ಒಮ್ಮೊಮ್ಮೆ ಎನಿಸುವುದು ಜೀವವಾರಿದಮೇಲೆ
ಸುಖ ಸ್ವಪ್ನಗಳ ಬಿಂಬ ಮೂಡಬಹುದೆಂದು,
ಕೊಳದ ನೀರಲೆಯಳಿದು ಮೌನದಲಿ ಮಲಗಿರಲು
ಸೌಂದರ್ಯದಾಗಸವ ಬಿಂಬಿಸುವ ತೆರದಿ!
ಆದರೆಂತೋ ಏನೋ ! ಅಂತಾದರೆನಿತು ಸುಖ;
ಬಾಳ ದುಃಸ್ವಪ್ನವನು ಮರೆಯಬಹುದಾಗ;
ಜೀವದೊಳಗಿಲ್ಲದುದ ಸಾವಿನಲಿ ಪಡೆಯುತಲಿ,
ನೋವಿಲ್ಲದೊಲವಿಂದ ಸವಿಯಬಹುದಾಗ!
*****