ಹರಿಯೆ ನಿನ್ನ ರೂಪ ಮರೆಸದಿರು ಎನಗೆ
ನಿನ್ನ ತೊರೆದು ಚಣವು ನಾ ಬಾಳಲಾರೆ
ಕಾಂಚನ ಕಾಮಿನಿ ಎನ್ನ ಮುಂದೆ ಪಸರಿ
ನೀನು ಹಿಂದೆ ಸರಿದರೆ ನಾ ತಾಳಲಾರೆ
ಜನುಮ ಜನುಮಗಳಲ್ಲೂ ಹೀಗೆಯೇ
ಮಾಯೆಯಲಿ ಮೊರಹೋಗಿ ನಾ ಸೋತೆ
ಮತ್ತೆ ಮತ್ತೆ ಅವುಗಳಲ್ಲಿ ಬೆಂದು ಬೆಂದು
ರಾಮನು ಪರಕಿಸುವ ಅದೇ ಸೀತೆ
ಇನ್ನೆಷ್ಟು ಹೊತ್ತು ಈ ಕಣ್ಣು ಮುಚ್ಚಾಲೆ
ಇವುಗಳಿಂದ ನನ್ನ ಬಾಳು ಫಲಿಸದು
ಕರ್ಮಗಳೆಲ್ಲವೂ ಎನ್ನ ಪಾತಾಳಕ್ಕೆ ತೂರಿ
ನನ್ನೀ ಭಾವ ಮಾತ್ರ ದೇವ ಒಲಿಸದು
ಹರಿಯೆ ನಿನ್ನ ಕರುಣೆಯೇ ಎನ್ನ ಕಾಯ್ವದು
ಬೇಡ ಎನಗೆ ಸ್ವಾರ್ಥ ಆಸೆ ಮೋಹ
ನೀನೆ ಎನ್ನ ಜೊತೆಗಿದ್ದು ಕಾಪಾಡಿದ ಮೇಲೆ
ಬಾಳು ಧನ್ಯವಾಗ್ವದು ಮಾಣಿಕ್ಯ ವಿಠಲನ ಮೋಹ
*****