Home / ಕಥೆ / ಸಣ್ಣ ಕಥೆ / ಹುಲಿ ಸವಾರಿ

ಹುಲಿ ಸವಾರಿ

ಎದುರು ಮನೇಲಿ ಇರೋ ಎಳೆವಯಸ್ಸಿನ ಗಂಡಹಂಡತಿನಾ ನೋಡಿದರೆ ಅವರುಗಳದ್ದು ಅರೇಂಜ್ಡ್ ಮ್ಯಾರೇಜ್‌ ಅನ್ನಿಸೋದಿಲ್ಲ ಕಣ್ರಿ ಅಂದಳು ನಿರ್ಮಲಮ್ಮ. “ಅಯ್ಯೋ! ಯಾಕ್‌ ಹಂಗಂತಿರ್ರೀ? ಬಲು ಅನುಮಾನ ಬಿಡಿ ನಿಮ್ಗೆ…. ಆದರೆ ನನಗೂ ಹಾಗೆ ಅನ್ಸುತ್ತೆ ಕಣ್ರಿ. ಅವನ ಮನೆಯವರಾಗಲಿ ಅವಳ ಕಡಯವರಾಗಲಿ ಈ ಕಡೆ ತಲೆನೇ ಹಾಕಿಲ್ವೆ!’ ತಲೆ ಕೆಡಿಸಿಕೂಂಡಳು ಸುವರ್ಣಮ್ಮ. ಅವರ ಊಹಗಳಿಗೆ ಸಾಕ್ಷಿ ಪುರಾವೆಗಳೇನು ಅವರಲ್ಲಿರಲಿಲ್ಲವಾದರೂ ಪೂರಾ ಕಡಗಣಿಸದಂತಿರಲು ಗಂಡಹಂಡಿರ ನಡವಳಿಕಗಳೇ ಇಂಬು ನೀಡಿತ್ತು. ಹುಡುಗ ಸಿಟಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕ. ಕಡಿಮೆ ಸಂಬಳ ಕಠಿಣ ದುಡಿಮಗೆ ಹೂಂದಿ ಕೂಂಡಿದ್ದಾನೆ. ಆಸಕ್ತಿಯಿಂದ ಪಾಠ ಮಾಡುತ್ತಾನೆಂದು ವಿದ್ಯಾರ್ಥಿಗಳಿಗಿಂತಲೂ ಏದ್ಯಾರ್ಥಿನಿಯರೇ ಹಚ್ಚು ಮಾತನಾಡುತ್ತಾರ ’ರವೀಶ್‌ ಸಾರ್‌’ ಅಂತ ತಮ್ಮ ಡೌಟುಗಳನ್ನು ಪರಿಹರಿಸಿಕೂಳ್ಳಲು ಸ್ಟಾಫ್‌ ರೂಮಿಗೇ ಎಡತಾಕುತ್ತಾರೆ. ಅಂತಯೇ ರಮೇಶ ತನ್ನ ಒಳ್ಳೆಯ ನಡನುಡಿ ವಿನಯ ಸಂಪನ್ನತಗಳಿಂದ ಮೇನೇಜ್‌ಮಂಟಿನವರ ಮನವನ್ನೂ ಗೆದಿದ್ದಾನೆ. ಇವನ ಇಂತಹ ವಿಶೇಷ ಗುಣಗಳಿಂದಾಗಿಯೇ ಹಿಂದ ಕಲಸ ನಿರ್ವಹಿಸಿದ್ದ ಮೊಬ್ಬಳ್ಳಿ ಕಾಲೇಜಿನಲ್ಲೂ ಇತರ ಉಪನ್ಯಾಸಕರ ಹೊಟ್ಟೆ ಉರಿಗೆ, ಹುಡುಗಿಯೊಬ್ಬಳನ್ನು ಪಟಾಯಿಸುತ್ತಿದ್ದಾನೆಂಬ ಈರ್ಷೆಯ ಬೆಂಕಿಗೂ ಉಪ್ಪು ಸುರಿದ ಇತಿಹಾಸವಿದೆ.

ಲಕ್ಷ್ಮಿ ಅನ್ನೋ ಕಂಪುಕೆಂಪನೆ ಹುಡುಗಿ ಎರಡನೇ ಪಿ.ಯು. ತರಗತಿಗೆ ಲಂಗದಾವಣಿ ಹಾಕ್ಕೊಂಡು ಎರಡು ಜಡೆ ಹಣ್ಕೊಂಡು ಒಂದನ್ನು ಎದೆಯ ಮೇಲೆ ಮತ್ತೊಂದನ್ನು ಬೆನ್ನು ಹಿಂದೆ ಬಿಟ್ಕೊಂಡು ನಡೆದು ಬರುವ ಒನಪಿಗೆ ಇಡೀ ಮೊಬ್ಬಳ್ಳಿ ಪಡ್ಡೆಗಳೇ ಮಬ್ಬಾದಾಗ ಸೋಷಿಯಾಲಜಿ ಪಾಠ ಹೇಳುವ ರಮೇಶಗೌಡ ಮಾತ್ರ ಮರುಳಾಗದಿರಲು ಸಾಧ್ಯವೆ. ಓಂದಿಷ್ಟು ಫ್ಲಾಶ್‌ ಬ್ಯಾಕ್‌ಗೆ ಹೋಗೋಣ.

ಮಾದೇಗೌಡರು ದಾನವಾಗಿ ಕೂಟ್ಟ ಐದು ಎಕರೆ ಜಮೀನಿನಲ್ಲೇ ಸರ್ಕಾರಿ ಪ.ಪೂ. ಕಾಲೇಜು ತಲೆ ಎತ್ತಿ ಮೂರೂ ಮುಕ್ಕಾಲು ವರ್ಷವಾಗಿರಬಹುದು. ಮೊನ್ನೆ ಮೊನ್ನೆ ಎಂ.ಎ. ಮುಗಿಸಿ ಬಂದ ರಮೇಶಗಾಡ ವೃಥಾ ಕಾಲಹರಣಮಾಡದೆ, ಕಟ್ಟೆರಾಜಕೀಯಕ್ಕಿಳಿಯದೆ ಸರ್‍ಕಾರಿ ನೌಕರಿ ಸಿಗೋವರೆಗೂ ತಮ್ಮ ಊರಿನ ಕಾಲೇಜಲ್ಲೇ ಹಾನರರಿಯಾಗಿ ದುಡಿಯುತ್ತೇನೆಂದು ಅರ್ಜಿ ಗುಜರಾಯಿಸಿದ. ಪುಗಸಟ್ಟೆ ಸೇವೆ ಯಾರಿಗೆ ಬೇಡ? ಮೇಲಾಗಿ ಕಾಲೇಜಿಗೆ ದಾನವಾಗಿ ನಿವೇಶನ ಕೊಟ್ಟ ಊರಗೌಡರ ಮಗನನ್ನು ನಿರಾಕರಿಸಲಾದೀತೆ. ರಮೇಶಗೌಡ ತಾನೆಂದೂ ರಮೇಶ ಅಂತಲೇ ಹೇಳುತ್ತಾ ಇತ್ತೀಚೆಗೆ ಅಫಿಡವಿಟ್‌ ಸಲ್ಲಿಸಿ ತನ್ನ ಹಸರಿಗೆ ಅಂಟಿಕೊಂಡಿದ್ದ ಗೌಡನೆಂಬ ಜಾತಿ ಸೂಚಕವನ್ನು ಕಿತ್ತು ಹಾಕಿಸಿದ್ದ. ಮಾದೇಗೌಡರು ಇದನ್ನೇನೂ ಗಂಭೀರವಾಗಿ ತೆಗೆದುಕೊಂಡವರಲ್ಲ. ಕೇಳಿದವರಿಗೆ, ‘ಓದಿದ ಹೈಕಳು ಅವರಿಷ್ಟ ಬಂದಂಗೆ ನೆಡ್ಕೋತಾವೆ ಬಿಡ್ರಿ’ ಅಂದು ಬಿಟ್ಟಿದ್ದರು. ರಮೇಶನಾದರೋ ಕಾಲೇಜಿನಲ್ಲಿ ಸೋಷಿಯಾಲಜಿ ಪಾಠದ ಜೊತಗೆ ತನಗಿಷ್ಟವಾದ ಸಮಾಜವಾದ ಅಸ್ಪುರ್‍ಶತೆ ಸಮಪಾಲು ಸಮಬಾಳು ಅಂತೆಲ್ಲಾ ವಿದ್ಯಾರ್‍ಥಿಗಳ ಮುಂದೆ ಹೂಸಲೋಕ ಒಂದನ್ನು ಅನಾವರಣಗೊಳಿಸಿದ. ಅಕ್ಕಪಕ್ಕದ ಹಳ್ಳಿಯಿಂದ ಬರುವ ಬೆರಳಣಿಕೆಯಷ್ಟು ಬಾಂಬ್ರ ಹುಡುಗರನ್ನು ಬಿಟ್ಟರೆ ಲಿಂಗಾಯಿತರು, ಗೌಡರ ಹುಡುಗ ಹುಡುಗಿಯರದ್ದೇ ದಂಡು. ಒ.ಬಿ.ಸಿ.ಗಳು ಎಸ್‌ಸಿ, ಎಸ್‌.ಟಿ.ಗಳೂ ಇದ್ದರು. ರಮೇಶ ಮಾಡುವ ಪಾಠ ಹಿಂದುಳಿದವರಿಗೆ ದಲಿತ ಹೈಕಳಿಗೆ ಒಂದು ತೆರನಾದ ಮಾನಸಿಕ ಚೈತನ್ಯ ನೀಡದರೆ. ಪ್ರಬಲ ಕೋಮಿನವರಲ್ಲಿ ತಮ್ಮನ್ನು ಮಾರ್‍ಮಿಕವಾಗಿ ಚೇಡಿಸುತ್ತಿದ್ದಾನೆಯೇ ಎಂಬ ಕಮಟುವಾಸನೆ ಹಬ್ಬಿಸಿತು. ಅದೇಕೋ ರಮೇಶನನ್ನು ಅಷ್ಟಾಗಿ ಒಕ್ಕಲಿಗರ ಹುಡುಗರೇ ಹಚ್ಚಿಕೊಳ್ಳಲಿಲ್ಲ. ಬಸವಣ್ಣನನ್ನು ಹಾಡಿಹೊಗಳುತ್ತಿದ್ದುದರಿಂದಾಗಿ ಮುಲಾಜಿಗೆ ಬಿದ್ದ ಲಿಂಗಾಯಿತ ಹುಡುಗರು ಮುನಿಸಿಕೊಳ್ಳಲಿಲ್ಲವಾದರೂ ದೂರವೇ ಉಳಿದರು. ಇನ್ನುಳಿದವರನ್ನು ತನ್ನ ಪಾಠಪ್ರವಚನ ಸಾಮಾಜಿಕ ಚಿಂತನಗಳಿಂದ ಆಕರ್‍ಷಿಸಿದ್ದರಿಂದಾಗಿ ಶಾಲೆ ಮುಗಿದ ಮೇಲೂ ಅವನ ಹಿಂದೆ ಮುಂದೆ ಹುಡುಗ ಹುಡುಗಿಯರ ದಂಡು. ಅಲ್ಲೂ ಅವನದ್ದು ಜಾತ್ಯಾತೀತ ಸಮಾಜದ ಪರಿಕಲನೆ ಅಂತರ್ಜಾತೀಯ ವಿವಾಹ ಕುರಿತು ಬೋಧನೆ. ಇದ್ದವರು ಇಲ್ಲದವರಿಗೆ ಹಂಚಬೇಕಂಬ ಚೆಂತನೆ ಜಾತಿಗಿಂತ ಪ್ರೀತಿ ಮುಖ್ಯವಂಬ ಭಾವನೆಯನ್ನು ಬಿತ್ತುತ್ತಾ ಮಾತು ಮಾತಿಗೂ ಕುವೆಂಪು ಅವರ ನಾಟಕ ಕವನಗಳನ್ನು ಬಸವಣ್ಣನವರ ವಚನ, ಅಂಬೇಡ್ಕರ್‌ ವಿಚಾರಧಾರೆಗಳನ್ನು ಧಾರೆ ಎರೆವ ರಮೇಶ ಉಳಿದೆಲ್ಲಾ ಉಪನ್ಥಾಸಕರಿಗಿಂತ ಮೇಧಾವಿ ಚಿಂತಕ ಎಂಬ ಭ್ರಮೆಯನ್ನೋ ವಾಸ್ತವವನ್ನೋ ಅಲಕಾಲದಲ್ಲೇ ವಿದ್ಯಾರ್ಥಿಗಳಲ್ಲಿ ಹುಟ್ಟಹಾಕಿದ.

ನಮ್ಮ ದೇಶವನ್ನು ವೈದಿಕರು ಮುಸಲ್ಮಾನರು ಬ್ರಿಟೀಷರು ಆಳಿದ್ದಾರೆ. ಈ ಮೂವರ ಪೈಕಿ ವೈದಿಕ ಆಳ್ವಿಕೆಯೇ ಹೆಚ್ಚು ಅಪಾಯಕಾರಿ. ಬ್ರಿಟೀಷರು ಇಲ್ಲಿನ ಸಂಪತ್ತನ್ನು ದೋಚಿದರು. ಸಂಸ್ಕೃತಿಯನ್ನು ಹಾಳುಗೆಡವಲಿಲ್ಲ. ಮುಸ್ಲಿಮರು ಇಲ್ಲಿನ ಸಂಪತ್ತನ್ನು ಇಲ್ಲಿಯ ಅಭಿವೃದ್ಧಿಗೇ ಬಳಸಿ ಆಳಿದರು. ಆದರೆ ವೈದಿಕರು ಇಲ್ಲಿನವರಿಗೇ ಶಿಕ್ಷಣ ನೀಡದೆ, ಮುಟ್ಟಿಸಿಕೊಳ್ಳದೆ ಬಿತ್ತಿದ ಜಾತಿ ವಿಷಬೀಜ ಈವತ್ತು ಹೆಮ್ಮರವಾಗಿದೆ. ದಲಿತರನ್ನು ಬ್ರಾಹ್ಮಣರು ಮಾತ್ರ ಶೋಷಿಸಲಿಲ್ಲ. ನಾಲ್ಕೂ ವರ್ಗದವರು ಸೇರಿಯೇ ಶೋಷಿಸಿದ್ದಾರೆ. ಅದಕ್ಕೆ ಪ್ರೇರಣೆ ನೀಡಿ ಇಂದಿಗೂ ಬದಲಾಗದೆ ಜಾತೀಯತ ಉಸಿರಾಡಲು ಸನಾತನಿಗಳೇ ಕಾರಣ. ಒಂದು ವಿಧದಲ್ಲಿ ಸರ್ಕಾರದ ಆಯಕಟ್ಟಿನ ಹುದ್ದಗಳಲ್ಲಿ ಹಾಗೂ ಮೀಡಿಯಾಗಳನ್ನು ರಾಜಕಾರಣಿಗಳನ್ನು ಆವರಿಸಿಕೊಂಡು ಪರೋಕ್ಷವಾಗಿ ಅವರೇ ಆಳುತ್ತಿದ್ದಾರೆಂದೆಲ್ಲಾ ವಿಶ್ಲೇಷಿಸುತ್ತಿದ್ದ. ಜಾತಿ, ಅಸ್ಪೃಶ್ಯತಗಳಿರುವವರೆಗೂ ಅದರ ವಿರುದ್ಧ ಪ್ರತಿಭಟನೆಗಳಾಗಬೇಕಂದು ಪ್ರತಿಪಾದಿಸುತ್ತಿದ್ದ. ಸದಾ ಹುಡುಗರ ಹುಡುಗಿಯರ ಗುಂಪು ಕಟ್ಟಿಕೊಂಡು ಬೆಟ್ಟಗುಡ್ಡ ನದಿ ಹಳ್ಳಕೊಳ್ಳ ಸುತ್ತುವ ರಮೇಶ ಹಳ್ಳಿ ಹಿರೀಕರ ಪಾಲಿಗೆ ಬಿಸಿತುಪ್ಪವಾದ. ನಮ್ಮ ಹೈಕಳ ತೆಲಿ ಕಡಿಸ್ತಾ ಅವ್ನೆ. ಇರೋದು ಎಲ್ಡೆ ಜಾತಿ, ಬಡವರದ್ದು, ಸಿರಿವಂತರದ್ದು ಅಂತಾನೆ. ಮೂನ್ನ ಪೀರಸಾಬಿ ಮನಗೋಗಿ ‘ಚಾ’ ಕುಡಿದ್ನಂತೆ. ದಲಿತರ ಹುಡ್ಗಿ ಲಕ್ಷ್ಮಿ ಮನೆಗೋಗಿ ಉಪ್ಪಿಟ್ಟು ತಿಂದನಂತೆ. ಇದೆಲ್ಲಾ ಮೊಬ್ಬಳ್ಳಿನಾಗೆ ಹಿಂದೆ ನಡೆದಿರಲಿಲ್ಲ ಕಣ್ರಯ್ಯ ಎಂದು ಮುಂತಾಗಿ ಮುನಿಸಿಕೂಂಡರು. ಹಿಂಗಾದ್ರೆ ನಮ್ಮ ಹೈಕಳ್ನ ಬ್ಯಾರೆ ಈಸ್ಕೂಲಿಗೆ ಮೂರು ಮೈಲಿ ದೂರದಾಗಿರೋ ಕುರುಡಿಹಳ್ಳಿಗೆ ನಮ್ಮೋವು ನಡದಾಡಿದರೂ ಶಾಟಾ ಹೋತು. ಇಂವಾ ನಮ್ಮ ಹುಡ್ರ ಜಾತಿ ಕೆಡಿಸ್ತಾ ಅವ್ನೆ ಅಂತ ಮೇನೇಜ್‌ಮೆಂಟಿನವರ ಮುಂದ ಒಮ್ಮೆ ಕ್ಯಾತ ತಗೆದರು. ಹಳ್ಳಿಗೆ ಹಳ್ಳಿಯೇ ತೆಪ್ಪಗಿರುವಾಗ ನಾಲ್ಕು ಜನ ಮಾತ್ರ ಪ್ರತಿರೋಧ ತೋರಿದ್ದರಿಂದ ಅವರೂ, ‘ಆಯಿತೇಳಿ. ರಮೇಶಂಗೆ ನಾವೆಲ್ಲಾ ‘ವಾರ್‍ನ್ ಮಾಡ್ತೀವಿ’ ಅಂತ್ಹೇಳಿ ಸಾಗುಹಾಕಿದರು. ಮೇನೇಜ್‌ಮಂಟಿನವರೇನು ಕಿಸಿಯದಿದ್ದಾಗ ಹಿರಿಯತಲೆಗಳು ಮಾದೇಗೌಡರತಾವೇ ದೂರು ಕೊಂಡೊಯ್ದರು. ಗೌಡರು ಸಾವಧಾನವಾಗಿ ಎಲ್ಲವನ್ನೂ ಆಲಿಸಿದರು. ಆಕಳಿಸಿದರು. ‘ನೊಡ್ರಪಾ’ ನಾ ಅಲ್ಲೀಗಂಟ ಓದ್ದೋನಲ್ಲ. ಕಾಲೇಜಿನಾಗೆ ಏನ್‌ ಪಾಠ ಇರ್‍ತದೋ ಅದ್ನೆ ಮಾಡ್ತಾನೆ… ಒದ್ದೋನಿಗೆ ನಾ ಏನ್‌ ಹೇಳ್ಳಿ?’ ಅವರನ್ನೇ ಪ್ರಶ್ನಿಸಿದರು. ‘ನಿಮ್ಮ ಮಕ್ಕಳು ಯಾರೂ ಹಿಂಗಿರಲಿಲ್ಲ ಬುಡಿಸಾಮಿ. ಈವಯ್ಯ ಸಾಬರು, ಮಾದರು ಮನೆಯಾಗೆಲ್ಲಾ ಉಣ್ತಾನಂತೆ. ಎಲ್ಲಾರ ಉಂಟಾ?’ ಪ್ಲೇಟ್ ತಿರುವಿಹಾಕಿದರೀಗ. ‘ಓದ್ದ ಹುಡ್ರೇ ಹಂಗಪ್ಪಾ. ಸಿಟಿನಾಗೆ ಎಲ್ಲಿ ಅಂದ್ರಲ್ಲಿ ಉಂಡೋವು. ಅವಕ್ಕೆಲ್ಲಿ ಜಾತಿ?’ ನಕ್ಕು ಬಿಟ್ಟರು ಗೌಡರು. ಬಂದವರು ನಗಲಿಲ್ಲ. ‘ಅಲ್ಲ ಸೋಮೆ, ನಿಮ್ಮ ಮಗ ಜಾತಿನೇ ಇಲ್ಲ ಅಂತ ನಮ್ಮ ಮನೆ ಹುಡ್ರ ತಲೆಕೆಡಿಸ್ತಾವ್ನೆ. ಯಾರೂ ಮೇಲಲ್ಲ ಕೀಳಲ್ಲ ಅಂತಾನೆ. ಇದನ್ನೆಂಗೆ ಸಾಮೆ ನಾವು ಸಹಿಸೋದು?’ ಒಬ್ಬ ಗರಂ ಆಗಿಯೇ ಕೂಚ್ಚನ್‌ ಮಾಡ್ದ. ‘ಅಲ್ರಪಾ, ಬಸವಣ್ಣೋರ ಕುಲಸ್ಥರಾಗಿ ಹಿಂಗಾ ಮಾತಾಡೋದು? ನೆಲವೊಂದೇ ಶೌಚಾಲಯಕ್ಕೆ ಆಲಯಕ್ಕೆ ಅಂದರು. ದಲಿತರ್‍ಗೂ ಬ್ರಾಂಬಿಗೂ ಲಗ್ನ ಮಾಡಿದರು…’ ಗೌಡರು ಇನ್ನೂ ಏನೇನೋ ಉಪದೇಶ ಮಾಡುತ್ತಿದ್ದರೋ ಏನೋ ಅವರ ಮಾತನ್ನು ತಡೆದ ಬಸಲಿಂಗಣ್ಣ ರಾಂಗ್‌ ಆಗಿ ಬಿಟ್ಟ. ‘ಊರುಗೋಡ್ರು ಅಂತ ತಮ್ಮತಾವ ಬಂದ್ರೆ ನಮ್ಗೇ ಉಪದೇಶ ಮಾಡ್ತೀರಲ್ರಿ? ಇದೇನು ೧೨ನೇ ಶತಮಾನ ಕೆಟ್ಟೋತಾ? ಈವತ್ತು ಜಾತಿ ಬಲ ಇಲ್ದೆ ಯಾವನ್ಗಾರ ಯಲಕ್ಷನ್ನಾಗೆ ಸೀಟು ಸಿಕ್ಕೀತ? ಓಟು ಸಿಕ್ಕೀತ? ವಿನ್‌ ಆದಾನೆ? ವಿನ್‌ ಆದೋನ್ಗೂ ಮಂತ್ರಿಗಿರಿ ಸಿಗಬೇಕಂದ್ರೆ ಈವತ್ತು ಜಾತಿಬಲ ಬೇಕ್ರಿ. ಏನು ಹುಡುಗಾಟ್ಕೆ ಮಾತು ಆಡ್ತಿರ್ರಿ ಗೌಡ್ರೆ? ಅನಾದಿಕಾಲದಿಂದ ಬಂದ ಜಾತಿ ಧರ್ಮವಾ ಎಂತೆಂಥ ಮಾತ್ಮರಿಂದ್ಲೇ ಅಲ್ಲಾಡಿಸೋಕಾಗ್ಲಿಲ್ಲ ನಿಮ್ಮ ಮಗನಂಥ ಗೊಂಜಾಯಿಯಿಂದ ಸಾಧ್ಯವೆ? ನೀವಾರ ಬುದ್ಧಿಯೋಳಿ, ಇಲ್ಲದಿದ್ದರೆ ನಾವೇ ಹೇಳಬೇಕಾಗ್ತೇತಿ’ ಅಂದು ಬಿಟ್ಟರು. ‘ಅವನೇ ನಿಮಗೆ ಬುದ್ಧಿ ಹೇಳ್ತಾನೋ ನೀವೇ ಹೇಳ್ತೀರೋ ತಿಳಿದಂಗೆ ಮಾಡ್ಕಳಿ’ ಎಂದು ನಸುನಗುತ್ತಲೇ ಮೇಕೆದ್ದರು. ಜಗಳ ಕಾಯಲೆಂದೇ ಬಂದವರಿಗೆ ನಿರಾಶೆಯಾಯಿತು. ಗೌಡರೂವೆ ಇವರ ಮಾತನ್ನೇನು ತಲಿಗೆ ತಕ್ಕೊಳ್ಳಲಿಲ್ಲ. ಅದಕ್ಕೆ ಪುರಾತನ ಕಾರಣವೂ ಇದ್ದಿತು. ಬಸಲಿಂಗಣ್ಣ, ಈರಭದ್ರ, ಈರುಪಾಕ್ಷಿ, ಸೋಮಣ್ಣರೆಂಬೀ ನಾಲ್ವರು ಹಳ್ಳಿಯಲ್ಲಿ ಯಾವುದೇ ಒಳ್ಳೆ ಕಲಸಗಳಾದರೂ ತೂಡರಗಾಲು ಹಾಕುವುದು ತಮ್ಮ ಆಜನ್ಮಸಿದ್ದ ಹಕ್ಕೆಂದೇ ಭಾವಿಸಿದವರು. ಊರಿಗೆ ಕಾಲೇಜು ತರಬೇಕಂದಾಗಲು ಅಷ್ಟೆ. ‘ಬ್ಯಾಡಕಣ್ರಿ ಕಾಲೇಜು ಪಾಲೇಜು. ನಮ್ಮ ಹಳ್ಳಿ ಹುಡುಗೀರೆಲ್ಲಾ ಕೆಟ್ಟುಕೆರ ಹಿಡಿದೋತವೆ. ಹೈಸ್ಕೂಲೇ ಸಾಕು’ ಅಂತ ಕುಸ್ತಿಗೆ ಬಿದ್ದವರು. ಹಿಂಗಾಗಿ ಈ ನಾಲ್ವರೂ ದುಷ್ಟಚತುಷ್ಟಯಗಳೆಂದೇ ಸುತ್ತೂ ಹತ್ತು ಹಳ್ಳೀಲಿ ವರಲ್ಡ್ ಪೇಮಸ್ಸು. ಮುಂದೆ ರಮೇಶನನ್ನೇ ಜಾಡಿಸಬೇಕಂದು ಕತ್ತಿ ಮಸೆದರಾದರೂ ಅವನನ್ನು ಮಾತನಾಡಿಸಲೂ ಹಿಂಜರಿದು ಸದ್ಯಕ್ಕೆ ಕದನವಿರಾಮ ಘೋಷಿಸಿದರು. ಈ ಸುದ್ದಿಗದ್ದಲ ಯಾವುದೂ ರಮೇಶನ ಜುಬ್ಬಾದ ಚುಂಗನ್ನೂ ತಾಗಲಿಲ್ಲವಾಗಿ ಅವನ ಕ್ರಾಂತಿಗಂತಹ ಭಂಗವೂ ಆಗದೆ ನಿರಾತಂಕವಾಗಿ ಲಕ್ಷ್ಮಿಯ ಜೊತೆ ಹೆಜ್ಜೆ ಹಾಕಿತು.

ತರಗತಿಗಳಲ್ಲಿ ರಮೇಶ ಲಕ್ಷ್ಮಿಯತ್ತಲೇ ನೋಡುತ್ತಾ ಅವಳನ್ನು ಮಚ್ಚಿಸಲೆಂದೇ ಪಾಠ ಮಾಡುತ್ತಾನೆಂಬ ಗುಮಾನಿ ಹುಡುಗಿಯೂಬ್ಬಳಲ್ಲಿ ಮೂದಲ ಬಾರಿಗೆ ಮರಿ ಹಾಕಿತು. ಹೆಚ್ಚು ಪ್ರಶ್ನೆಗಳನ್ನು ಲಕ್ಷ್ಮಿಗೆ ಕೇಳಿ ಉತ್ತರ ಪಡೆದು ‘ವೆರಿಗುಡ್‌’ ಅಂತ ಇಷ್ಟಗಲ ನಗುವ ರಮೇಶ, ನಾಚಿ ನೀರಾಗುವ ಎರಡುಜಡೆ ಲಕ್ಷ್ಮಿ ಹಲವು ಪಡ್ಡಗಳ ಕಣ್ಣಿಗೆ ಜಂಕ್‌ಫುಡ್‌ ಆದರು. ರಮೇಶನಂತಹ ಮೇಷ್ಟ್ರು ಬಗ್ಗೆ ಇದ್ದಕ್ಕಿದ್ದಂತೆ ಬೇಸರ ಹುಟ್ಟಲು ಕಾರಣವಾಗಿದ್ದು ಅವನು ಪ್ರೋತ್ಸಾಹಿಸಿದ್ದು ಒಬ್ಬ ಯಕಶ್ಚಿತ್‌ ಮಾದರ ಹುಡುಗಿಯನ್ನು ಎಂಬುವ ಅಸಮಾಧಾನದ ಗುಸುಗುಸು ಕೂಸುಗಳನ್ನು ಹೆತ್ತವು. ಲಕ್ಷ್ಮಿ ಯೌವನದ ಭಾರದಲ್ಲಿ ತುಂಬಿ ತುಳುಕುತ್ತಾ ಸಿಂಗರಿಸಿಕೂಂಡು ಬರಲಾರಂಭಿಸಿದಾಗಲಂತೂ ಹಲವು ಪಡ್ಡೆಗಳು ಜಾತಿ ಮರೆತು ಪ್ರೀತಿಗಾಗಿ ಹಾತೊರೆಯುವ ಮಟ್ಟ ತಲುಪಿದರು. ಮೇಷ್ಟ್ರಿಗೀಗ ಸಡನ್‌ ಆಗಿ ಪ್ರತಿಸ್ಪರ್‍ಧಿಗಳು ಹೆಚ್ಚಾದರು. ಲಕ್ಷ್ಮಿ ಮಾತಿಗೆ ಮುಂಚೆ ನಗುತ್ತಿದ್ದಳೆಂಬ ಮೈನಸ್‌ ಪಾಯಿಂಟ್‌ ಒಂದನ್ನು ಕಡಗಣಸಿದರೆ ಚೆಲ್ಲು ಸ್ವಭಾವದವಳಲ್ಲವೆಂಬ ಖಾತರಿ ಇದ್ದಿತು. ಪ್ರೀತಿಗೆ ಬಿದ್ದರೆಲ್ಲಿ ಕಟ್ಟಿಕೊಳ್ಳಬೇಕಾದೀತೋ ಎಂಬ ಅವ್ಯಕ್ತ ಭಯವೂ ಮಲ್ಜಾತಿ ಹುಡುಗರಲ್ಲಿ ಗೂಡುಕಟ್ಟಿದ್ದರಿಂದಾಗಿ ಕಾಳು ಹಾಕಲು ಹಿಂಜರಿದರು. ಬರಿಗಣ್ಣಲ್ಲೇ ನೆಕ್ಕಿ ನೆಲಬಳಿದರು. ಲಕ್ಷ್ಮಿಯ ಅಪ್ಪ ಕೆಂಚನೇನೂ ಕಡಿಮೆ ಆಸಾಮಿಯಲ್ಲ. ಚಳ್ಳಕೆರೆ ಪಟ್ಟಣದಲ್ಲಿ ಫುಟ್‌ವೇರ್‌ ಅಂಗಡಿ ಮಡಗಿದ್ದ. ಸಖತ್‌ ದುಡಿಮೆ. ಆತನ ದೂಡ್ಡ ಮಗನೂ ಅದೇ ವ್ಯಾಪಾರ ಯವ್ವಾರ ನೋಡಿಕೂಳ್ಳುತ್ತಿದ್ದುದರಿಂದಾಗಿ ಕೆಳಹಟ್ಟಿಯಲ್ಲೇ ಕೆಂಚನ ಮನೆ ಮಜಬೂತಾಗಿತ್ತು. ಒಂದು ತರದಲ್ಲಿ ಹಟ್ಟಿಗೆಲ್ಲಾ ಮುಖಂಡನಂತಿದ್ದ ಕೆಂಚ ಸಾಲಕ್ಕಾಗಿ ದೊಡ್ಡ ಮುಕಳಿಯೋರ ಬಳಿ ಕೈ ಚಾಚದಂತಾದ ಮೇಲೆ ಕೆಂಚಣ್ಣನಾಗಿ ಗೌಡರಿಂದಲೂ ಗೌರವಕ್ಕೆ ಪಾತ್ರನಾಗಿದ್ದ. ಮಕ್ಕಳು ಯಾಪಾರ ನೋಡಿಕೂಂಡರೆ ಕೆಂಚಣ್ಣ ಎರಡು ಎಕರೆ ಹೂಲ ಕೊಂಡು ಬೇಸಾಯ ಮಾಡುತ್ತಾ ಸಿಕ್ಕಸಿಕ್ಕವರತಾವ, ‘ಮಗಳು ಎಲ್ಲಗಂಟ ಓತ್ತಾಳೋ ಅಲ್ಲಿಗಂಟ ಓದಿಸೋದೆಯಾ’ ಅಂತ ನಿಗರುತ್ತಿದ್ದ. ಹಳ್ಳಿ ಜನರೊಂದಿಗೆ ಅವನೆಂದೂ ದಲಿತನಂತೆ ತಗ್ಗಿಬಗ್ಗಿ ನಡೆದ ಪಿಂಡವೇ ಅಲ್ಲ. ಗೌಡರ ಎದುರು ಒಂದೀಟು ದನ ತಗ್ಗಿಸಿ ದೂರ್‍ದಾಗೇ ನಿಂತು ಮಾತನಾಡುತ್ತಿದ್ದನೆಂಬುದನ್ನು ಒಪ್ಪಿಕೂಂಡರೂ ಯಾವುದೇ ಅಳುಕಿಲ್ಲದ ಅವನ ನಡವಳಿಕ ಮೇಲು ಜಾತಿಯವರಲ್ಲೇ ಅಳಕು ಹುಟ್ಟಿಸುವಷ್ಟು ಸಶಕ್ತ.

ಚೆನ್ನಾಗಿ ಇಂಗ್ಲೀಷ್‌ ಮಾತನಾಡುತ್ತಿದ್ದ ರಮೇಶ, ಇಂಗ್ಲೀಷ್‌ ಎಂದರೆ ಹೆದರಿ ಆಮಶಂಕೆ ಬೇಧಿ ಮಾಡಿಕೊಳ್ಳುತ್ತಿದ್ದ ಬಡ ವಿದ್ಯಾರ್ಥಿಗಳಿಗೆ ಮಾತ್ರ ಫ್ರೀಯಾಗಿ ಟ್ಯೂಶನ್‌ ಹೇಳಿಕೂಡುತ್ತೇನೆಂದಾಗ ಒಂದಷ್ಟು ಹುಡುಗ ಹುಡುಗಿಯರು ಗೌಡರ ಮನೆಗೇ ಬಂದರು. ಲಕ್ಷ್ಮಿಯೂ ಟ್ಯೂಶನ್ಗೆ ಬಂದಾಗ ತನ್ನ ಸಾನಿಧ್ಯ ಬಯಸಿಯೇ ಬಂದಳೆಂಬ ರಮೇಶನ ‘ಗೆಸ್‌’ ಅವನಲ್ಲಿ ರೆಕ್ಕೆಪುಕ್ಕ ಮೂಡಿಸಿತು. ಆದರೆ ಮಾದೇಗೌಡರ ಮೋರೆ ಘುಟ್‌ಬಾಲ್‌ನಂತಾದೀತೆಂಬುದನ್ನು ಸ್ವತಹ ರಮೇಶನೇ ‘ಗೆಸ್‌’ ಮಾಡಿರಲಿಲ್ಲ. ‘ಅಲೆ ರಮೇಸಾ, ಕೆಂಚನ ಮಗಳು ಬರೋದಾದ್ರೆ ಪಡಸಾಲೆನಾಗೆ ಬ್ಯಾಡಕಣ್‌ ಮಗಾ. ಜಗಲಿ ಮ್ಯಾಗೇ ಕುಂದ್ರಿಸಿ ಪಾಠ ಮಾಡು’ ಅಂತ ತಾಕೀತು ಮಾಡಿದಾಗ ರಮೇಶನಿಗೆ ಶಾಕ್‌. ತಾನಾಗಿಯೇ ಕರೆದ ತಪ್ಪಿಗೆ ಜಗಲಿ ಮ್ಯಾಲೆ ಟ್ಯೂಶನ್‌ ಶುರುಹಚ್ಚಿಕೊಂಡನಾದರೂ ಲಕ್ಷ್ಮಿ ಮಾರನೆ ದಿನವೇ ಗೈರುಹಾಜರು. ರಮೇಶ ಒಲೆಯ ಮೇಲಿಟ್ಟ ಅಕ್ಕಿಯಂತಾದ. ತಾಳಲಾರದೆ ಮರುದಿನ ಕ್ಲಾಸಿನಲ್ಲೇ ಏಕೆ ಟ್ಯೂಶನ್ಗೆ ಆಬ್ಸೆಂಟ್‌? ಅಂತ ಕೇಳಿಯೇ ಬಿಟ್ಟ. ‘ಜಗಲಿ ಮ್ಯಾಲೆ ಕುಂದ್ರಿಸಿ ಪಾಠ ಮಾಡೋದಾದ್ರೆ ಹೋಗಬ್ಯಾಡ ಕಣಮ್ಮಿ ನಮ್ಮ ಜಾತಿ ನಮಗೇ ದೊಡ್ಡದು’ ಅಂತ ಅಪ್ಪಯ್ಯ ಬೈದುಬಿಟ್ಟರು ಸಾ’ ಬಾಂಬು ಸಿಡಿಸಿದಳು ಲಕ್ಷ್ಮಿ. ಜಾತ್ಯಾತೀತ ಭಾವ ಸಮಾನತೆ ತರೋದು ತಾನು ತಿಳಿದಷ್ಟು ಸುಲಭವಲ್ಲವೆಂಬ ಸತ್ಯ ಅವನ ಮನದ ತಿಳಿಗೊಳಕ್ಕೆ ಕಲ್ಲು ಎಸೆಯಿತು. ಕ್ಲಾಸ್‌ ಬಿಟ್ಟಾಗ ರಮೇಶ ಅವಳ ಬಳಿ ‘ಸಾರಿ’ ಕೇಳಿದ. ‘ನೀವು ದೊಡ್ಡೋರು ಅಂಗೆಲ್ಲಾ ನಮ್ಮಂಥೋರ ‘ಸಾರಿ’ ಕೇಳಬಾರದು ಎಂದು ದಾವಣಿ ಸೆರಗಿನ ಚುಂಗಿನ ಜೊತೆ ಆಟವಾಡುತ್ತಾ ನಾಚಿಕೊಂಡಳು ಲಕ್ಷ್ಮಿ. ‘ನಿಮಗೇ ಸಪರೇಟ್‌ ಆಗಿ ಟ್ಯೂಶನ್‌ ಮಾಡಿದ್ರಾಯ್ತು ಬಿಡಿ’ ಅಂದ. ಎಲ್ಲಿ ಮಾಡೋದೆಂದು ತೋಚದೆ ಪೇಚಿಗೆ ಬಿದ್ದ. ‘ನಮ್ಮ ಮನೀಗೆ ಬಂದು ಮಾಡ್ಬೋದಲ್ಲ ಸಾ’ ಅಂದಳು.

ಸಂಜೆ ರಮೇಶ ಅವಳ ಮನೆಯಲ್ಲಿ ಹಾಜರಾದ. ಕೆಂಚಣ್ಣ ಗೌರವದಿಂದಲೇ ಬರಮಾಡಿಕೊಂಡ. ಅವರದ್ದು ತಾರಸಿ ಮನೆ. ಮೇಜು ಕುರ್ಚಿ ಫ್ಯಾನು ಪ್ರಿಜ್ದು ಕಾಟು, ಅಂಬೇಡ್ಕರ್‌ ದೂಡ್ಡ ಪಟವೂ ಕಂಡಿತು. ದಲಿತೋದ್ದಾರ ಮಾಡುತ್ತಿದ್ದೇನೆಂಬ ಭಾವನಯಿಂದಲೆ ದಲಿತರೂಂದಿಗೆ ಉದಾರವಾಗಿ ವರ್ತಿಸುತ್ತಿದ್ದ. ರಮೇಶ ಕೆಳಹಟ್ಟಿಯಲ್ಲಾದ ಬದಲಾವಣೆ ಕಂಡು ತಾನು ಆಪಾಟಿ ಬೀಗುವುದು ಅನಗತ್ಯವೆನಿಸಿತು. ಮುಂದಿನ ಗ್ರಾಮಪಂಚಾತಿ ಯಲಕ್ಷನ್ಗೆ ನಿಲ್ಲಬೇಕಂತಿವ್ನಿ ಸಣ್ಣಗೋಡ್ರ ಎಂದೆಲ್ಲಾ ಕಂಚಣ್ಣ ರಾಜಕೀಯದ ಆಗುಹೋಗುಗಳು, ತಮ್ಮ ಹಕ್ಕುಗಳ ಕುರಿತು ಸುದೀರ್‍ಘವಾಗಿ ಮಾತನಾಡುವಾಗ ಹಿಳಿಪಿಳಿಸುತ್ತಾ ಕೂತ. ‘ದಯಮಾಡಿ ತಾವು ಕ್ಷಮಿಸಬೇಕು ಸಾ. ಲಕ್ಷ್ಮಿಗೆ ಪಾಠ ಮಾಡ್ಲಿಕ್ಕೆ ನಮ್ಮ ಮನೆಗಂಟ ಬರೋದು ನಿಮಗೂ ಸ್ರೇಯಸಲ್ಲ….. ನಮಗೂ. ಇದೊಂದು ನಮೂನಿ ಹುಲಿಸವಾರಿ ಇದ್ದಂಗೆ. ಮ್ಯಾಗಿದ್ದರೂ ಕಳಾಕೆಬಿದ್ದರೂ ಕಷ್ಟವೆಯಾ. ತಮ್ಮದು ದೊಡ್ಡಮನ್ಸು ಸಾ. ಆದರೆ ಹಳ್ಳಿನೋರೆಲ್ಲಾ ತಮ್ಮಂಗೆ ಇರಕಿಲ್ರಿ. ಬಂದೀರಿ ‘ಚಾ’ ಕುಡ್ಕಂಡು ಹೊಂಟೋಗಿ’ ಅಂದ ಕೆಂಚನ ಮಾತಿನಲ್ಲಿ ಕೂಂಕುಬಿಂಕ ಭಯ ಎಳ್ಳಷ್ಟು ಇರಲಿಲ್ಲ. ಸುಖಾಸುಮ್ಮನೆ ಗಂಡಾಂತರವನ್ನು ಮೈಮೇಲೇಕೆ ಎಳದುಕೊಳ್ಳಬೇಕೆಂಬ ಅನುಭವದ ಪಾಠ ಅವನ ಮಾತಿನಲ್ಲಿತ್ತು. ಕೆಂಚನ ಹೆಂಡ್ರು ತಂದುಕೊಟ್ಟ ‘ಚಾ’ ಕುಡಿದು ಮೇಲೆದ್ದರೂ ಲಕ್ಷ್ಮಿ ಮುಖ ಮಾತ್ರ ಕಾಣಲಿಲ್ಲವಾಗಿ ರಮೇಶ ಭಾರವಾದ ಹೆಜ್ಜೆಗಳನ್ನು ಹಾಕಿದ. ಇದೆಲ್ಲಾ ಸುದ್ದಿಯಾಗದಿದ್ದರೂ ಅದೇಕೋ ಲಕ್ಷ್ಮಿ ಮೊದಲಿನಂತೆ ತನ್ನತ್ರ ಒಮ್ಮೆ ನೋಡಳು ನಗಳು ಎಂಬ ಅತೃಪ್ತಿ ಅವನ ಜೀವ ಹಿಂಡಿ ಹಿಪ್ಪೆ ಮಾಡಿತು. ಲಕ್ಷ್ಮಿ ಮಾತಿಗೆ ನಿಲ್ಲದೆ ತಪ್ಪಿಸಿಕೊಳ್ಳುವಾಗ ತಾನೇ ಮಾತನಾಡಲು ಯತ್ನಿಸಿದ. ಎಲ್ಲರೂ ತಮ್ಮನ್ನೇ ನೋಡುತ್ತಿದ್ದಾರೆಂಬ ಅಳಕು ತಾಳೆಮರವಾದಾಗ ತಾಳ್ಮೆವಹಿಸಿದ. ಪಿ.ಯು. ಪರೀಕ್ಷೆ ಸಮೀಪಿಸಿದ್ದರಿಂದ ಎಲ್ಲರ ಚಿತ್ತ ಅತ್ತಲಾಗಿ ಪರೀಕ್ಷೆ ಮುಗಿದಾಗ ಎದೆಭಾರ ಇಳಿದಂತಾಯಿತೆಂಬುದೇನೋ ನಿಜ. ಆದರೆ ರಮೇಶನ ಎದೆಭಾರ ಹೆಚ್ಚಿತು. ಈಗವಳನ್ನು ನೋಡುವುದು ಮತ್ತಷ್ಟು ದುಸ್ತರವಾದಾಗ ಅಂಗಾತ ಬಿದ್ದ ಬಿರಲೆಯಂತಾದ. ನಾನೇಕೆ ಅವಳನ್ನು ನೋಡಲು ಹಾತೂರೆಯುತ್ತಿದ್ದೇನೆಂದು ಪ್ರಶ್ನಿಸಿಕೊಂಡ. ಲಕ್ಷ್ಮಿ ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸಲ್ಲಿ ಪಾಸಾಗೋದರಲ್ಲಿ ಸಂಶಯವಿರಲಿಲ್ಲ. ಹಾಗೆಯೇ ಮುಂದೆ ಅವಳು ಹೆಚ್ಚಿನ ಓದಿಗಾಗಿ ಹಟ್ಟಿ ತೂರೆಯಬಹುದಂಬ ಶಂಖೆ ಅವನ ಮಿದುಳಿನಲ್ಲಿ ಟಿಸಿಲೊಡೆದಾಗಲಂತೂ ಬಾಣಲಿಯಿಂದ ಬೆಂಕಿಗೆ ಬಿದ್ದ ಅನುಭವ. ಇಷ್ಟಕ್ಕೂ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳಾ? ಪ್ರಶ್ನೆ ಭೂತಾಕಾರವಾಯಿತು. ಪ್ರೀತಿಸುತ್ತಿದ್ದಳೆಂದೇ ಇಟ್ಟುಕೊಳ್ಳೋಣ. ಮುಂದೇನು? ಪ್ರಶ್ನೆ ಬೇತಾಳವಾಗಿ ಬೆನ್ನಿಗೆ ಬಿತ್ತು. ವಾರದಲ್ಲೇ ಕೊರಗಿ ಹೋದ. ಶೇವಿಂಗ್‌ ಮಾಡಿಕೊಳ್ಳಲೂ ಮನಸಿಲ್ಲ. ಬಟ್ಟೆ ಬಗ್ಗೆಯೂ ನಿಗಾಯಿಲ್ಲ. ಲಕ್ಷ್ಮಿಯನ್ನು ಇನ್ನು ನೋಡದಿದ್ದಲ್ಲಿ ಬದುಕಲಾರನೇನೋ ಎಂಬ ಸಂಕಟಕ್ಕೀಡಾಗಿ ಕೆಳಹಟ್ಟಿಯತ್ತ ಹೆಜ್ಜೆ ಹಾಕಿದ. ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಪುಕ್ಕಲರಿಗೆ ಪ್ರೇಮಿಸುವ ಯೋಗ್ಯತೆ ಖಂಡಿತಯಿಲ್ಲ. ತನಗೆ ತಾನೇ ತೀರ್‍ಪುಕೊಟ್ಟುಕೊಂಡ. ಗೆಳತಿಯರೊಂದಿಗೆ ಮಾರಿಗುಡಿಗೆ ಪೂಜೆಗೆಂದು ಬಂದಿದ್ದ ಲಕ್ಷ್ಮಿ ಅವನು ಕಳಹಟ್ಟಿ ಸೇರುವ ಮೊದಲೆ ದರ್ಶನಕೊಟ್ಟಳು. ಒಬ್ಬರನ್ನೊಬ್ಬರು ನೋಡುತ್ತಾ ಅದಷ್ಟು ಹೊತ್ತು ನಿಂತರೋ! ಗುಟ್ಟನ್ನರಿತವರಂತೆ ಗೆಳತಿಯರು ಕ್ಷಣದಲ್ಲೇ ಅಂತರ್‍ಧಾನರಾದರು. ಇಬ್ಬರಲ್ಲೂ ಹೊಯ್ದಾಟ ಕಣ್ಣಲ್ಲಿ ನೀರಿನ ತರೆ. ‘ನೀವು ನನ್ನನ್ನು ಮರತೇ ಬಿಟ್ರೇನೋ ಅನ್ಕೊಂಡ ಸಾ’ ಲಕ್ಷ್ಮಿಯೇ ಮೊದಲು ತುಟಿಯ ಬೀಗ ತೆರೆದಳು. ಮನದಲ್ಲಿದ್ದುದನ್ನೆಲ್ಲಾ ಸರಸರನೆ ಕಾರಿಕೊಂಡ ರಮೇಶ. ‘ಇದೆಲ್ಲಾ ಸಾಧ್ಯವೆ ಸಾ?’ ಭಯವಿಹ್ವಲಗೊಂಡಿದ್ದಳು ಲಕ್ಷ್ಮಿ. ‘ಸಾಧ್ಯಮಾಡಬೇಕು. ಅದೇ ಪ್ರಗತಿ ಪರಿವರ್ತನೆ ಮನ್ವಂತರ’ ಪಾಠ ಮಾಡಿದ. ನಿಮ್ಮ ಮನೆಯೋರು ಒಳಾಕೇ ಬಿಟ್ಕಣ್ದೋರು ಲಗ್ನಕ್ಕೆ ಒಪ್ತಾರಾ ಸಾ?’ ಕೆನ್ನೆಯ ಮೇಲೆ ಕಣ್ಣೀರಿಳಿದವು. ‘ಒಪ್ಪಿಸ್ತೀನಿ’ ಅಂದವಳ ಕಣ್ಣೀರು ವರೆಸಿದ.

ರಾತ್ರಿ ಊಟದ ನಂತರ ಅಂಗಳದಲ್ಲಿ ಹೆಂಡತಿ ಕೊಟ್ಟ ವೀಳ್ಯ ಮೆಲ್ಲುತ್ತಾ ಕುಂತಿದ್ದ ಗೌಡರ ಮುಂದೆ ಅಪರಾಧಿಯಂತೆ ಬಂದು ನಿಂತ. ತಂದೆ ತಾಯಿಗೆ ವಿದ್ಯಾವಂತನಾದ ಅವನೆಂದರೆ ರವಷ್ಟು ಹೆಚ್ಚೆ ಪ್ರೇಮ. ‘ಏನ್ಲಾ ರಮೇಸಾ, ಖರ್ಚಿಗೇನಾರ ರೊಕ್ಕ ಬೇಕಿತ್ತೇನ್ಲಾ ಮಗಾ’ ಮಗನನ್ನು ಪಕ್ಕವೆ ಕೂರಿಸಿಕೊಂಡು ಕಕ್ಕುಲಾತಿ ತೋರಿದರು. ‘ರೂಕ್ಕದ ಮಾತಲ್ಲಪ್ಪಾ’ ಎಂದು ತನ್ನ ಮನದ ವಾಂಛೆಯನ್ನು ನಿಧಾನವಾಗಿ ಬಿಚ್ಚಿಟ್ಟ. ಅವನ ಮಾತು ಮುಗಿಯುವ ಮೂದಲೆ ಗೌಡತಿ ಲಬೋಲಬೋ ಬಾಯಿಬಡಿದು ಕೊಂಡಳು. ದೊಡ್ಡಮಗ ಹೆಂಡರ ಮಗ್ಗಲಲ್ಲಿ ಪವಡಿಸಿದ್ದವನು ದಡಬಡಿಸಿ ‘ಏನಾತವ್ವ?’ ಎಂದು ಒದರುತ್ತಲೇ ಓಡಿಬಂದ. ‘ಏನೂ ಆಗಿಲ್ಲ. ಏನೂ ಆಗೋದೂ ಇಲ್ಲ ಕಣ್ಲೆ ಕುಮಾರಗಾಡ’ ಹುಸಿನಗೆ ನಕ್ಕ ಗೌಡರು ರಮೇಶನತ್ತ ಹೊಳ್ಳಿದರು. ‘ನೋಡುಮಗಾ, ನೀನು ಲಕ್ಷ್ಮಿನ ಪಿರೂತಿ ಮಾಡು. ಅವಳ್ನೂ ಮಡಿಕ್ಕೋ. ಆದರೆ ನಮ್ಮ ಜಾತಿ ಹುಡ್ಗಿನಾ ಲಗ್ನ ಆಗು. ಅದ್ರಾಗೇನೋದಾಳು’ ಅಂದರು. ‘ಲಗ್ನ ಆಗೋದಾದ್ರೆ ನಿನ್ನ ಅಕ್ಕನ ಮಗಳನ್ನೇ ಆಗಬೇಕು ಕಣ್ಲೆ. ಹುಟ್ಟಿದಾಗೆ ಇಬ್ಬರಿಗೂ ಗಂಡಹೆಂಡ್ರು ಅಮತ ಹೆಸರಿಟ್ಟಾಗೈತೆ….. ಹುಸಾರ್‌’ ಗೌಡತಿ ಆವಾಜ್‌ ಹಾಕಿದಳು. ‘ಅದು ಹಂಗಲ್ಲವಾ’ ಅಂತ ರಮೇಶ ಗೊಣಗಿದ. ‘ಯೋಯ್‌ ದುಸ್ರಾ ಮಾತೇ ಇಲ್‌ ತಮಾ. ಕೇಳಿಲ್ಲಿ ನಮ್ಮ ಮಾತು ಮೀರಿದ್ಯೋ ಇಡೀ ಕೆಳಹಟ್ಟಿಗೇ ಬೆಂಕಿ ಇಕ್ಕಿಸಿ ಸುಟ್ಟು ಭಸ್ಮ ಮಾಡಿಸಿಬಿಡ್ತೀನಿ. ಗೆಪ್ತಿಲಿಟ್ಕೋ’ ಕುಮಾರಗೌಡ ಕೆಂಡಮಂಡಲನಾದ. ‘ಸುಮ್ಗಿರ್‍ಲಾಲೆ ತೆಪರ ಸನ್ಯಾಸಿ. ಕೆಳಹಟ್ಟೀರ್‍ನ ಹಂಗೆಲ್ಲಾ ಎದುರು ಹಾಕ್ಕಂಬೋ ಕಾಲ ಅಲ್ಲಿದು. ಸರ್ಕಾರ ಸಾಲು ಕ್ವಾಳ ತೊಡಿಸಿಬಿಡ್ತೇತ ನಮ್ಗೆ’ ದೂಡ್ಡಮಗನನ್ನು ಎಚ್ಚರಿಸಿದರು ಗೌಡರು. ‘ರಮೇಸಾ, ಇದೆಲ್ಲಾ ಬೇಕಾ ನಮಗೆ? ಸುಮ್ಗೆ ಮಲ್ಲಿಕ್ಕಾ ಹೋಗ್ಲಾಲೆ ಬಾಂಚೋದ್‌’ ಹೆಚ್ಚೇ ಗದರಿಕೊಂಡರು. ಇನ್ನು ಹೇಳೋದು ಕೇಳೋದು ಏನೂ ಬಾಕಿ ಉಳಿದಿಲ್ಲವೆನ್ನಿಸಿತು ರಮೇಶನಿಗೆ. ಕ್ಯಾಲಿಂಡರ್‌ನಲ್ಲಿ ನೇತಾಡುತ್ತಿದ್ದ ಬಸವಣ್ಣ ಪುಸಕ್ಕನೆ ನಕ್ಕಂತಾದಾಗ ರಮೇಶನ ಸ್ವಾಭಿಮಾನ ಸೆಟೆದುಕೊಂಡಿತು.

ಬೆಳಿಗ್ಗ ಎದ್ದಾಗ ಮಗನ ಮಾರಿ ಕಾಣಲಿಲ್ಲ. ಸ್ನಾನ ಮಾಡದೆ ಎಂದೂ ಹೊರಹೋದವನಲ್ಲ! ಮುನಿಸಿಕೊಂಡನೆ? ಗೌಡರ ಜೀವ ತುಡಿಯಿತು. ರಾತ್ರಿಯಾದರೂ ಮಗ ಮನೆಗೆ ಹಿಂದಿರುಗಲಿಲ್ಲ. ಗೌಡರೇ ಕಾಲ್‌ ಮಾಡಿದರು. ಮೊಬೈಲ್‌ ಸ್ಟಿಚ್ಚ್‌ ಆಫ್‌. ಎಲ್ಲಿ ಹೋದಾನು ಬರ್ತಾನ್‌ ಬಿಡು ಎಂದು ತಮ್ಮನ್ನು ತಾವೇ ಸಂತೈಸಿಕೂಂಡರು. ಕೆಳಹಟ್ಟಿಯ ಲಕ್ಷ್ಮಿ ಕೂಡ ನಾಪತ್ತೆ ಎಂಬ ದುರ್‍ವಾರ್‍ತೆ ಕಿವಿಗೆ ಬೀಳುತ್ತಲೆ ಕುದ್ದು ಹೋದರು. ಮೊಬ್ಬಳ್ಳಿಯೋರ ಬಾಯಿಗೆ ಎರಡು ಮನೆಯವರೀಗ ಚೂಯಿಂಗ್‌ ಗಮ್‌ ನಂತಾದರೂ ಮುಖಾಮುಖಿಯಾಗದೆ, ಬಡಿದಾಟಗಳಿಗೆ ಆಸ್ಪದಕೊಡದೆ ಪೆಟ್ಟುತಿಂದ ಹುಲಿಯೋಪಾದಿಯಲ್ಲೆ ಒಳಗೇ ಗುರುಗುಟ್ಟುತಿದ್ದುದರಿಂದಾಗಿ ಮೊಬ್ಬಯ ಜನತೆಗೆ ಹೆಚ್ಚಿನ ಎಂಟರ್‌ಟೇನ್‌ಮೆಂಟೇನು ಸಿಗಲಿಲ್ಲ.

ಇಷ್ಟೆಲ್ಲ ಲವ್‌ ಸ್ಟೋರಿ ನಿರ್‍ಮಲಮ್ಮಂಗಾಗಲಿ, ಸುವರ್‍ಣಮ್ಮಂಗಾಗಲಿ ತಿಳಿಯದೇ ಹೋದರೂ ಲವ್‌ ಮಾಡಿ ಓಡಿಬಂದು ಲಗ್ನವಾದೋರೆಂಬ ಅವರ ಗೆಸ್ಸು ಮಿಸ್ಸಾಗಿರಲಿಲ್ಲ. ಹಾಗೆ ಎದುರುಮನೆ ಹುಡುಗಿಯ ಆಕಾರ ನಡಿಗೆ ನಾಚಿಕೆಯನ್ನು ನೋಡಿಯೇ ಅವಳು ಬಸರಿ ಆಗವಳೆ ಕಣ್ರಿ ಎಂದು ಆ ಹೆಣ್ಣುಮಕ್ಕಳಿಬ್ಬರೂ ಬಾಯಿ ಚಪರಿಸಿಕೂಂಡರು. ರಮೇಶ ದಿನವೂ ಸಂಜೆ ಲಾಲ್‌ಬಾಗ್‌ ಕಬ್ಬನ್‌ಪಾರ್ಕ್‌ ಎಂ.ಜಿ. ರೋಡ್‌ ಎಂದು ತಪದೆ ಅವಳನ್ನು ಕರೆದುಕೊಂಡು ಹೋಗುವುದು ಅವರ ಮಾತಿಗೆ ಪುಷ್ಟಿ ನೀಡಿತು. ತಾವೇ ಮಾತಾಡಿಸಿ ಮಿಡಿಗಾಯಿ ಕೂಟ್ಟರು. ಆಗೀಗ ಮಾಡಿದ ತಿಂಡಿತೀರ್ಥಗಳನ್ನು ಸಪ್ಲೆ ಮಾಡುತ್ತಾ ಲಕ್ಷ್ಮೀಯಲ್ಲಿ ಆತ್ಮಸ್ಥೈರ್ಯ ತುಂಬಿದರು. ಏನಾದರೂ ತೊಂದರೆಯಾದರೆ ಎದುರು ಮನೆ ಆಂಟಿಯರು ನೋಡಿಕೂಂಡಾರೆಂಬ ಧೈರ್‍ಯವನ್ನು ರಮೇಶನಲ್ಲೂ ಪ್ರಸಾದಿಸಿದರು. ಲಕ್ಷ್ಮಿ ಈಗೀಗ ತನ್ನ ಊರು ಹಟ್ಟಿ ಹೆತ್ತವರ ಬಗ್ಗೆ ಹಲಬುತ್ತಾ ಕಣ್ಣೀರು ಹಾಕುವಾಗ ಅವನಲ್ಲೂ ಅನಾಥ ಪ್ರಜ್ಞೆ. ಅವನಂತೂ ಮೊಬ್ಬಳ್ಳಿಯ ಆಸಯನ್ನೇ ಕೈಬಿಟ್ಟಿದ್ದ.

ಒಂದು ಸಂಜೆ ಆಕಸ್ಮಿಕವೆಂಬಂತೆ ಗಂಡಹಂಡಿರಿಬ್ಬರೂ ಹೋಟಲಲ್ಲಿ ಟಿಫಿನ್‌ ಮಾಡುವಾಗ ಕುಮಾರಗೌಡನ ಕೈಯಲ್ಲಿ ಸಿಕ್ಕಿಬಿದ್ದರು. ಕುಮಾರನ ಜೊತ ನಾಲ್ಕಾರು ರೈತರೂ ಇದ್ದರು. ಕುಮಾರಗೌಡನೇ ಮಾತನಾಡಿಸಿದ. ರೇಗಲಿಲ್ಲ ಕೂಗಾಡಲಿಲ್ಲ. ‘ಅಪ್ಪಾ ಅವ್ವಾ ನಿನ್ನ ಚಿಂತಿನಾಗ ಕೂರಗಿ ಎಲತೂಗಲು ಎಲ್ಡಾಗವರೆ, ಹಳ್ಳಿಗೆ ಬಾರೋ ಹೋಗೋಣ’ ಅಂದ. ‘ಕಾಲಬಂದಾಗ ಬರ್‍ತಿನೇಳು’ ಅಂದ ರಮೇಶ. ‘ಹಿಂಗ್‌ ಕದ್ದು ಓಡಿಬರೋದಾ? ಹೇಳಿದಿದ್ದರೆ ನಾನೇ ಅಪ್ಪನಿಗೆ ಸಮಾಧಾನ ಯೋಳಿ ಲಗ್ನ ಮಾಡಿಸ್ತಿರಲಿಲ್ವಾ, ಅಪ್ಪೇನು ಕಲ್ಲು ರುದಯದೋನಾ ಹೆದರ್‍ಕೊಂಡು ಓಡಿ ಬಂದು ಬಿಡೋದಾ’ ಎಂದೆಲ್ಲಾ ಮುನಿಸಿಕೊಂಡ. ‘ಸರಿಕಣೋ. ಮೊದ್ಲು ನೀನು ನಮ್ಮ ಮನೆಗೆ ಬಾ. ಅಪ್ಪ ಅವ್ವಂತಾವ ಮಾತಾಡು. ಅವರಿಗೆ ಅಸಮಾಧಾನ ಇಲ್ಲ ಅಂದ್ರೆ ಬರೋಣ. ನಾವು ತಪ್ಪು ಮಾಡಿದ್ದೇವೆಂಬ ಹೆದರಿಕೆಯಿಂದಲ್ಲ ಓಡಿ ಬಂದದ್ದು. ಹಳ್ಳಿನಾಗಿರೋ ನಿಮಗೆ ಮುಜುಗರವಾಗದಿರ್‍ಲಿ ಅಂತ ಕಣೋ’ ರಮೇಶ ತಿರುಗೇಟು ನೀಡಿದ. ‘ಮಾತಾಡ್ತೀನೇಳಯ್ಯಾ’ ಮುನಿಸು ಮರೆತ ಕುಮಾರಗೌಡ. ‘ಲಕ್ಷ್ಮಿ ಈಗ ಪ್ರಗ್ನೆಂಟ್‌ ಕಣಣ್ಣ’ ಅಂತ ರಮೇಶ ನಾಚಿಕೊಂಡ. ಕುಮಾರ ಲಕ್ಷ್ಮಿಮೋರೆ ನೋಡಿ ನಕ್ಕು ಅವಳಲ್ಲಿ ವಿಶ್ವಾಸ ತುಂಬಿದ. ‘ಮನೆಗೆ ಇನ್ನೊಂದಪ ಬತ್ತಿನೇಳು’ ಎಂದವನೆ ತನ್ನವರೊಂದಿಗೆ ಎದ್ದಾಗ ರಮೇಶ ಮನೆ ವಿಳಾಸ ಬರೆದುಕೊಟ್ಟ, ತಿಂಗಳಾದರೂ ಕುಮಾರನ ಸುದ್ದಿಯಿಲ್ಲವಾಗಿ ರಮೇಶ ಅವನನ್ನು ಮರೆತುಬಿಟ್ಟ. ಲಕ್ಷ್ಮಿ ತವರಿಗಾಗಿ ಹಂಬಲಿಸಿ ಅವನಲ್ಲಿ ಕಿರಿಕಿರಿ ಉಂಟುಮಾಡಿದಳು. ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಬಂದ ಕುಮಾರಗೌಡ ದಂಪತಿಗಳ ಹರ್‍ಷಕ್ಕೆ ಕಾರಣವಾದ. ‘ಅಪ್ಪ ಅವ್ವಂಗೆ ಲಕ್ಷ್ಮಿ ಬಸಿರೆಂಗ್ಸು ಅಂತ ತೀಳಿತ್ಲು ಕ್ವಾಪ ಮರತ್ರು ಕಣ್‌ ತಮಾ. ಪರದೇಸಿಗಳಂಗೆ ಯಾಕದಾರಲ್ಲಿ ಬರಾಕೇಳು ಅಂದ್ರಪಾ’ ಅಂದ. ಪರೀಕ್ಷೆ ನಡದೈತೆ ರಜಾದಾಗೆ ಬರ್‍ತೀವಿ ಎಂದ ರಮೇಶ. ಇಷ್ಟಾದರೂ ಊಟ ಮಾಡದೆ ‘ಚಾ’ ಕುಡಿದು ಕುಮಾರ ಎದ್ದು ಹೋದಾಗ ಪಿಚ್ಚೆನಿಸಿತು.

ರಜಾಕ್ಕೆ ಕರೆದೊಯ್ಯಲು ಕುಮಾರಗೌಡನೇ ಬಂದಾಗ ಇವರಿಬ್ಬರೂ ಅಧೀರತೆಯಿಂದ ಮುಕ್ತರಾದರು. ಹಳ್ಳಿಗೆ ಬಂದಾಗ ಜನ ಬೀದಿಬೀದಿಯಲ್ಲಿ ನಿಂತು ನೋಡಿತು. ಮನೆಯಲ್ಲೂ ನೆಂಟರೂ ಇಷ್ಟರು ತುಂಬಿಕೊಂಡಿದ್ದರು. ಲಕ್ಷ್ಮಿ ತಬ್ಬಿಬ್ಬಾದಳು. ‘ನೀವು ಬತ್ತೀರಂತ ಭರ್ಜರಿ ಊಟ ಇಕ್ಕಂಡೀವಿ ಕಣ್ಲಾಲೇ’ ಎಂದು ಸ್ವತಹ ಗೌಡರೇ ಸಂಭ್ರಮಪಡುವಾಗ, ಅವ್ವ ಗುಮ್ಮನಂಗೆ ಬಿಕ್ಕಂಡಿರೋವಾಗ ರಮೇಶ ಕನ್‌ಫ್ಯೂಸ್‌ ಆದ. ಅಕ್ಕ, ಅಕ್ಕನ ಇಬ್ಬರು ಹಣ್ಣುಮಕ್ಕಳು ಬೇರೆ ಬಂದಿದ್ದಾರೆ. ಆದರೆ ಲಕ್ಷ್ಮಿ ಮನೆಯೋರು ಯಾರೂ ಕಾಣಲಿಲ್ಲವಾಗಿ ಅವಳು ತನ್ನ ಮನೆ ನೆನಪು ಮಾಡಿಕೊಂಡಳು. ‘ಉಂಡಮ್ಯಾಲೆ ಹೋಗೋವಂತ ಕಣವ್ವ. ರಮೇಸಾ, ಈಕೀನ ಅವರ ಮನ್ತಾವ ಕರ್‍ಕೊಂಡು ಹೋಗಿ ಬಾರ್‍ಲಾ’ ರಮೇಶನ ಅವ್ವನೇ ಆರ್‍ಡರ್‌ ಮಾಡಿದಾಗಲಂತೂ ಅವನ ಬೆಂದ ಮನಕ್ಕೆ ಮಳೆಯ ಸಿಂಚನ. ಗಂಡಹಂಡಿರಿಬ್ಬರನ್ನೇ ಒಂದೆಡ ಊಟಕ್ಕೆ ಕೂರಿಸಿ ಎದುರು ಪಂಕ್ತಿಯಲ್ಲಿ ಇತರರು ಊಟಕ್ಕೆ ಕೂತರು. ಅಲ್ಲಿ ಔತಣಕೂಟದ ಮೋಜು ಕಾಣದೆ ಎಲ್ಲವೂ ಔಪಚಾರಿಕವೆನ್ನಿಸಿದಾಗ ರಮೇಶ ಖಿನ್ನತೆಗೊಳಗಾದ. ಎಲ್ಲರದ್ದು ಊಟ ಮುಗಿದು ವೀಳ್ಯ ತಿನ್ನುತ್ತಾ ಅವರವರ ಯೋಗ್ಯತಾನುಸಾರ ಬೀಡಿ ಸಿಗರೇಟು ‘ಧಂ’ ಎಳೆವಾಗಲೇ ಅಕ್ಕ ಅವ್ವ, ಅಕ್ಕನ ಮಕ್ಕಳು ಬೇಧಿ ಎಂದು ಚೊಂಬು ಹಿಡಿದು ನಾಕಾರು ಸಲ ಒಳಗೂ ಹೂರಗೂ ರನ್ನಿಂಗ್‌ ರೇಸ್‌ಗಿಳಿದಾಗ ಇತರರಲ್ಲೂ ಗಾಬರಿ. ಸ್ನಲ್ಪ ಹೊತ್ತಿನಲ್ಲೇ ಲಕ್ಷ್ಮಿಗೂವೆ ವಾಂತಿಬೇಧಿ ಕಾಣಿಸಿಕೂಂಡಿತು. ಹೂಟ್ಟಬ್ಯಾನಿ ಎಂದು ಚೀರಾಡಿ ಬಹಿರ್‍ದೆಷಗೂ ಹೋಗಲಾಗದೆ ಸೂರಗಿ ಬಿದ್ದೇಬಿಟ್ಟಳು. ಎಲ್ಲರನ್ನೂ ಸಣ್ಣ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಡಾ. ಹಲಗೆಪ್ಪ ಸೂಜಿ ಚುಚ್ಚಿ ಡ್ರಿಪ್‌ ಏರಿಸಿ ಎಲ್ಲರನ್ನು ಸಾಲಾಗಿ ಉಲ್ಡುಗಡವಿದ. ಅರ್ಧಗಂಟೆಯಲ್ಲೇ ಅವ್ವ ಅಕ್ಕ ಅಕ್ಕನ ಮಕ್ಕಳು ಚೇತರಿಸಿಕೂಂಡು ಎದ್ದು ಕುಂತರು. ಕ್ಷಣಕ್ಷಣಕ್ಕೂ ಲಕ್ಷಿ ಸ್ಥಿತಿ ಮಾತ್ರ ಗಂಭೀರವಾದಾಗ. ‘ಡೋಂಟ್‌ವರಿ. ಫುಡ್‌ಪಾಯಿಸನ್‌ ಆಗಿರಬಹುದು’ ಎಂದು ಡಾ. ಹಲಗಪ್ಪ ರಮೇಶನನ್ನು ಸಂತೈಸಿದ. ವಿಷಯ ತಿಳಿದ ಕೆಂಚ, ಅವನ ಹೆಂಡ್ರು ಮಕ್ಕಳು ಹಟ್ಟಿ ಜನರೊಂದಿಗೆ ಧಾವಿಸಿದರು. ಲಕ್ಷಿಗೆ ಫಿಟ್ಸ್‌ ಬಂದು ಹೊಯ್ದಾಡುವಾಗ ಇಡೀ ಹಳ್ಳಿಗೆ ಹಳ್ಳಿಯೇ ಗರ್‍ಭಿಣಿಗಾಗಿ ಮರುಗಿತು. ಡಾಕ್ಟರು ಮತ್ತೆ ಸೂಜಿ ಚುಚ್ಚಿದರಾದರೂ ಲಕ್ಷ್ಮಿಯ ದೇಹ ಹೊಯ್ದಾಟ ನಿಲ್ಲಿಸಿ ಸ್ತಬ್ಧವಾಯಿತು. ‘ಲಕ್ಷ್ಮೀ’ ಅಂತ ರಮೇಶ ಚೀರಾಡಿದ. ‘ನಮ್ಮ ಕೈಲಿ ಏನೈತಪ್ಪಾ ಮಗ್ನೆ, ಎಲ್ಲಾ ಸಿವನ ಆಟಕಣೋ? ಗೌಡರು ಆಕಾಶ ತೋರಿಸಿದರು. ‘ದೇವರಾಟ ಅಲ್ಲ ಕಣೋ ಗೌಡಾ. ಎಲ್ಲರೂ ಉಳ್ಕೊಂಡು ನನ್ನ ಮಗಳು ಒಬ್ಬಳೇ ಹೆಂಗೋ ಸತ್ಳು? ವಿಷಹಾಕಿ ಕೂಂದು ಬಿಟ್ರ್ಟಲ್ಲೋ ನನ್ನ ಕೂಸ್ನಾ’ ಅಬ್ಬರಿಸಿದ ಕೆಂಚ, ತನ್ನ ಹೆಗಲಮೇಲಿದ್ದ ವಲ್ಲಿ ತೆಗೆದು ರಮೇಶನ ಕತ್ತಿಗೆ ಬಿರ್ರನೆ ಬಿಗಿದ. ‘ನನ್ನ ಮಗಳು ಇಲ್ಲ ಅಂದಮ್ಯಾಲೆ ಇವನೂ ಈ ಅಮರ ಪ್ರೇಮಿ ನನ್ಮಗನೂ ಇರಬಾರ್‍ದು’ ವಲ್ಲಿ ಮತ್ತಷ್ಟು ಬಿಗಿ ಮಾಡಿದ. ಉಸಿರುಗಟ್ಟಿ ಸಾಯುವಂತಾದರು ರಮೇಶ ಯಾವ ಪ್ರತಿರೋಧವನ್ನೂ ತೋರಲಿಲ್ಲವಾಗಿ ಕೆರಳಿದ ಕುಮಾರಗೌಡ ಕೆಂಚಣ್ಣನ ಮೋರೆಗೆ ತನ್ನ ಟವಲ್‌ ಸುತ್ತಿ ಉಸಿರುಗಟ್ಟಿಸಿದ. ಕೆಂಚನ ತಮ್ಮ ಮುನಿಯ ಅದೆಲ್ಲಿದ್ದನೋ ಬಂದವನೆ ಬಡಿಗೆಯಿಂದ ಕುಮಾರಗಾಡನ ತಲಿಗೆ ಬಲವಾಗಿ ಬಾರಿಸಿದ. ರಕ್ತ ಚರಕ್ಕನೆ ಚಿಮ್ಮಿತು. ಕುಮಾರಗೌಡ, ‘ಸತ್ನೆಪ್ಪೋ’ ಅಂತ ಚೀರಿದ್ದು ಯಾರಿಗೂ ಕೇಳದಷ್ಟು ಕಿರಿಚಾಟ ಗದ್ದಲ ಗಲಭೆ ಕಣಿಗೆಗಳ ಸದ್ದು ಇಡೀ ಮೊಬ್ಬಳಿಯ ಬೆವರಿಳಿಸಿತು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್