ತಗಣಿಗಳೊಡನೆ ಮಹಾಯುದ್ಧ

ವೀರರೆಂಬವರಾರು ? ಶೂರರಿರುವವರಾರು ?
ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ
ಬಂದಿಹುದು ಮಹಾಯುದ್ಧದ ಮಹಾ ಉಸಿರು
ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ

ಮನೆ ಮನೆಗೂ ಮನ ಮನಗೂ ಹಾಹಾಕಾರ
ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ
ಹೊಸೆದು ಹುರಿಮಾಡಿ ನಿಮ್ಮ ಮೀಸೆಯಾಕಾರ
ಖಡ್ಗ ಖಠಾರಿ ಢಾಲುಗಳೊಡನೆ ಮುಗಿಬೀಳಿ

ಸೊಡ್ಡು ಹೊಡೆಯಿರಿ ನೀವು ಕಾಳಗದ ಇದಿರು
ಮಿಂಚುವಾ ಖಡ್ಗದೊಡನೆ ಮಿಂಚು ನೀವಾಗಿ
ನಿಮ್ಮ ವೈರಿಗಳದೋ ಅಲ್ಲಿ ಅಡಗಿ ನಿಂತಿಹರು
ಕಾದಿಹರು ಕಾಳಗಕೆ; ಇರಿದು ಕೊಲ್ಲಿರಿ ರೇಗಿ

ಬಲುಜೋಕೆ; ಸಿಗರವರು ಬಹು ಬೇಗ
ಕಡಿದಾರು, ರಕ್ತ ಕುಡಿದಾರು! ಬಿಡಬೇಡಿರವರ
ನಿಲುವಿಗೆ ಕಿರಿದಾದರೂ ನಿಲುಕದಾ ವೇಗ
ಮೈಮರೆಯದೇ ಮುನ್ನುಗ್ಗಿ; ಹಿಡಿಯಲವರ

ಹಗಲು ದಾಳಿಗರಲ್ಲ; ರಾತ್ರಿವೀರರವರು
ನಿದ್ರಿಸದಿರಿ, ನುಸುಳಿ ಬಂದಾರು; ಬಿಡದೆ ಕಾಡ್ಯಾರು
ನಿಮ್ಮ ಮೇಲೇರಿ ಬರಬಹುದು ಅವರು
ಆಯಾಸ ಆಲಸ್ಯ ಆತುರವ ತಡೆಯಿರಿ ನೀವೆಲ್ಲರು

ಮನೆ ಮನೆಯ ನುಗ್ಯಾರು; ಬೀಡಾರ ಹಾಕ್ಯಾರು
ಗುಡಿಲು ಗುಂಡಾರ ಏನು; ಅರಮನೆ ಏನು
ಎಲ್ಲೆಡೆಗು ಹೊಕ್ಕಾರು; ಸುತ್ತೆಲ್ಲ ಮುತ್ಯಾರು
ಲೆಕ್ಕಿಸದೆ ಜನರ ನೋವು ದಣಿವುಗಳನು

ರಕ್ತ ಹೀರಿ ಕೆಂಪೇರಿದ ಜೀರಿಗೆ ಮುಖದವರು
ಏನವರ ಒನಪು ಒಯಾರ; ಸುತ್ತೆಲ್ಲ ಜೈಸ್ಯಾರ
ವಿಷಮದ್ದಿಗೂ ಸೋಲದ ರಿಪು ತಂಡದವರು
ಇವರ ಸಂಹಾರವರಿಯದ ನಮಗೆಲ್ಲ ಧಿಕ್ಕಾರ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುರಿಯಾಳು
Next post ನಮ್ಮ ಮನೆ ಹುಂಜ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…