ಒಡೆಯುವುದು ಒಡೆಯುವುದು ಎಂಬ ನಾಲ್ಕನೆಯ ತಂತ್ರವಿದು. ಅದರಲ್ಲಿ ಮೊದಲ ಶ್ಲೋಕವಿದು:- ಅರ್ಥ ಗೆಳೆತನ ಬೆಳೆಯಲು ಬಲವಾಗಿ ॥ ಬಸವಕೆ ಸಿಂಹಕೆ ಬನದಲ್ಲಿ ॥ ಹೊಟ್ಟೆಯುರಿದು ನರಿಗದ ಕಂಡು ॥ ಸೊಟ್ಟ ತನದೂಳದ ಕೆಡಸೀತು ॥ ೧ ॥ ಆ ಕಥೆಯು ಹೀಗೆ:- ಸಂಜೀವಕನ ಕಥೆ ದಕ್ಷಿಣ ದೇಶದಲ್ಲಿ ಮಹಿಲಾರೋಪ್ಯ ಎಂಬ ಒಂದು ನಗರವಿರುವುದು. ...

ಮೂಡು ಕೆಂಪಿನಲಿ ಹಕ್ಕಿ ಬರಹದಲಿ ಕಣ್ಣು ತುಂಬಿದೆ ಕನ್ನಡ ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ ಲಾಸ್ಯವಾಡಿದೆ ಕನ್ನಡ ಜಗವೆ ನಗುವಲ್ಲಿ ತುಂಬಿ ಬರುತಲಿದೆ ಎದೆಯ ಹಾಡು ಈ ಕನ್ನಡ ಬನದೆ ಬೆಡಗಿನಲಿ ಮೊರವ ಕುಕಿಲಿನಲಿ ಕುಣಿವ ಜಿಂಕೆಯಲಿ ಕನ್ನಡ ನಗುವ ಹೂವ...

ಭಯ, ದಿಗಿಲು, ಅಂಜಿಕೆ, ಹೆದರಿಕೆ-ಇವು ಎಲ್ಲವೂ ಒಂದೇ ಭಾವದ ಶಾಖೋಪಶಾಖೆಗಳು. ಯಾವಾಗ್ಗೆ ಮನುಷ್ಯನಲ್ಲಿ ಭಯವು ಹುಟ್ಟಿತೋ ಆಗ್ಗೆ ಮನುಷ್ಯನು ಮೃತನಂತೆ. “ಭಯೇ ವ್ಯಾಪಿಲೇ ಸರ್‍ವ ಬ್ರಹ್ಮಾಂಡ ಅಹೇ! ಭಯಾತೀತ ತೇ ಸಂತ ಆನಂದ ಪಾಹೇ!” ಹೀಗೆಂ...

ಎಂದೂ ಒಪ್ಪಿಸಬೇಡ ಯಾವ ಹೆಣ್ಣಿಗೂ ನಿನ್ನ ಹೃದಯ ಪೂರಾ. ಖತವೆನಿಸಿತೊ ಪ್ರೀತಿ, ಭಾವೋದ್ರಿಕ್ತ ಹೆಣ್ಣುಗಳು ಚಿಂತಿಸುವ ಅಗತ್ಯವನ್ನೆ ಎಳ್ಳಷ್ಟೂ ಕಾಣರು, ಒಂದೊಂದು ಮುತ್ತಿಗೂ ಪ್ರೇಮ ಮಂಕಾಗುತ್ತ ತೀರಿಕೊಳ್ಳುವುದೆಂದು ಕನಸಲ್ಲೂ ತಿಳಿಯರು, ಸುಂದರವಾದದ್...

ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್ ಹೋಗಬೇಕು, ನಾಳಿಗೆ ಹೋಗಬೇಕು ಹೇಳಿ ಯೆಷ್ಟೋ ದಿವಸ ಕಳದ ಹೋಯ್ತು....

೧ ನೋಡು ಗೆಳೆಯ ಶ್ರಾವಣವಿದು ಹೊಸ ಹೊಂಚನು ಹಾಕುತಿದೆ ಬಿತ್ತಿರುವುದ ಬೆಳೆಯಲೆಂದು ಗಾಳಿಮಳೆಯು ಜೀಕುತಿದೆ. ಅದಕಂತೆಯೆ ಎದೆಯುದ್ದಕೆ ಹೊಲದ ನಿಲುವು ತೂಗುತಿದೆ ಕಾರ್‍ಗಾಲದ ಹೊಸ ಹೊಂಚಿದು; ಕಾಲಪುರುಷನೊಳಸಂಚಿದು : ಬಾನಂಗಳಕೇಳ್ವುದೆನಲು ಮುಗಿಲೆ ನೆಲಕ...

(ಭಾರತ ಸ್ವಾತಂತ್ರ್ಯೋದಯದ ರೂಪಕ) ಇದೊ, ಶ್ರಾವಣಬಂದಿದೆ ಭೂವನಕೆ, ಜನಜೀವನ ಪಾವನ ಗೈಯಲಿಕೆ- ಇದೊ, ಶ್ರಾವಣ ಬಂದಿದೆ ಭಾರತಕೆ ! ೧ ತೆರಳಿತು ವೈಶಾಖದ ಬಿರುಬಿಸಿಲು, ಸರಿಯಿತು ಮೃಗಜಲದಾ ಹುಸಿಹೊನಲು ; ಮರೆಯಾಯಿತು ಸುಟ್ಟುರೆಗಳ ಹೊಯಿಲು, ಬರಿ ಬಾನೊಳು ...

ಕನ್ನಡದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಇದಕ್ಕೆ ಉತ್ತರವಾಗಿ ಸಂಖ್ಯೆ ಜಾಸ್ತಿಯಿದ್ದುದಾದರೂ ಯಾವಾಗ ಎಂದು ಕೇಳಬಹುದು. ನಿಜ, ಕನ್ನಡದಲ್ಲಿ ವಿಮರ್ಶೆಯೆ೦ಬ ಸಾಹಿತ್ಯ ಪ್ರಕಾರ ಸುರುವಾದ್ದೇ ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ, ಎಂದ...

ಯಿಂದ್ ಒಬ್ಬ ಬೌದ್ದ ಸನ್ಯಾಸಿ ಮರದಡಿ ತನ್ನ ಬಟ್ಟೆ ಆಸಿ ಕುಂತಿದ್ದ ಪದುಮಾಸನಾಕಿ- ಕಣ್ ಮುಚ್ಚೋದ್ ಒಂದೇನೆ ಬಾಕಿ! ೧ ಕಾಲಿಗ್ ಔನ್ ಮುಂದಾಗ ತೊದಲು ಬಂದಂಗೆ ಯೆಣ್ ಒಬ್ಳು ಓದ್ಲು- ಘಮ್ಮಂತ ವಾಸ್ನೆ ಸುಳದಂಗೆ! ಫಳ್ಳಂತ ಮಿಂಚು ವೊಳದಂಗೆ! ೨ ತಂಗೆ ಕಣ್ ...

ಗುಮ್ಮ ಬಂದನು ಸುಮ್ಮನಿರು ಕಂದ, ಅಬ್ಬಬ್ಬ, ಏನವನ ಕಣ್ಣು? ನಾಲಿಗೆಯೇನು ಕೆಂಪಗಿದೆ, ಕತ್ತಲಲಿ ಕೆಂಡ ಕಂಡಂತೆ ! ಮೆಲ್ಲಗೆ ಬರುವ, ಸದ್ದು ಸದ್ದೆಲೆ ಕಂದ, ಸುಮ್ಮನಿರು, ಅಳಬೇಡ ! ಕೇಳಿ ಇತ್ತಲೆ ಬರುವನೇನೊ ಗುಮ್ಮ; ನಮ್ಮಮ್ಮ ಮುಚ್ಚು ಕಣ್ಣನು, ಮಲಗು, ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...