Home / ಬಿ ಎಂ ಶ್ರೀ

Browsing Tag: ಬಿ ಎಂ ಶ್ರೀ

ನಾ ಸವೆದು ಸರಿಯುತಿಹೆನಮ್ಮ, ಬೇಸಗೆಯ ಮಂಜಿನಂತಮ್ಮ, ನಾ ಸವೆದು ಸರಿವೆನಮ್ಮ ನೆಮ್ಮುಗೆಯ ನಾಡ ಬಳಿಗೆ; ಅಲ್ಲಿ ಕೊರಗೆಂಬುದಿಲ್ಲಮ್ಮ, ಅಲ್ಲಿ ಚಳಿ ಛಿದ್ರವಿಲ್ಲಮ್ಮ, ಬಾಳು ಬಲ್ಸೊಗಸಮ್ಮ ನೆಮ್ಮುಗೆಯ ನಾಡಿನೊಳಗೆ, ನನ್ನಚ್ಚು ಮೆಚ್ಚು ನೀನಮ್ಮ, ನಿನ್ನ ಶ...

ಹೊಯ್, ಹೊಯ್, ಹೊಯ್, ಬೆಳತ ತಣ್ಗಲ್ಗಳಲಿ, ಕಡಲೇ! ನನ್ನೆದೆಯೊಳೇಳುತಿಹ ಬಗೆಗಳನು ನಾಲಗೆಗೆ ತಂದು ನಾ ನುಡಿಯಲಹುದೇ! ಏನೊಸಗೆ ತೊರೆಯರೆಳೆಯನಿಗೆ! ತಂಗಿಯೊಡನಾಡುತ್ತ ಕೂಗುತಿಹನೇ! ಏನೊಸಗೆ ಅಂಬಿಗರ ಮಗುಗೆ! ತೆರೆಯ ಮೇಲೋಡದಲಿ ಹಾಡುತಿಹನೇ! ಗಂಭೀರದಲಿ ನ...

ಕಂದ ಬಿದ್ದೆಯ ಎಂದು ಮುದ್ದಿಸಿ ನನಗೆ ಮರುಗುವರಿದ್ದರು; ಅಂದಿನೋದಿನ ಸುಖದ ದಿನದಲಿ ಜತೆಗೆ ಕುಣಿಯುವರಿದ್ದರು. ಎಲ್ಲ, ಎಲ್ಲಾ ಮಾಯವಾದುವು ಹಳೆಯ ಪಳಕೆಯ ಮುಖಗಳು. ಪರಿಸೆನೋಟವೊ, ಹೊಳೆಯಲೂಟವೊ, ಬಯಲಿನಾಟವೊ, ಪಾಟವೋ, ಇರುಳು ಮುಸುಕಿಯು ಮನೆಯ ನೆನೆಯದ ...

ವರುಷವಿಪ್ಪತ್ತಾಯಿತೀಗ ನಮ್ಮ ಗಗನವ ಮುಸುಕಿ ಮೇಘ, ಆಹ, ಇನ್ನಿದೆ ಕಡೆಯದಾಗ, ನನ್ನ, ಮೇರಿ! ಕಾಣೆ ನಿನ್ನಲಿ ಮೊದಲ ಹಮ್ಮ, ದಿನದಿನಕೆ ಬಲ ಕುಗ್ಗಿತಮ್ಮ, ನನ್ನ ಕೊರಗೇ ಕೊರೆದುದಮ್ಮ, ನನ್ನ ಮೇರಿ! ನಿನ್ನ ಸೂಜಿಗಳೊಮ್ಮೆ ಹೊಳೆದು ನನ್ನ ಕೆಲಸಕೆ ದುಡಿದು,...

ಹೊಸನಡತೆ ನೀನಾದೆ, ನಾ ಬಡವನಾದೆ! ಮೊನ್ನೆ, ಬಲುದಿನವಿಲ್ಲ, ನಿನ್ನೊಲುಮೆಯೆಲ್ಲ ತುಂಬಿ ತುಳುಕಾಡುವುದು ಮಡುವಾಗಿ ಮೀರಿ, ನಂಬಿ ನೆಮ್ಮದಿಯಾದ ನನ್ನೆದೆಯೊಳೂರಿ. ಊರುವುದು ಬೇರೊಂದನೆಣಿಸದೆಯೆ ಮನದೆ, ಬೀರಿದೆನು ಮಿಗಿಲಾಗಿ, ಸಾಕಿವನಿಗೆನದೆ. ಏನು ಸುಖದ...

ಹಳೆಯ ಕೆಳೆಯರ ಮರೆಯಬಹುದೇ ಹಳೆಯ ಕಾಲದ ಜನಗಳ? ಹಳೆಯ ಕೆಳೆಯರ ಮರೆಯಬಹುದೇ ಕಳೆದ ಹಿಂದಿನ ದಿನಗಳ? ಕಳೆದ ಹಿಂದಿನ ದಿನಗಳನ್ನು ನೆನೆ ದಿಂದು ಕಳೆಯುವ ದಿನಗಳ; ಕಲೆವ, ಹರಟುವ, ನಗುವ, ನೆನೆಯುವ ಕಳೆದ ಹಿಂದಿನ ದಿನಗಳ. ಹುಡುಗರಿಬ್ಬರು ತೋಪುಮರದಲಿ ಕೆಡವಿ...

ಏನು ಲೋಕವೋ! ಏನು ಜನ್ಮವೋ! ಏನು ಕಾಲವೋ! ಬೇಡವೋ! ಜೀವಮಾನದ ಕಡೆಯ ಹಂತವ ಹತ್ತಿ ಹಿಂದಕೆ ನೋಡಿ ನಡುಗುವೆ; ಯಾವ ಕಾಲಕೋ ಮರಳಿ ಬರುವುದು ಆದಿಕಾಲದ ಭೋಗಸಂಪದ? ಇಲ್ಲವೆಂದಿಗೂ, ಇನ್ನದೆಂದಿಗೂ, ಇಲ್ಲವೋ! ಇರುಳುಹಗಲೊಳು, ಹರುಷವೆನ್ನೊಳು, ತೊರೆದೆಹೋಯಿತೋ,...

ಬಿಸಿಲೋ ಬೆಳೆಯಿತು; ಬಾನೋ ತಿಳಿಯಿತು; ಸೆಳೆಸೆಳೆದೆಲೆಗಳು ಕುಣಿಯುವುವು; ಮುಸುಕಿದ ಮಂಜನು ಕಳೆಯುತ ಗಿರಿಗಳು ಬೆಳಗುವ ಹಗಲನು ಹೊದೆಯುವುವು; ಬಿರಿಯದ ಮೊಗ್ಗುಗಳೆಸಳನು ತೆರೆಯುತ; ಸುಳಿವುದು ತಂಪಿನ ನೆಲದುಸಿರು; ಬೆರೆದೊಂದೇ ಆನಂದದ ದನಿವೊಲು, ಹೊಳಲಲ...

ಬೇಗ ಪಡುವ ತೆರೆಯ ತುಳಿದು, ಇರುಳ ದೇವಿ, ಬಾ. ಮಬ್ಬುಗವಿಯೊಳೊಬ್ಬಳಿದ್ದು, ಹಗಲು ಸಮೆಯದಾಗ ಹೆಣೆದ ಸೊಗದ ಭಯದ ಕನಸ ಬೀರಿ, ಉಬ್ಬಿಸುತ್ತ, ಬೆದರಿಸುತ್ತ, ಬಾ, ಬೇಗ, ಬಾ. ಅರಿಲ ಹೂವು ನೆಯ್ದ ಕಪ್ಪು ದುಗುಲವುಟ್ಟು ಬಾ. ಹಗಲ ಕಣ್ಗೆ ಕುರುಳ ಕವಿಸಿ, ಮುತ...

ಅರೆ ಯಾವುದಿಲ್ಲಿ? ಜ್ವಲಿಸುವ ವಸಂತವಿದೆ. ತಿಳಿನೀಲಿ ಗಗನವಿದೆ, ಕೊರತೆ ಇನ್ನೆಲ್ಲಿ? ಜಗವೆಲ್ಲ ಬೆಳಗುವುದು – ಕಣ್ಗೆ ಪಾಳೆಲ್ಲ! ಸೊಗಸಾದ ಕಟ್ಟಿಹುದು – ಚಿತ್ರಪಟವಿಲ್ಲ! ಮಾವಿನೆಳತಳಿರೇನು, ಬಿರಿದ ಹೂವೇನು, ಮಲ್ಲಿಗೆಯ ಮನೆಯೇನು ಬರಿ...

1234...8

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...