಯೇಕೆ? ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ ಕೇಸರಿಯ ಕಿರಣಗಳ ಮಂಜಮೇಲೆ ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ ನೀ ಬಾರದಿರೆ ನನ್ನ ಹಾಡಿದೇಕೆ? ಓ ನನ್ನ ಉಷೆ,...

ಓ ತಾಯಿ!

ಓ ತಾಯಿ! ಭೂತಾಯಿ! ನೀ ಬರಿಯ ನೆರಳಂತೆ, ನಾವೆಲ್ಲ ಅವ್ಯಕ್ತ ಛಾಯೆಯಂತೆ. ಸತ್ಯ ಸತ್ವವು ಬೇರೆ ಜಗದೊಳಗೆ ಇಹುದಂತೆ, ಅದಕಾಗಿ ಅಳಿದವರೆ ಉಳಿದರಂತೆ! ಈ ಮಾತ ಮಾಯೆಯಲಿ ಸಿಕ್ಕಿ ಸೋತರ ಕಂಡು, ನಿನ್ನೆದೆಯ ಉರಿಬೆಂಕಿ...