Home / ಆತ್ಮದರ್ಶನ-ದೇಶಪಾಂಡೆ

Browsing Tag: ಆತ್ಮದರ್ಶನ-ದೇಶಪಾಂಡೆ

ಹರಿಯೆ ಹಗಲಿರುಳು ನಿನ್ನ ಧ್ಯಾನಿಸುವೆ ನನ್ನ ನಂಬಿಕೆ ಮಾತ್ರ ಹುಸಿಯಾಗದಿರಲಿ ಸ್ವಾರ್ಥ ವಂಚನೆಗಳಿಗೆ ನನ್ನ ಮನ ಹರಿದು ಮತ್ತೆ ಪ್ರಾಪಂಚಿಕ ವ್ಯಾಮೋಹದಿ ಹಸಿಯಾಗದಿರಲಿ ಹೆಜ್ಜೆ ಹೆಜ್ಜೆ ನಿನ್ನ ನೆನಪು ಗುನಿಗುನಿಸು ತಿರಲಿ ನಿಂತರೂ ನಡೆದಾಡಿದರೂ ನಿನ್ನ...

ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ ನೀನೇ ನನ್ನ ಮನದ ಸಂಚಾಲಕನು ನನ್ನ ಯ...

ಮಾನವ ನಿನ್ನ ಬಾಳು ನಶ್ವರವಾಗಿರಲು ಏಕೆ ನಿನ್ನಲ್ಲಿ ಸ್ವಾರ್ಥ ಬಂತು ನೀನು ಜನುಮ ಜನುಮಗಳಲ್ಲೂ ಹೀಗಿರಲು ಅಂಟಿಕೊಂಡಿತು ಏಕೆ ಕರ್ಮ ತಂತು ಮಾಯೆ ಮೋಹಗಳು ಭೂತವಾಗಿ ಕಾಡಿ ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು ಮತ್ತೆ ಮತ್ತೆ ನೀನು ಅರಿಯದೆ ಏಕೆ ಬೆಂಕಿ...

ಹರಿಯೆ ನಿನ್ನ ರೂಪ ಮರೆಸದಿರು ಎನಗೆ ನಿನ್ನ ತೊರೆದು ಚಣವು ನಾ ಬಾಳಲಾರೆ ಕಾಂಚನ ಕಾಮಿನಿ ಎನ್ನ ಮುಂದೆ ಪಸರಿ ನೀನು ಹಿಂದೆ ಸರಿದರೆ ನಾ ತಾಳಲಾರೆ ಜನುಮ ಜನುಮಗಳಲ್ಲೂ ಹೀಗೆಯೇ ಮಾಯೆಯಲಿ ಮೊರಹೋಗಿ ನಾ ಸೋತೆ ಮತ್ತೆ ಮತ್ತೆ ಅವುಗಳಲ್ಲಿ ಬೆಂದು ಬೆಂದು ರಾ...

ಮಾಘದ ಚಳಿಯಲ್ಲಿ ತನು ನಡು ನಡುಗುತ್ತಿರೆ ದೀಪನೆ ಬೆಚ್ಚನೆಯ ಉಸಿರು ನೀಡುವಂತೆ ಕಷ್ಟ ಕಷ್ಟಗಳ ಹೋರಾಟದಲ್ಲಿ ಸೋಲುತಿದೆ ಹರಿ ನಿನ್ನ ಕೃಪೆಯೊಂದೆ ಗೆಲುವು ತರುವಂತೆ ಹೆಜ್ಜೆ ಹೆಜ್ಜೆಗೂ ಬಾಳಿನಲ್ಲಿ ಅಪಾಯ ಆ ಅಪಾಯಗಳಿಗೆ ನೀನೆ ಉಪಾಯ ನಿನ್ನೊಂದು ಒಲವು ನ...

ಈ ನಶ್ವರದ ತನುವಿನಲಿ ಎಸೊಂದು ಆಸೆ ಹೆಜ್ಜೆ ಹೆಜ್ಜೆಗು ತುಂಬುತ್ತಿದೆ ಪಾಪದ ಪಾತ್ರೆ ಇಂದ್ರಿಯಗಳ ಸುಖಕ್ಕಾಗಿ ನಿತ್ಯ ಚಡಪಡಿಸಿ ಸ್ವಾರ್ಥ ಸಾಧನೆಗಳಿಂದ ಮಾಡಿದೆ ಜಾತ್ರೆ ಕಾಣದ ಮನಸು ಇದು ದಾರಿ ತಪ್ಪಿಸುತ್ತಿದೆ ಮೋಹಕ್ಕಾಗಿ ನಿತ್ಯ ನಿತ್ಯ ದುಡುಕುತ್ತ...

ಹರಿ ಜನುಮ ಜನುಮದಲ್ಲೂ ನಾ ಮಾಡಿದೆಷ್ಟೊ ಪಾಪ ಕೋಟಿ ಕೋಟಿ ಮಾಯೆ ಮಮತೆ ಮಮಕಾರದಲ್ಲಿ ಬೆಂದು ನಾನು ಮೆರೆದೆ ನನಗಿರದ ಸಾಟಿ ಮತ್ತೆ ನಿನ್ನೆದುರಿನಲಿ ನಾನೀಗ ನಿಂತು ಕೈ ಮುಗಿದು ಬೇಡುತ್ತಿರುವೆ ತಂದೆ ನನ್ನ ಪಾಪಗಳ ಪರಿಹರಿಸು ಹರಿಯೆ ನಾನು ಸಂಸಾರ ಬಾಣೆಲ...

ಹರಿ ನಿನ್ನ ನೋಡದೆ ನಾನು ಏನು ನೋಡಿದರೆ ಭಾಗ್ಯ ಚಣ ಚಣವು ಜನನಿಂದೆಗಳಲಿ ಬೆಂದು ಬಳಲಿದೆ ನಾ ನಿರ್ಭಾಗ್ಯ ತೋರುವುದಕ್ಕೆ ನುಡಿಸಿದವರು ಒಳಗೆ ಕಪಟ ಮತ್ತೆ ಸಂಚು ನಂಬಿ ನಂಬಿ ಬಾಳಿದರೆ ಒಳಗೆಲ್ಲ ನಡೆದಿದೆ ಒಳಸಂಚು ಈಗೊಮ್ಮೆ ನಾ ನಿತ್ಯ ಕೊರಗುವೆ ನಾನೇಕೆ...

ಹರಿ ನೀನು ನನ್ನ ಅಮರತ್ವದ ಸಿರಿ ನಿನ್ನೊಂದಿಗೆ ಜನ್ಮ ಜನ್ಮ ಬಂಧ ನಿನ್ನ ತೊರೆದು ಇನ್ನೊಂದು ಬಯಸಿದರೆ ಅದೆಲ್ಲವೂ ಎನ್ನ ಭವದ ಬಂಧ ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು ಅದುವೆ ಎನಗಿರಲಿ ದಿನರೋಜು ಸತ್ಯದತ್ತ ವಾಲಿ ಅಂತರಂಗಕ್ಕೆ ಜಾರಿ ನಾ ಮರೆ...

ಹರಿ ನಿನ್ನ ಕೃಪೆಯೊಂದು ಆಧಾರ ಅದುವೆ ಈ ಬಾಳಿನ ಸರ್ವ ಕಾಮ್ಯ ನಿನ್ನ ನೋಟವೊಂದೆ ಎನ್ನ ಕಾಯಲಿ ನಿನ್ನ ರೂಪವೇ ಎನಗೆ ನಿತ್ಯ ಗಮ್ಯ ಈ ಬದುಕು ನೀನಿಲ್ಲದ ಬರಡು ಎಲ್ಲಯದು ಸಂತಸ ನವ್ಯ ಚೈತ್ಯ ನೀನು ನನ್ನೊಂದಿಗೆ ಕೈ ನೀಡಿ ನಡೆಸು ನಾನಾಗುವೆನು ನಿನ್ನ ಪಾದ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...