ಓ ತಾಯಿ! ಭೂತಾಯಿ! ನೀ ಬರಿಯ ನೆರಳಂತೆ,
ನಾವೆಲ್ಲ ಅವ್ಯಕ್ತ ಛಾಯೆಯಂತೆ.
ಸತ್ಯ ಸತ್ವವು ಬೇರೆ ಜಗದೊಳಗೆ ಇಹುದಂತೆ,
ಅದಕಾಗಿ ಅಳಿದವರೆ ಉಳಿದರಂತೆ!
ಈ ಮಾತ ಮಾಯೆಯಲಿ ಸಿಕ್ಕಿ ಸೋತರ ಕಂಡು,
ನಿನ್ನೆದೆಯ ಉರಿಬೆಂಕಿ ನಂದಿತೇನು?
ನಾಡೆಲ್ಲ ಇಂತಾಗಿ ನಿನ್ನನೇ ಮರೆತಿರಲು,
ನಿನಗೆ ದಾಸ್ಯದ ಹೊರತು ಉಳಿದುದೇನು?
*****