ಒಡೆಯುವುದು ಒಡೆಯುವುದು ಎಂಬ ನಾಲ್ಕನೆಯ ತಂತ್ರವಿದು. ಅದರಲ್ಲಿ ಮೊದಲ ಶ್ಲೋಕವಿದು:- ಅರ್ಥ ಗೆಳೆತನ ಬೆಳೆಯಲು ಬಲವಾಗಿ ॥ ಬಸವಕೆ ಸಿಂಹಕೆ ಬನದಲ್ಲಿ ॥ ಹೊಟ್ಟೆಯುರಿದು ನರಿಗದ ಕಂಡು ॥ ಸೊಟ್ಟ ತನದೂಳದ ಕೆಡಸೀತು ॥ ೧ ॥ ಆ ಕಥೆಯು ಹೀಗೆ:- ಸಂಜೀವಕನ ಕಥೆ ದಕ್ಷಿಣ ದೇಶದಲ್ಲಿ ಮಹಿಲಾರೋಪ್ಯ ಎಂಬ ಒಂದು ನಗರವಿರುವುದು. ...

ಡಾನ್ ಉರ್‍ಬಾನೋನ ಮಗ, ಡಿಮಾಸ್‌ನ ಮೊಮ್ಮಗ, ಚರ್‍ಚಿನಲ್ಲಿ ನಾಟಕಗಳನ್ನು ಹೇಳಿಕೊಡುತ್ತಿದ್ದನಲ್ಲ, ಇನ್‌ಫ್ಲೋಯೆಂಜಾ ಬಂದಾಗ ‘ಶಪಿತ ದೇವತೆ ನರಳುವಳು,’ ಅನ್ನುವ ಹಾಡು ಹೇಳುತ್ತಲೇ ತೀರಿಕೊಂಡ ಉರ್‍ಬಾನೋ ಗೋಮೆಝ್‍ನನ್ನು ನೆನೆಯಬೇಕು. ಬಹಳ ಕಾಲ, ಹದಿನೈ...

ಬೇಸಿಗೆ ಕೊನೆಯ ಒಂದು ಸಂಜೆ ಹೊತ್ತು : ನಿನ್ನಾಪ್ತ ಗೆಳತಿ, ಆ ಚೆಲುವೆ ಕೋಮಲೆ, ನಾನು ನೀನು ಕೂತು ಮಾತಾಡಿದೆವು ಕವಿತೆಯನ್ನು ಕುರಿತು ನಾನೆಂದೆ : “ಕವಿತ ಸಾಲೊಂದನ್ನು ಸಾಧಿಸಲು ಗಂಟೆಗಟ್ಟಲೆ ನಾವು ಹೆಣಗಬೇಕು; ಆದರೂ ಆ ಸಾಲು ಅಲ್ಲೆ, ಆ ಗಳಿ...

ಅರಸು ವಿಶ್ವಾಮಿತ್ರ ಮಾತುಗೆಲುವ ಮನೀಷೆ- ಯಿಂದ ಕಾಡನು ಸೇರಿ ಮುನಿಯಾಗಬಯಸಿದನು. ಜಯಲಕ್ಷ್ಮಿ ತನ್ನ ವಶವಿರಲೆಂದು ಸಹಿಸಿದನು ನೂರು ಸಂಕಟಗಳನು, ಪೂರೈಸದಭಿಲಾಷೆ. ಸ್ವರ್‍ಲೋಕದವರು ಕಳುಹಿಸಿದ ಮೇನಕೆಯಾಸೆ- ಗಾಗಿ ಮತ್ತೆ ಪ್ರಪಂಚಭಾರವನ್ನು ವಹಿಸಿದನು ಅ...

– ಪಲ್ಲವಿ – ಕುಣಿಯುತ ಬಂದಿದೆ ದೀವಳಿಗೆ- ಝಣ- ಝಣಿರೆನೆ ನೂಪುರ ಅಡಿಗಡಿಗೆ ! ತಣಿವನು ಹಂಚಲು ಎಡೆಯೆಡೆಗೆ- ಕುಣಿ- ಕುಣಿಯುತ ಬಂದಿದೆ ದೀವಳಿಗೆ ! ೧ ಮುಸುಕಿದ ಮೋಡವು ಮಸುಳಿತಿದೇನು ? ಹಸನು ಹಸನು ಬೆಳುಗಾಲದ ಬಾನು ! ನಸುನಗುತಿಹ ಬಿಸ...

ನಾ ಕುಡದಾಡೋ ಪದಗೊಳ್ನೆಲ್ಲ ಬೀದೀಯೋರ್ ಜನಗೋಳು ಈಟೊಂದ್ ಒಗಳಾಕ್ ಏನ್ ಕಾರಣಾಂದ್ರೆ ಯೋಳ್ತೀನ್ ಚೆಂದಾಗ್ ಕೇಳು. ೧ ಯಿದ್ದೇಗೆಲ್ಲ ದೇವ್ರಾಗೌಳೆ- ಔಳ್ ಆ ಸರಸೋತಮ್ಮ; ಯೀಣೆ ಯಿಡದಿ ಔಳ್ ಆಡಿದ್ರೆ ನಾ ಕುಡದ್ ಆಡ್ತೀನಮ್ಮ! ೨ ಸರಸೋತಮ್ಮನ್ ಎಡದೋಳ್ ನೋಡು...

ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು ಬಯಲಿಗೆ ತರುತ- ಲಿರುವ ಪಡುವಲ ...

ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...