ಮನದಿನಿಯ

ನನ್ನ ನಲ್ಲ ಹಮ್ಮುಬಿಮ್ಮಿನ ಒಡೆಯ ನಾ ನಕ್ಕರೂ ನಗಲಾರ ಬಿಗುಮಾನಕ್ಕೆ ಅವನೇ ಪತಿ ಸತಿಯಲ್ಲಿ ಅಕ್ಕರೆಯ ಸಕ್ಕರೆಯ ಪಾಕ ತೋರಿಕೆಗೆ ಮಾತ್ರ ಜಂಭದ ವಿವೇಕ ಸೋಗು ನುಡಿಗಾರನಲ್ಲ ಮರಳು ಮಾತುಗಾರನಲ್ಲ ನಿಷ್ಠುರತೆಯ ಕಟು ವ್ಯಕ್ತಿ...

ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ

ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ. ಕಲ್ಪನೆಯ ವ್ಯಾಪ್ತಿ ಸೀಮಾತೀತ....

ನಕ್ಕರೆ ನೋವಾಗುವುದು

ಎದೆಯೊಳಗೆ ಬೆಂಕಿ ಬಿದ್ದರೂ ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ ಹತ್ತಾರು ಪಾತ್ರಗಳು ನವಿಲುಗರಿ ಪೋಣಿಸಿಕೊಂಡು ಡಂಭ ಬಡಿಯುವ ಕೆಂಬೂತಗಳು ಹಾದು ಹೋಗುತ್ತಿವೆ....

ನಲ್ಲ

ನನಗೆ ನೀನು ಇಂದಿಗೂ ಒಗಟು ಬಿಡಿಸಲಾಗದ ಕಗ್ಗಂಟು ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ ಒಳಗೆ ತುಡಿತ ಮಿಡಿತ ತೋರಿಕೆಗೆ ಯಾಕೆ ಹಿಂದೆಗೆತ? ಮನಬೆರೆತರೂ ಬೆರೆಯದಂತೆ ಒಲಿದರೂ ಒಲಿಯದಂತೆ ನೀನೆಕೆ ಪದ್ಮಪತ್ರದಂತೆ? ಹಸಿವು ನನಗೂ...

ಐ‌ಎಸ್ ಐಎಸ್

ಅಲ್ಲಿ ನೆತ್ತರಿನ ಸ್ನಾನ ಮಾಂಸದಂಗಡಿಯೇ ಪುಣ್ಯಸ್ಥಾನ ಕೈಯಲ್ಲಿ ಕೋವಿ ಕರದ ಆಭರಣ ವ್ಯತಿರಿಕ್ತ ವ್ಯಾಖ್ಯಾನ ಧರ್ಮಕ್ಕೆ ನೀಡುವರು ಕುಲಬಂಧು ಬಾಂಧವರ ಕೊಚ್ಚಿ ಕೆಡವಿಹರು ಅವರು ಬೀಜಾಸುರರೇ ಇಲ್ಲ ರಕ್ತ ಪಿಪಾಸುಗಳೇ ತಿಗಣಿ, ಸೊಳ್ಳೆ ಉಂಬಳಿಗಿಂತ...

ಬಂದರಿನ ಅಲೆ

ಬಿಕ್ಕಳು ತಾಯಿ ಶರಧಿಯಾಳದಿ ಮುಖ ಹುಗಿಸಿ ಕಣ್ಣೀರ ಕೋಡಿ ಹಗುರ ಹೊರೆ ಸಾಗರ ಗರ್ಭ ಉಕ್ಕಿ ಸಿಡಿದು ಈಗ ನೀರನೊರೆ ಕೆನೆಕೆನೆಯ ಲಾಲಾರಸವಲ್ಲ, ಅದು ಲಾವಾ ಉಗುಳುತ್ತಿದೆ ಬೆಂಕಿ ಕೆಂಡ. ತಾಯ್ತನದ ಹಿರಿಮೆಯೆ ಹಾಗೆ...

ಮುಂಗಟ್ಟೆ

ಸೃಷ್ಟಿಯಾ ಕುಶಲತೆಗೆ ದೃಷ್ಟಿಯಾ ಪರಿಣತಿಯೂ ಬುವಿಭಾನು ಖಗಮಿಗದ ಅಖಂಡ ಕುಟೀರ. ಹೊಳೆಯೂರ ರಹದಾರಿ ಹರಿಯುವಳು ಕರಿಕಾಳಿ ಇಕ್ಕೆಲದ ವೃಕ್ಷನೆಲೆ ಮುಂಗಟ್ಟೆ ಪಕ್ಷಿಕಾಶಿ. ಮಲೆನಾಡ ವಿಪಿನದೊಳು ಒಕ್ಕೊರಲ ಗಟ್ಟಿದನಿ ಕಪ್ಪು ಬಿಳಿ ಕೆಂಪು ಬೂದು ಬಗೆಬಗೆಯ...

ತೆರೆದ ಪರದೆ

ಅದೊಂದು ಗಿಜಿಗಿಜಿ ಗೂಡು ಗಲಿಬಿಲಿ, ಗದ್ದಲ, ಅವಸರ ಧಾವಂತ ಪರಿಪರಿಯ ಪದಗಳಿಗೂ ಮೀರಿದ ಗಡಿಬಿಡಿ ಹತ್ತುವವರು, ಇಳಿಯುವವರು ಮಿಸ್ಸಾದವರು, ಮಿಸ್ಸು ಮಾಡಿಕೊಂಡವರು ತೆರೆದ ಪರದೆಯ ಮೇಲೆ ಚಿತ್ರದಂತೆ ಪಾಪಕ್ಕೆ ಹುಟ್ಟಿದ ಪಾಪು ಪಲ್ಲಟಗೊಂಡ ಬದುಕಿನ...

ಪ್ರಾಕಿನ ಬಯಕೆ

ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು...

ಅವಳಂತಿರಲು ಬಿಡಿ

ಸುತ್ತದಿರಿ ಸಂಕೋಲೆ ಅಂಗಾಂಗಗಳ ಮೇಲೆ ಹಾರಲಿ ಅವಳು ನಿಮ್ಮಂತೆ ಮುಗುದೆ. ಸ್ವಚ್ಛಂದತೆಯ ಆನಂದ ಪಡೆಯಲಿ ಬಿಡಿ ಇರಲಿ ಅವಳಿಗೂ ಕೊಂಚ ಎಡೆ ನತ್ತಿನಲಿ ಮೂಗುತಿ ಕಾಲಲ್ಲಿ ಉಂಗುರ ಖಡುಗ ಕೈಯಲ್ಲಿ ಬಳೆ ತಲೆಗೆ ಮಲ್ಲಿಗೆಯ...