ತಗಣಿಗಳೊಡನೆ ಮಹಾಯುದ್ಧ

ವೀರರೆಂಬವರಾರು ? ಶೂರರಿರುವವರಾರು ? ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ ಬಂದಿಹುದು ಮಹಾಯುದ್ಧದ ಮಹಾ ಉಸಿರು ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ ಮನೆ ಮನೆಗೂ ಮನ ಮನಗೂ ಹಾಹಾಕಾರ...

ಸದ್ಗುರುವಿಗೆ

೧ ನಿನ್ನ ಹೃದಯದಂಗಳೊಳಗೆ ಎನ್ನದೊಂದು ಅಂಗುಲಾ ಎನ್ನದೆಲ್ಲ ಹೃದಯ ಬೇಗೆ ನಿನ್ನ ಚರಣದೊಳು ಮಂಗಲಾ ೨ ಅದಾವ ಮಹಿಮೆಯಾ ಮಟ್ಟದಲಿ ಯಾವ ತೆರದಿ ನೀನಿರುವಿ ಆವದನ್ನರಿಯದವ ನಾನೇನು ಗೈಯಲಿ ಓ ಸದ್ಗುರುವೆ ಕೇಳೆನ್ನ ಮನವಿ...

ಮಳೆ

ನೀಲ ವ್ಯೋಮ ಶಾಮವಾಗಿ; ಮುತ್ತು ಕಾಳು ಉದುರಿ ಜಾರಿ ಹಸಿದು ಮೌನವಾದ ಜಗಕೆ ಮಾತು ಕಲಿಸಿತು ಗಗನ ಭೇರಿ ಧ್ವನಿಯ ಮಾಡಿ; ಮುಗಿಲು ಮುತ್ತಿ ಮಿಂಚುಕಾರಿ ಸಲಿಲ ಸೋಂಪು ವೀಣೆ ಮಿಡಿಯಿತು ರವಿಯ ಉರಿಯ...

ಗುರುಸಿದ್ಧರಾಜಯೋಗೀಂದ್ರರ ಲಿಂಗೈಕ್ಯ

ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ? ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ? ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು ಮಣ್ಣು ಕೊಟ್ಟಿಹ...

ಹಾರಲಿ ಹೃದಯ!

ಹಾರಲಿ ಎನ್ನಯ ಹೃದಯವು ಬೀಸಿ ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು ಭೂಮಿಯ ಭೇದಿಸಿ, ಗಗನವ ಛೇದಿಸಿ ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು ಮನಸಿನ ಓಟದಿ, ಮಿಂಚಿನ ನೋಟದಿ ಗಗನವನೇ ಇಣಕಿ;...

ವೃಷ್ಟಿ ಕಾಲ

ಗಗನ ಹರಿದು, ಭೂಮಿ ಮೆರೆದು; ಹಚ್ಚ ಹೊದಿಕೆ ಹೊದ್ದಿತು ಮುಗಿಲು ಮುತ್ತಿ; ಇಳೆಯನಪ್ಪಿ ಸಗ್ಗ ಸೋಗನ ಜೈಸಿತು ಕೃಷಿಯ ಕಾಮಧೇನು ತಾನು ಹರುಷದಿಂದ ಕರೆಯಿತು ಹಸಿದು ಬಿರಿದ ಧರೆಯ ಹೊಟ್ಟೆ ಹೊಳೆದು ಕಾಂತಿ ತಾಳಿತು...

ಸ್ಮಶಾನದಲ್ಲಿ!

ನೋಡಲ್ಲಿ ತಲೆಬುರುಡೆ ನೆಲದ ಮೇಲಲ್ಲಿ ! ಆಗಿಹುದು ಗೋಲ್ ಚಂಡು ಗೊಲ್ಲ ಬಾಲರಿಗೆಲ್ಲ. ಬೆಳೆದು ಬಾಳಿಹ ಅಸ್ತಿ ಅದೋ ನಾಯ ಬಾಯಲ್ಲಿ ! ಒಲವು ಗೆಲವಿನ ಬಾಳು ಮೂಕವಾಗಿಹುದಲ್ಲ ! ಓ ವೀರ ಕಾಣಿದೋ...

ಬಡಗಣ ಗಾಳಿ

ಬಡಗಣ ದೆಡೆಗೀಂ ತೆಂಕಣ ದೆಡೆಗೆ ಓಡುತಿದೆ ಗಾಳಿ ತಾ ಮಾಡುತಿದೆ ಧಾಳೀ ಕಣ್ಣಿಗೆ ಕಾಣದೇ ಮಾಯದಿ ಮುಸುಕುತ ಆಡುತಿದೆ ಗಾಳಿ ತಾ ಮಾಡುತಿದೇ ಧೂಳೀ ದಣಿದಿಹ ದೇಹಕೆ ತಂಪಿನ ಕಂಪನು ತುಂಬುತಿದೇ ಸುತ್ತೀ ಹರ್ಷವ...

ದ್ವಂದ್ವದಾಟ

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ ಗಗನ ಹೊಳೆದಿದೇ, ಮೇಘ ಮುತ್ತಿದೆ ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ ಕತ್ತಲಂತೆ ಬೆಳಕಂತೆ ಎರಡು ಕೂಡಿವೆ ತುತ್ತೊಂದೆಡೆ...

ಪಾರಿಜಾತ

ಇನಿತೊಂದು ವಾಸನೆಯ ನಿನಗಾರು ಇತ್ತರು ? ನಿನ್ನ ಕಂಡವರೆಲ್ಲರ ಕೆಳೆಬೆಳೆಸಿ ಸೆಳೆಯಲು ನಿನ್ನಯಾ ಮುಡಿಬಯಸುತಿರಲಿನಿಯರು ಉನ್ನತದಲಿಹ ಮೃಡ ಬಿಡದೆ ಕೊಂಡೊಯ್ವನು ನಿನ್ನಯಾ ಗಮಗಮಿಸುವಾ ಸೊಗಸನೀವ- ಸುತ್ತು ತುಂಬುತಿಹ ಪರಿಮಳವು ಅನಿಲನಾ ಒಡನೆ ಸುಳಿಸುಳಿದು ಬರುವಾಗ...